ADVERTISEMENT

ಗಾಲ್ಫ್‌: ಅದಿತಿಗೆ 63ನೇ ಸ್ಥಾನ

ಪಿಟಿಐ
Published 29 ಅಕ್ಟೋಬರ್ 2023, 14:30 IST
Last Updated 29 ಅಕ್ಟೋಬರ್ 2023, 14:30 IST
Venugopala K.
   Venugopala K.

ಕ್ವಾಲಾಲಂಪುರ: ಭಾರತದ ಅದಿತಿ ಅಶೋಕ್ ಅವರು ಭಾನುವಾರ ಕೊನೆಗೊಂಡ ಎಲ್‌ಪಿಜಿಎ ಮಲೇಷ್ಯಾ ಲೇಡಿಸ್‌ ಗಾಲ್ಫ್‌ ಟೂರ್ನಿಯಲ್ಲಿ 63ನೇ ಸ್ಥಾನ ಪಡೆದರು.

ಬೆಂಗಳೂರಿನ ಗಾಲ್ಫರ್‌ ನಾಲ್ಕು ಸುತ್ತುಗಳಲ್ಲಿ (67–80–68–75) ಒಟ್ಟು 290 ಸ್ಕೋರ್ ಮಾಡಿದರು. ಎರಡು ಮತ್ತು ನಾಲ್ಕನೇ ಸುತ್ತಿನ ಸ್ಪರ್ಧೆ ಕೊನೆಗೊಳಿಸಲು ಹೆಚ್ಚು ಸ್ಟ್ರೋಕ್‌ಗಳನ್ನು ಬಳಸಿದ್ದು ಅವರಿಗೆ ಹಿನ್ನಡೆ ಉಂಟುಮಾಡಿತು.

‘ಪ್ಲೇ ಆಫ್‌’ನಲ್ಲಿ ಅತ್ತಾಯ ತಿಟಿಕುಲ್‌ ಅವರನ್ನು ಮಣಿಸಿದ ಫ್ರಾನ್ಸ್‌ನ ಸೆಲಿನ್ ಬೊಟಿಯೆರ್‌ ಅವರು ಕಿರೀಟ ಮುಡಿಗೇರಿಸಿಕೊಂಡರು. ನಾಲ್ಕು ಸುತ್ತುಗಳ ಬಳಿಕ ಇಬ್ಬರು ಸ್ಪರ್ಧಿಗಳು ತಲಾ 267 ಸ್ಕೋರ್‌ಗಳೊಂದಿಗೆ ಸಮಬಲ ಸಾಧಿಸಿದ್ದರು. ಇದರಿಂದ ವಿಜೇತರನ್ನು ನಿರ್ಣಯಿಸಲು ಪ್ಲೇ ಆಫ್‌ ಮೊರೆ ಹೋಗಲಾಯಿತು.

ADVERTISEMENT

ಜಾಸ್ಮಿನ್‌ ಸುವನಪುರ ಮತ್ತು ರಾಸ್‌ ಝಾಂಗ್‌ ಅವರು ಜಂಟಿ ಮೂರನೇ ಸ್ಥಾನ ಪಡೆದರೆ, ಚೀನಾ ತೈಪೆಯ ಪೆಯುನ್‌ ಚೆನ್‌ ಅವರು ಐದನೇ ಸ್ಥಾನ ತಮ್ಮದಾಗಿಸಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.