ADVERTISEMENT

ಹಾಕಿ: ಏಜೀಸ್‌ ತಂಡಕ್ಕೆ ಜಯ

​ಪ್ರಜಾವಾಣಿ ವಾರ್ತೆ
Published 23 ಜುಲೈ 2024, 17:34 IST
Last Updated 23 ಜುಲೈ 2024, 17:34 IST
ಹಾಕಿ ಇಂಡಿಯಾ ಲಾಂಛನ
ಹಾಕಿ ಇಂಡಿಯಾ ಲಾಂಛನ   

ಬೆಂಗಳೂರು: ಏಜೀಸ್‌ ತಂಡವು  ಕರ್ನಾಟಕ ಹಾಕಿ ಲೀಗ್‌ ಚಾಂಪಿಯನ್‌ಷಿಪ್‌ 8ನೇ ಆವೃತ್ತಿ ಟೂರ್ನಿಯ ಪಂದ್ಯದಲ್ಲಿ 4–2ರಿಂದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ (ಡಿವೈಇಎಸ್‌) 'ಬಿ' ತಂಡವನ್ನು ಸೋಲಿಸಿತು. 

ಎಜಿಒಆರ್‌ಸಿ ರಹೀಲ್‌ (29ನೇ ನಿ), ನಿತಿನ್‌ ತಿಮ್ಮಯ್ಯ (38ನೇ ನಿ), ಜಯಪ್ರಕಾಶ (54ನೇ ನಿ), ಹರೀಶ್‌ ಮುತಗಾರ್‌ (57ನೇ ನಿ) ತಲಾ ಒಂದು ಗೋಲು ದಾಖಲಿಸಿದರು.

ಡಿವೈಇಎಸ್‌ ತಂಡದ ಪರ ಕಿರಣ್‌ಕುಮಾರ್‌ (18ನೇ ನಿ), ಹುಮೈಝ್‌ (26ನೇ ನೀ) ಗೋಲು ಗಳಿಸಿದರು.

ADVERTISEMENT

ದಿನ ಮತ್ತೊಂದು ಪಂದ್ಯದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ (ಡಿವೈಇಎಸ್‌) ‘ಎ’ ತಂಡವು 5–1 ಗೋಲುಗಳ ಅಂತರದಲ್ಲಿ ಬಾಯ್ಸ್‌ ಸ್ಪೋರ್ಟ್ಸ್‌ ಕಂಪನಿ ಎಂಇಜಿ ತಂಡವನ್ನು ಸೋಲಿಸಿತು.

ಡಿವೈಇಎಸ್‌ ‘ಎ’ ತಂಡದ ಪರ ಭರತ್‌ ಎಂ.ಕೆ. (18ನೇ ನಿ), ದೀಕ್ಷಿತ್‌ ಎ.ಎಚ್‌.(36ನೇ ನಿ), ರಾಹುಲ್‌ ಸಿ.ಜೆ.(44ನೇ ನಿ), ಹರ್ಷ ಎಚ್‌.ಆರ್‌.(46ನೇ ನಿ), ಮಜ್ಜಿ ಗಣೇಶ್‌ (49 ನೇ ನಿ) ತಲಾ ಒಂದು ಗೋಲು ಗಳಿಸಿದರು. ಎಂಇಜಿ ತಂಡದ ಪರ ನಿತೇಶ್‌ ಶರ್ಮಾ (10ನೇ ನಿ) ಏಕೈಕ ಗೋಲು ದಾಖಲಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.