
ಪಿಟಿಐ
ಫುಟ್‌ಬಾಲ್
ಮಡಗಾಂವ್ (ಗೋವಾ): ಈಸ್ಟ್ ಬೆಂಗಾಲ್ ಎಫ್‌ಸಿ ಹಾಗೂ ಎಫ್‌ಸಿ ಗೋವಾ ತಂಡಗಳು ಎಐಎಫ್‌ಎಫ್ ಸೂಪರ್ ಕಪ್ ಫುಟ್‌ಬಾಲ್ ಟೂರ್ನಿಯಲ್ಲಿ ಪ್ರಶಸ್ತಿ ಸುತ್ತು ಪ್ರವೇಶಿಸಿದವು.
ಗುರುವಾರ ನಡೆದ ಸೆಮಿಫೈನಲ್ ಪಂದ್ಯಗಳಲ್ಲಿ ಈಸ್ಟ್ ಬೆಂಗಾಲ್ ತಂಡವು 3–1ರಿಂದ ಪಂಜಾಬ್ ಎಫ್‌ಸಿ ತಂಡವನ್ನು ಮಣಿಸಿದರೆ, ಹಾಲಿ ಚಾಂಪಿಯನ್ ಗೋವಾ ತಂಡವು 2–1ರಿಂದ ಮುಂಬೈ ಸಿಟಿ ಎಫ್‌ಸಿ ವಿರುದ್ಧ ರೋಚಕ ಜಯ ಸಾಧಿಸಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.