ADVERTISEMENT

ಮುಂಬೈ ಸಿಟಿಗೆ ವಿಕ್ರಂ ಪ್ರತಾಪ್ ಸಿಂಗ್

ಪಿಟಿಐ
Published 15 ಅಕ್ಟೋಬರ್ 2020, 21:30 IST
Last Updated 15 ಅಕ್ಟೋಬರ್ 2020, 21:30 IST

ಮುಂಬೈ: ಭಾರತ 20 ವರ್ಷದೊಳಗಿನವರ ಫುಟ್‌ಬಾಲ್ ತಂಡದ ಆಟಗಾರ ವಿಕ್ರಂ ಪ್ರತಾಪ್ ಸಿಂಗ್ ಅವರು ಇಂಡಿಯನ್ ಸೂಪರ್ ಲೀಗ್ ಟೂರ್ನಿಯಲ್ಲಿ ಆಡುವ ಮುಂಬೈ ಸಿಟಿ ಫುಟ್‌ಬಾಲ್ ಕ್ಲಬ್‌ಗೆ ಸೇರ್ಪಡೆಯಾಗಿದ್ದಾರೆ.

18 ವರ್ಷದ ವಿಕ್ರಂ ಕ್ಲಬ್‌ ಜೊತೆಗೆ 2023ರವರೆಗೆ ಒಪ್ಪಂದ ಮಾಡಿಕೊಂಡಿದ್ದಾರೆ.

ವಿಕ್ರಂ ಚಂಡೀಗಡ ಫುಟ್‌ಬಾಲ್ ಅಕಾಡೆಮಿಯಲ್ಲಿ ಯೂಥ್ ವಿಭಾಗದಲ್ಲಿ ಆಡುತ್ತಿದ್ದರು. 2018ರಲ್ಲಿ ಅವರು ಸೀನಿಯರ್ ತಂಡಕ್ಕೆ ಆಡಿದರು.

ADVERTISEMENT

ಸ್ಟ್ರೈಕರ್ ಆಗಿರುವ ವಿಕ್ರಂ, ದೇಶದಲ್ಲಿರುವ ಭರವಸೆಯ ಯುವ ಆಟಗಾರರಲ್ಲಿಪ್ರಮುಖರಾಗಿದ್ದಾರೆ.

17 ವರ್ಷದೊಳದಗಿನ ಮತ್ತು20 ವರ್ಷದೊಳಗಿವರವಿಭಾಗದಲ್ಲಿ ಭಾರತ ತಂಡವನ್ನುಪ್ರತಿನಿಧಿಸಿದ್ಧಾರೆ. ಎಎಫ್‌ಸಿ 16ವರ್ಷದೊಳಗಿನವರ ಚಾಂಪಿಯನ್‌ಷಿಪ್‌ನಲ್ಲಿ ಆಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.