ADVERTISEMENT

FIFA world Cup 2022 Qatar: ಫಿಫಾ ವಿಶ್ವಕಪ್‌ ಅಂಕಿ ಅಂಶ

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2022, 0:30 IST
Last Updated 20 ನವೆಂಬರ್ 2022, 0:30 IST
FIFA world Cup 2022 Qatar
FIFA world Cup 2022 Qatar   

18 ಕ್ಯಾರಟ್‌ ಚಿನ್ನದಿಂದ ತಯಾರಾಗಿರುವ ವಿಶ್ವಕಪ್ ಟ್ರೋಫಿಯು 36.8 ಸೆ.ಮೀ. ಎತ್ತರವಿದೆ. 6.14 ಕೆಜಿ ತೂಕವಿದೆ. ಈ ಬಾರಿಯ ಟ್ರೋಫಿಗಾಗಿ ಏಳು ದೇಶಗಳ ಪರಿಣತರು 53 ಮಾದರಿಗಳನ್ನು ಸಿದ್ಧಪಡಿಸಿದ್ದರು.

ವಿಶ್ವಕಪ್ ಟ್ರೋಫಿ ವಿಶೇಷವೇನು?

18 ಕ್ಯಾರಟ್‌ ಚಿನ್ನದಿಂದ ತಯಾರಾಗಿರುವ ವಿಶ್ವಕಪ್ ಟ್ರೋಫಿಯು 36.8 ಸೆ.ಮೀ. ಎತ್ತರವಿದೆ. 6.14 ಕೆಜಿ ತೂಕವಿದೆ. ಈ ಬಾರಿಯ ಟ್ರೋಫಿಗಾಗಿ ಏಳು ದೇಶಗಳ ಪರಿಣತರು 53 ಮಾದರಿಗಳನ್ನು ಸಿದ್ಧಪಡಿಸಿದ್ದರು. ಅಂತಿಮವಾಗಿ ಇಟಲಿಯ ಸಿಲ್ವಿಯೊ ಗ್ಯಾಜನಿಗಾ ಅವರು ಸಿದ್ಧಪಡಿಸಿದ ವಿನ್ಯಾಸವನ್ನು ಆಯ್ಕೆ ಮಾಡಲಾಯಿತು.

ADVERTISEMENT

ಫಿಫಾ ವಿಶ್ವಕಪ್ ಸಂಸ್ಥಾಪ‍ಕಜೂಲ್ಸ್ ರಿಮೆಟ್ ಗೌರವಾರ್ಥ, 1930ರಲ್ಲಿ ವಿನ್ಯಾಸಗೊಳಿಸಲಾದ ಮೊದಲ ಟ್ರೋಫಿಗೆ ಅವರ ಹೆಸರನ್ನೇ ಇಡಲಾಗಿತ್ತು.ಫ್ರೆಂಚ್ ಶಿಲ್ಪಿ ಅಬೆಲ್ ಲಾಫ್ಲೂರ್ಈ ಟ್ರೋಫಿಯನ್ನು ವಿನ್ಯಾಸಗೊಳಿಸಿದ್ದರು. 1974ರಿಂದ ಫಿಫಾ ವಿಶ್ವಕಪ್ ಟ್ರೋಫಿ ಎಂದು ಬದಲಾಯಿಸಲಾಯಿತು. ಇಬ್ಬರು ವ್ಯಕ್ತಿಗಳು ಭೂಮಿಯ ಮಾದರಿಯನ್ನು ಹೊತ್ತುಕೊಂಡಿರುವ ಚಿತ್ರ ಟ್ರೋಫಿಯ ಮೇಲಿದೆ. ವಿಶ್ವಕಪ್‌ನ ಮೂಲ ಟ್ರೋಫಿಯನ್ನು ವಿಜೇತರಿಗೆ ನೀಡುವುದಿಲ್ಲ. ಹೊಸ ನಿಯಮಗಳ ಅನ್ವಯ ಅದು ಫಿಫಾದ ಬಳಿಯೇ ಉಳಿಯುತ್ತದೆ. ಬದಲಾಗಿ ಟೂರ್ನಿ ವಿಜೇತರಿಗೆ ಟ್ರೋಫಿಯ ಚಿನ್ನಲೇಪಿತ ಪ್ರತಿಕೃತಿಯನ್ನು ನೀಡಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.