ADVERTISEMENT

ವಿಶ್ವ ಆರ್ಚರಿ ಅಥ್ಲೀಟ್ಸ್ ಸಮಿತಿಗೆ ಅಭಿಷೇಕ್ ಆಯ್ಕೆ

ಪಿಟಿಐ
Published 23 ಸೆಪ್ಟೆಂಬರ್ 2021, 15:42 IST
Last Updated 23 ಸೆಪ್ಟೆಂಬರ್ 2021, 15:42 IST

ಯಾಂಗ್ಟನ್, ಅಮೆರಿಕ: ಭಾರತದ ಕಾಂಪೌಂಡ್ ಆರ್ಚರಿ ಪಟು ಅಭಿಷೇಕ್ ವರ್ಮಾ ಅವರು ವಿಶ್ವ ಆರ್ಚರಿಯ ಅಥ್ಲೀಟ್ಸ್ ಸಮಿತಿಗೆ ಆಯ್ಕೆಯಾಗಿದ್ದಾರೆ. ಅವರ ಅಧಿಕಾರ ಅವಧಿ ನಾಲ್ಕು ವರ್ಷದ್ದಾಗಿರುತ್ತದೆ.

ವಿಶ್ವಕಪ್‌ನಲ್ಲಿ ಮೂರು ಬಾರಿ ಚಾಂಪಿಯನ್ ಆಗಿರುವ ಅಭಿಷೇಕ್ ಅವರಿಗೆ ಈಗ32 ವರ್ಷ. ರಷ್ಯಾದ ನತಾಲಿಯಾ ಅವ್ದೀವಾ ಕೂಡ ಜಯ ಗಳಿಸಿದರು. ನತಾಲಿಯಾ ಮಹಿಳಾ ವಿಭಾಗದಲ್ಲಿ ಹಾಲಿ ವಿಶ್ವ ಚಾಂಪಿಯನ್ ಆಗಿದ್ದಾರೆ. ಇಲ್ಲಿ ನಡೆಯುತ್ತಿರುವ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಂಡಿರುವ ಆರ್ಚರ್‌ಗಳು ಮತದಾನದಲ್ಲಿ ಪಾಲ್ಗೊಂಡಿದ್ದರು.

ಅಭಿಷೇಕ್ ಆಯ್ಕೆ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದ ಏಕೈಕ ಪುರುಷ ಅಭ್ಯರ್ಥಿಯಾಗಿದ್ದರು. ನತಾಲಿಯಾ ಜೊತೆ ಜರ್ಮನಿಯ ಜೆನೈನ್ ಮೇಸ್ನೆರ್ ಕೂಡ ಸ್ಪರ್ಧಿಸಿದ್ದರು. ನತಾಲಿಯಾ 69 ಶೇಕಡಾ ಮತಗಳನ್ನು ಪಡೆದುಕೊಂಡರು. ಸಮಿತಿಗೆ ನವೊಮಿ ಫೊಲ್ಕರ್ಡ್‌ ಅಧ್ಯಕ್ಷರಾಗಿದ್ದು ಜೆಫ್‌ ವ್ಯಾನ್ ಬರ್ಗ್‌ ಮತ್ತು ಕ್ರಿಸ್ಟಲ್ ಗೋವಿನ್ ಸದಸ್ಯರಾಗಿದ್ದಾರೆ.

ADVERTISEMENT

ಪೋಲೆಂಡ್‌ (2015), ಶಾಂಘೈ (2018) ಮತ್ತು ಪ್ಯಾರಿಸ್‌ (2021) ವಿಶ್ವಕಪ್‌ಗಳಲ್ಲಿ ಚಿನ್ನ ಗೆದ್ದಿರುವ ಅಭಿಷೇಕ್‌ ಏಷ್ಯನ್ ಗೇಮ್ಸ್‌ನಲ್ಲೂ ಮೊದಲಿಗರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.