ADVERTISEMENT

ಕೊಕ್ಕೊ: ಅದಾನಿ, ಜಿಎಂಆರ್‌ನಿಂದ ಫ್ರಾಂಚೈಸಿ ಖರೀದಿ

​ಪ್ರಜಾವಾಣಿ ವಾರ್ತೆ
Published 6 ಜೂನ್ 2022, 14:19 IST
Last Updated 6 ಜೂನ್ 2022, 14:19 IST

ನವದೆಹಲಿ (ಪಿಟಿಐ): ದೇಸಿ ಕ್ರೀಡೆ ಕೊಕ್ಕೊಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಅದಾನಿ ಮತ್ತು ಜಿಎಂಆರ್‌ ಗ್ರೂಪ್‌ ಈ ವರ್ಷ ಆರಂಭವಾಗಲಿರುವ ’ಅಲ್ಟಿಮೇಟ್‌ ಕೊಕ್ಕೊ ಲೀಗ್‌‘ನಲ್ಲಿ ಕ್ರಮವಾಗಿ ಗುಜರಾತ್‌ ಮತ್ತು ತೆಲಂಗಾಣ ಫ್ರಾಂಚೈಸಿಗಳನ್ನು ಖರೀದಿಸಿವೆ.

ಡಾಬರ್‌ ಸಮೂಹದ ಮುಖ್ಯಸ್ಥ ಅಮಿತ್‌ ಬರ್ಮನ್‌ ಅವರು ಕೊಕ್ಕೊ ಫೆಡರೇಷನ್‌ ಆಫ್‌ ಇಂಡಿಯಾ (ಕೆಕೆಎಫ್‌ಐ) ಸಹಯೋಗದಲ್ಲಿ ಐಪಿಎಲ್‌ ಮಾದರಿಯಲ್ಲಿ ಫ್ರಾಂಚೈಸಿ ಆಧಾರಿತ ಕೊಕ್ಕೊ ಲೀಗ್‌ ಆರಂಭಿಸಲು ನಿರ್ಧರಿಸಿದ್ದಾರೆ.

’ಕಬಡ್ಡಿ ಮತ್ತು ಬಾಕ್ಸಿಂಗ್‌ ಲೀಗ್‌ಗಳ ಜತೆ ನಾವು ಈಗಾಗಲೇ ಕೈಜೋಡಿಸಿದ್ದೇವೆ. ದೇಸಿ ಕ್ರೀಡೆ ಕೊಕ್ಕೊಗೆ ಉತ್ತೇಜನ ನೀಡಲು ಆರಂಭವಾಗಲಿರುವ ಅಲ್ಟಿಮೇಟ್‌ ಕೊಕ್ಕೊ ಲೀಗ್‌ ಕೂಡಾ ಯಶಸ್ಸಿನ ಹಾದಿಯಲ್ಲಿ ಮುನ್ನಡೆಯುವ ವಿಶ್ವಾಸ ನಮ್ಮದು‘ ಎಂದು ಅದಾನಿ ಎಂಟರ್‌ಪ್ರೈಸಸ್‌ನ ನಿರ್ದೇಶಕ ಪ್ರಣವ್‌ ಅದಾನಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.