ADVERTISEMENT

ಬೆಂಗಳೂರು ಇಂಡಿಪೆಂಡೆಂಟ್‌ಗೆ ಗೆಲುವು

ಸೂಪರ್‌ ಡಿವಿಷನ್‌ ಫುಟ್‌ಬಾಲ್‌ ಲೀಗ್‌ ಚಾಂಪಿಯನ್‌ಷಿಪ್‌

​ಪ್ರಜಾವಾಣಿ ವಾರ್ತೆ
Published 3 ನವೆಂಬರ್ 2019, 17:55 IST
Last Updated 3 ನವೆಂಬರ್ 2019, 17:55 IST
ಬೆಂಗಳೂರು ಡ್ರೀಮ್‌ ಯುನೈಟೆಡ್‌ ಎದುರಿನ ಪಂದ್ಯದಲ್ಲಿ ಎಡಿಇ ತಂಡದ ಅನೂಪ್‌, ಗೋಲು ಗಳಿಸಲು ಪ್ರಯತ್ನಿಸಿದರು –ಪ್ರಜಾವಾಣಿ ಚಿತ್ರ
ಬೆಂಗಳೂರು ಡ್ರೀಮ್‌ ಯುನೈಟೆಡ್‌ ಎದುರಿನ ಪಂದ್ಯದಲ್ಲಿ ಎಡಿಇ ತಂಡದ ಅನೂಪ್‌, ಗೋಲು ಗಳಿಸಲು ಪ್ರಯತ್ನಿಸಿದರು –ಪ್ರಜಾವಾಣಿ ಚಿತ್ರ   

ಬೆಂಗಳೂರು: ಗೋಪಿ ಗಳಿಸಿದ ಎರಡು ಗೋಲುಗಳ ಬಲದಿಂದ ಬೆಂಗಳೂರು ಇಂಡಿಪೆಂಡೆಂಟ್‌ ಎಫ್‌ಸಿ ತಂಡ ಬೆಂಗಳೂರು ಜಿಲ್ಲಾ ಫುಟ್‌ಬಾಲ್‌ ಸಂಸ್ಥೆ (ಬಿಡಿಎಫ್‌ಎ) ಆಶ್ರಯದ ಸೂಪರ್‌ ಡಿವಿಷನ್‌ ಲೀಗ್‌ ಚಾಂಪಿಯನ್‌ಷಿಪ್‌ನ ಪಂದ್ಯದಲ್ಲಿ ಗೆದ್ದಿದೆ.

ಅಶೋಕನಗರದಲ್ಲಿರುವ ಬೆಂಗಳೂರು ಫುಟ್‌ಬಾಲ್‌ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಹಣಾಹಣಿಯಲ್ಲಿ ಇಂಡಿಪೆಂಡೆಂಟ್‌ 3–1 ಗೋಲುಗಳಿಂದ ಬೆಂಗಳೂರು ಈಗಲ್ಸ್‌ ಎಫ್‌ಸಿ ತಂಡವನ್ನು ಸೋಲಿಸಿತು.

ಒಂಬತ್ತನೇ ನಿಮಿಷದಲ್ಲಿ ಗೋಪಿ, ಇಂಡಿಪೆಂಡೆಂಟ್‌ ತಂಡದ ಖಾತೆ ತೆರೆದರು. 45+1ನೇ ನಿಮಿಷದಲ್ಲಿ ಸುಭಾಷ್‌ ಚೆಂಡನ್ನು ಗುರಿ ಮುಟ್ಟಿಸಿದರು. ಇದರ ಬೆನ್ನಲ್ಲೇ (46ನೇ ನಿಮಿಷ) ಗೋಪಿ ಮತ್ತೊಮ್ಮೆ ಕಾಲ್ಚಳಕ ತೋರಿದರು. ಹೀಗಾಗಿ ಇಂಡಿಪೆಂಡೆಂಟ್‌ ತಂಡ 3–0 ಮುನ್ನಡೆಯೊಂದಿಗೆ ವಿರಾಮಕ್ಕೆ ಹೋಯಿತು.

ADVERTISEMENT

ದ್ವಿತೀಯಾರ್ಧದಲ್ಲಿ ಉಭಯ ತಂಡಗಳು ಜಿದ್ದಾಜಿದ್ದಿನಿಂದ ಸೆಣಸಿದವು. 81ನೇ ನಿಮಿಷದಲ್ಲಿ ಗೋಲು ಹೊಡೆದ ಈಗಲ್ಸ್‌ ತಂಡದ ವಿಷ್ಣು, ಹಿನ್ನಡೆ ತಗ್ಗಿಸಲಷ್ಟೇ ಶಕ್ತರಾದರು.

ದಿನದ ಇನ್ನೊಂದು ಪಂದ್ಯದಲ್ಲಿ ಎಡಿಇ ಎಫ್‌ಸಿ 3–2 ಗೋಲುಗಳಿಂದ ಬೆಂಗಳೂರು ಡ್ರೀಮ್‌ ಯುನೈಟೆಡ್‌ ಎಫ್‌ಸಿ ತಂಡದ ವಿರುದ್ಧ ಗೆದ್ದಿತು.

ಎಡಿಇ ತಂಡದ ಸಿ.ಅನೂಪ್‌ (25ನೇ ನಿಮಿಷ), ಎಲ್‌. ಸ್ಟೀಫನ್‌ ರಾಜ್‌ಕಿರಣ್‌ (72) ಮತ್ತು ಬಿಬಿನ್‌ ಬಾಬು (78) ಗೋಲು ಹೊಡೆದರು.

ಡ್ರೀಮ್‌ ಯುನೈಟೆಡ್‌ ತಂಡದ ರಾಹುಲ್‌ ಆಚಾರ್ಯ (32) ಮತ್ತು ಉದಿತ್‌ ರಾಜಶೇಖರ್‌ (71) ತಲಾ ಒಮ್ಮೆ ಚೆಂಡನ್ನು ಗುರಿ ಮುಟ್ಟಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.