ADVERTISEMENT

ಹಾಕಿ: ಪಂಚದೇಶ ಟೂರ್ನಿಗೆ ಸಂಭವನೀಯ ತಂಡ ಆಯ್ಕೆ

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2023, 12:54 IST
Last Updated 28 ನವೆಂಬರ್ 2023, 12:54 IST
ಪಿ.ಆರ್. ಶ್ರೀಜೇಶ್
ಪಿ.ಆರ್. ಶ್ರೀಜೇಶ್   

ನವದೆಹಲಿ: ಮುಂದಿನ ವರ್ಷ ನಡೆಯಲಿರುವ ಪ್ಯಾರಿಸ್ ಒಲಿಂಪಿಕ್ ಕೂಟದಲ್ಲಿ ಸ್ಪರ್ಧಿಸುವ ಭಾರತ ತಂಡದ ಆಯ್ಕೆಗೆ ಹಾಕಿ ಇಂಡಿಯಾ ಮುನ್ನುಡಿ ಬರೆದಿದೆ. 

ಸ್ಪೇನ್‌ನಲ್ಲಿ ನಡೆಯಲಿರುವ ಪಂಚದೇಶಗಳ ಸರಣಿಯಲ್ಲಿ ಆಡಲು  39 ಆಟಗಾರರ ಸಂಭವನೀಯರ ತಂಡವನ್ನು ಆಯ್ಕೆ ಮಾಡಲಾಗಿದೆ. ಇದಕ್ಕಾಗಿ ನಡೆಯಲಿರುವ ರಾಷ್ಟ್ರೀಯ ಶಿಬಿರದಲ್ಲಿ ಈ ತಂಡವು ಭಾಗವಹಿಸಲಿದೆ. ನಂತರ ಅಂತಿಮ 20ರ ತಂಡವನ್ನು ಆಯ್ಕೆ ಮಾಡಲಾಗುವುದು.

ಟೋಕಿಯೊ ಒಲಿಂಪಿಕ್ ಪದಕ ವಿಜೇತ ತಂಡದ ಗೋಲ್‌ಕೀಪರ್ ಪಿ.ಆರ್. ಶ್ರೀಜೇಶ್ ಮನದೀಪ್ ಸಿಂಗ್ ಹಾಗೂ ಮನ್‌ಪ್ರೀತ್ ಸಿಂಗ್ ಅವರೂ ತಂಡದಲ್ಲಿದ್ದಾರೆ.

ADVERTISEMENT

ಮುಂಬರುವ ಒಲಿಂಪಿಕ್ಸ್‌ ಸಿದ್ಧತೆ ಇಲ್ಲಿಂದಲೇ ಆರಂಭವಾಗಲಿದೆ ಎಂದು ತಂಡದ ಕೋಚ್ ಕ್ರೇಗ್ ಫುಲ್ಟಾನ್ ಕೂಡ ಇಂಗಿತ ವ್ಯಕ್ತಪಡಿಸಿದ್ದಾರೆ.

ಸಂಭವನೀಯರ ತಂಡ

ಗೋಲ್‌ಕೀಪರ್ಸ್: ಪಿ.ಆರ್. ಶ್ರೀಜೇಶ್, ಕೃಷನ್ ಬಹಾದ್ದೂರ್ ಪಾಠಕ್,  ಸೂರಜ್ ಕರ್ಕೆರಾ, ಪವನ್ , ಪ್ರಶಾಂತ್ ಕುಮಾರ್ ಚವ್ಹಾಣ.

ಡಿಫೆಂಡರ್ಸ್: ಜರ್ಮನ್‌ಪ್ರೀತ್ ಸಿಂಗ್, ಸುರೇಂದರ್ ಕುಮಾರ್, ಹರ್ಮನ್‌ಪ್ರೀತ್ ಸಿಂಗ್, ವರುಣಕುಮಾರ್, ಅಮಿತ್ ರೋಹಿದಾಸ್, ಗುರಿಂದರ್ ಸಿಂಗ್, ಜುಗರಾಜ್ ಸಿಂಗ್, ಮನದೀಪ್ ಮೋರ್, ನೀಲಂ ಸಂಜೀವ ಎಸ್, ಸಂಜಯ್, ಯಶದೀಪ್ ಸಿವಾಚ್, ದಿಪ್ಸನ್ ಟಿರ್ಕಿ, ಮಂಜೀತ್.

ಮಿಡ್‌ಫೀಲ್ಡರ್‌: ಮನಪ್ರೀತ್ ಸಿಂಗ್, ಹಾರ್ದಿಕ್ ಸಿಂಗ್, ವಿವೇಕ್ ಸಾಗರ್ ಪ್ರಸಾದ್, ಮೊಯಿರಂಗಥೆಮ್ ರವಿಚಂದ್ರ ಸಿಂಗ್, ಶಂಶೇರ್ ಸಿಂಗ್, ನೀಲಕಂಠ ಶರ್ಮಾ, ರಾಜಕುಮಾರ್ ಪಾಲ್, ಸುಮಿತ್, ಆಕಾಶದೀಪ್ ಸಿಂಗ್, ಗುರ್ಜಂತ್ ಸಿಂಗ್, ಮೊಹಮ್ಮದ್ ರಾಹೀಲ್ ಮೌಸಿನ್, ಮಣಿಂದರ್ ಸಿಂಗ್.

ಫಾರ್ವರ್ಡ್: ಎಸ್. ಕಾರ್ತಿ, ಮನದೀಪ್ ಸಿಂಗ್, ಲಲಿತ್ ಕುಮಾರ್ ಉಪಾಧ್ಯಾಯ, ಅಭಿಷೇಕ್ ದಿಲ್‌ಪ್ರೀತ್ ಸಿಂಗ್, ಸುಖಜೀತ್ ಸಿಂಗ್, ಸಿಮ್ರನ್‌ಜೀತ್ ಸಿಂಗ್, ಶಿಲಾನಂದ ಲಕ್ರಾ, ಪವನ್ ರಾಜ್‌ಭರ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.