ADVERTISEMENT

ಮನದೀಪ್‌, ಅಂಕಿತಾಗೆ ‘ಅರ್ಜುನ’: ಶಿಫಾರಸು

ರಾಷ್ಟ್ರೀಯ ಕ್ರೀಡಾ ಪ್ರಶಸ್ತಿ: ಪಿಎಸ್‌ಯು ಉದ್ಯೋಗದಲ್ಲಿರುವ 10 ಕ್ರೀಡಾಪಟುಗಳ ಆಯ್ಕೆ

ಪಿಟಿಐ
Published 31 ಅಕ್ಟೋಬರ್ 2021, 11:59 IST
Last Updated 31 ಅಕ್ಟೋಬರ್ 2021, 11:59 IST
ಅಂಕಿತಾ ರೈನಾ– ಪ್ರಜಾವಾಣಿ ಚಿತ್ರ
ಅಂಕಿತಾ ರೈನಾ– ಪ್ರಜಾವಾಣಿ ಚಿತ್ರ   

ನವದೆಹಲಿ: ತೈಲ ಹಾಗೂ ನೈಸರ್ಗಿಕ ಅನಿಲ ನಿಗಮ (ಒಎನ್‌ಜಿಸಿ) ಮತ್ತು ಭಾರತೀಯ ತೈಲ ನಿಗಮ (ಐಒಸಿ) ಸೇರಿದಂತೆ ಕೇಂದ್ರ ಸಾರ್ವಜನಿಕ ವಲಯದ ಉದ್ಯಮಗಳಲ್ಲಿ ಉದ್ಯೋಗದಲ್ಲಿರುವ 10 ಕ್ರೀಡಾಪಟುಗಳನ್ನು ಪ್ರತಿಷ್ಠಿತ ರಾಷ್ಟ್ರೀಯ ಕ್ರೀಡಾ ಪ್ರಶಸ್ತಿಗಳಿಗೆ ಶಿಫಾರಸು ಮಾಡಲಾಗಿದೆ.

ಹಾಕಿ ಕೋಚ್‌ ಸಂದೀಪ್ ಸಂಗ್ವಾನ್ ಮತ್ತು ಚೆಸ್ ಆಟಗಾರ ಅಭಿಜೀತ್ ಕುಂಟೆ ಅವರನ್ನು ದ್ರೋಣಾಚಾರ್ಯ ಪ್ರಶಸ್ತಿಗೆ ಶಿಫಾರಸು ಮಾಡಲಾಗಿದ್ದರೆ, ಟೆನಿಸ್ ಆಟಗಾರ್ತಿ ಅಂಕಿತಾ ರೈನಾ, ಅಥ್ಲೀಟ್‌ ಅರ್ಪಿಂದರ್‌ ಸಿಂಗ್‌, ಹಾಕಿ ಆಟಗಾರರಾದ ಗುರ್ಜಂತ್ ಸಿಂಗ್‌, ಸುಮಿತ್‌, ಮನದೀಪ್ ಸಿಂಗ್‌, ದಿಲ್‌ಪ್ರೀತ್‌ ಸಿಂಗ್‌, ಸಿಮ್ರನ್‌ಜೀತ್ ಸಿಂಗ್‌ ಹಾಗೂ ಹಾರ್ದಿಕ್ ಸಿಂಗ್‌ ಅವರನ್ನು ಅರ್ಜುನ ಪ್ರಶಸ್ತಿಗೆ ಹೆಸರಿಸಲಾಗಿದೆ.

ಅಖಿಲ ಭಾರತ ಸಾರ್ವಜನಿಕ ವಲಯದ ಕ್ರೀಡಾ ಅಭಿವೃದ್ಧಿ ಮಂಡಳಿಯ (ಎಐಪಿಎಸ್‌ಎಸ್‌ಪಿಬಿ) ಕಾರ್ಯಕಾರಿ ಉಪಾಧ್ಯಕ್ಷ ಸುಭಾಶ್ ಕುಮಾರ್ ಈ ವಿಷಯ ತಿಳಿಸಿದ್ದಾರೆ.

ADVERTISEMENT

ಹಾಕಿ ಕೋಚ್‌ಸಂದೀಪ್ ಸಂಗ್ವಾನ್, ಆಟಗಾರರಾದ ಗುರ್ಜಂತ್‌, ಸುಮಿತ್, ಮನದೀಪ್‌, ಅಥ್ಲೀಟ್‌ ಅರ್ಪಿಂದರ್‌ ಹಾಗೂ ಅಂಕಿತಾ ರೈನಾ ಒಎನ್‌ಜಿಸಿ ಉದ್ಯೋಗಿಗಳಾದರೆ, ದಿಲ್‌ಪ್ರೀತ್‌, ಸಿಮ್ರನ್‌ಜೀತ್‌, ಹಾರ್ದಿಕ್ ಸಿಂಗ್‌ ಹಾಗೂ ಅಭಿಜೀತ್‌ ಐಒಸಿಯಲ್ಲಿ ಕಾರ್ಯನಿರ್ವಹಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.