ADVERTISEMENT

ಕೊರೊನಾ ಹಾವಳಿ | ರಾಷ್ಟ್ರೀಯ ಕ್ರೀಡಾಕೂಟದ ಮೇಲೆ ಕರಿಛಾಯೆ

ಪಿಟಿಐ
Published 29 ಮೇ 2020, 2:28 IST
Last Updated 29 ಮೇ 2020, 2:28 IST
   

ನವದೆಹಲಿ: ಕೊರೊನಾ ಹಾವಳಿಯು ರಾಷ್ಟ್ರೀಯ ಕ್ರೀಡಾಕೂಟದ ಮೇಲೆ ಕರಿನೆರಳು ಬೀರಿದೆ. ಈಗಾಗಲೇ ವಿಳಂಬವಾಗಿದ್ದು ಕೊನೆಗೆ ಅಕ್ಟೋಬರ್–ನವೆಂಬರ್‌ನಲ್ಲಿ ನಡೆಸಲು ನಿರ್ಧರಿಸಲಾಗಿದ್ದ ಕೂಟವನ್ನು ಗುರುವಾರ ಅನಿರ್ದಿಷ್ಟ ಅವಧಿಗೆ ಮುಂದೂಡಲಾಗಿದೆ. ಕೂಟ ಗೋವಾದಲ್ಲಿ ನಡೆಯಬೇಕಾಗಿತ್ತು.

ಅಕ್ಟೋಬರ್ 20ರಿಂದ ನವೆಂಬರ್ ನಾಲ್ಕರವರೆಗೆ ಕೂಟ ನಡೆಸಲು ನಿರ್ಧರಿಸಲಾಗಿತ್ತು. ನಿಗದಿಯಾದ ದಿನಗಳಲ್ಲೇ ಕೂಟವನ್ನು ಆಯೋಜಿಸಬೇಕು ಎಂದು ಭಾರತ ಒಲಿಂಪಿಕ್ಸ್ ಸಂಸ್ಥೆಯು ಗೋವಾ ಸರ್ಕಾರಕ್ಕೆ ತಿಳಿಸಿತ್ತು. ಆದರೆ ಕೋವಿಡ್ ಬಾಧಿತರ ಸಂಖ್ಯೆ ದಿನೇ ದಿನೇ ಏರುತ್ತಿರುವುದರಿಂದ ಮುಂದೂಡಲು ತೀರ್ಮಾನಿಸಲಾಯಿತು.

‘ರಾಷ್ಟ್ರೀಯ ಕ್ರೀಡಾಕೂಟದ ಆಯೋಜನಾ ಸಮಿತಿಯು ಕೂಟವನ್ನು ಮುಂದೂಡಿರುವುದಾಗಿ ತಿಳಿಸಿದೆ’ ಎಂದು ಗೋವಾ ಉಪಮುಖ್ಯಮಂತ್ರಿ ಹಾಗೂ ಕ್ರೀಡಾ ಸಚಿವ ಮನೋಹರ್ ಅಜಗಾಂವ್ಕರ್ ವಿವರಿಸಿದ್ದಾರೆ. ಕಳೆದ ಬಾರಿಯ ರಾಷ್ಟ್ರೀಯ ಕ್ರೀಡಾಕೂಟ 2015ರಲ್ಲಿ ಕೇರಳದಲ್ಲಿ ನಡೆದಿತ್ತು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.