ಬೆಂಗಳೂರು: ತನ್ವಿ ಹನ್ಸ್ ಅವರು ಮಹಿಳೆಯರ ರಾಷ್ಟ್ರೀಯ ಫುಟ್‌ಬಾಲ್ ಚಾಂಪಿಯನ್‌ಷಿಪ್‌ನಲ್ಲಿ ಆಡುವ ರಾಜ್ಯ ತಂಡವನ್ನು ಮುನ್ನಡೆಸಲಿದ್ದಾರೆ.
ಕೇರಳದ ಕೋಯಿಕ್ಕೋಡ್‌ನಲ್ಲಿ ಇದೇ 28ರಿಂದ ಡಿಸೆಂಬರ್ 9ರ ವರೆಗೆ ಪಂದ್ಯಗಳು ನಡೆಯಲಿವೆ. 20 ಮಂದಿಯ ರಾಜ್ಯ ತಂಡವನ್ನು ರಾಜ್ಯ ಫುಟ್‌ಬಾಲ್ ಸಂಸ್ಥೆ ಗುರುವಾರ ಬಿಡುಗಡೆ ಮಾಡಿದೆ.
ಕರ್ನಾಟಕ ‘ಡಿ’ ಗುಂಪಿನಲ್ಲಿ ಸ್ಥಾನ ಗಳಿಸಿದ್ದು ಜಾರ್ಖಂಡ್, ಗೋವಾ ಮತ್ತು ಡೆಲ್ಲಿ ತಂಡಗಳು ಈ ಗುಂಪಿನಲ್ಲಿವೆ. ರಾಜ್ಯ ತಂಡ 29ರಂದು ಮೊದಲ ಪಂದ್ಯದಲ್ಲಿ ಜಾರ್ಖಂಡ್ ಎದುರು ಸೆಣಸಲಿದೆ. ಡಿಸೆಂಬರ್ ಒಂದರಂದು ದೆಹಲಿ ವಿರುದ್ಧ ಮತ್ತು ಮೂರರಂದು ಗೋವಾ ಎದುರು ತಂಡದ ಪಂದ್ಯಗಳು ನಡೆಯಲಿವೆ.
ತಂಡ: ತನ್ವಿ ಹನ್ಸ್ (ನಾಯಕಿ), ಕ್ರಿಸ್ಟ್ ಆ್ಯನ್ ಪಿಂಟೊ, ಐಶ್ವರ್ಯ ಎ, ಐಶ್ವರ್ಯ ಎಂ, ಇನಿಯ ಸೆಲ್ವಕುಮಾರಿ, ಎನ್. ಜಕಿಯಾ ಅಫ್ರೈನ್, ಜುಡಿತ್ ಸೊನಾಲಿ ಜಾನ್, ಸಮುಂದೀಶ್ವರಿ, ತಾರಾ ಆನಂದ್, ಡಯಾನ ಜೈರೆಮ್ಸಿಯಾಮಿ, ಮಯಂಗ್ಲಂಬಮ್ ಜೋಶಿಮಾ ದೇವಿ, ಕಾವ್ಯ ಪಿ, ಸಂಸ್ಕೃತಿ ಗುರಪ್ಪ, ಶಿಲ್ಪಾ ಎಚ್, ಕ್ಷೇತ್ರಿಮನ್ಯುಮ್ ಮಾರ್ಗರೆಟ್ ದೇವಿ, ಮಿಥಿಲಾ ರಮಣಿ, ಎಂ.ಪ್ರಿಯದರ್ಶಿನಿ, ಅಂಜು, ಪೂರ್ಣಿಮಾ ರಾವ್, ರುಬವತಿ ಡಿ
ಕೋಚ್: ಥಾಮಸ್ ಜೆ, ಸಹಾಯಕ ಕೋಚ್: ಶಾಂತಿ ಎಸ್; ಮ್ಯಾನೇಜರ್ ಮಮತಾ ಆರ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.