ADVERTISEMENT

ಅನುಚಿತ ವರ್ತನೆ; ಕೋಚ್‌ ವಿರುದ್ಧ ಆರೋಪ

ಪಿಟಿಐ
Published 9 ಜೂನ್ 2022, 13:36 IST
Last Updated 9 ಜೂನ್ 2022, 13:36 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ತರಬೇತಿಗಾಗಿ ಜರ್ಮನಿಗೆ ತೆರಳಿದ್ದ ವೇಳೆ ಕೋಚ್‌ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಮಹಿಳಾ ಸೇಲಿಂಗ್‌ ಸ್ಪರ್ಧಿಯೊಬ್ಬರು ಆರೋಪಿಸಿದ್ದು, ನ್ಯಾಯ ಒದಗಿಸುವಂತೆ ಭಾರತ ಕ್ರೀಡಾ ಪ್ರಾಧಿಕಾರದ (ಸಾಯ್) ಮೊರೆ ಹೋಗಿದ್ದಾರೆ.

ಮಹಿಳಾ ಸೈಕ್ಲಿಸ್ಟ್‌ವೊಬ್ಬರು ರಾಷ್ಟ್ರೀಯ ತಂಡದ ಕೋಚ್‌ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.

ಸೇಲಿಂಗ್‌ ಸ್ಪರ್ಧಿ ಆರಂಭದಲ್ಲಿ ಯಾಚಿಂಗ್‌ ಫೆಡರೇಷನ್‌ ಆಫ್‌ ಇಂಡಿಯಾಗೆ (ವೈಎಐ) ದೂರು ನೀಡಿದ್ದರು. ಆದರೆ ಅಲ್ಲಿನ ಅಧಿಕಾರಿಗಳು ಸರಿಯಾಗಿ ಸ್ಪಂದಿಸದ ಕಾರಣ, ಸಾಯ್‌ ಮೊರೆ ಹೋಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ADVERTISEMENT

’ವಿದೇಶ ಪ್ರವಾಸದ ವೇಳೆ ಕೋಚ್‌ ಅನುಚಿತವಾಗಿ ವರ್ತಿಸಿ ಮುಜುಗರ ಉಂಟುಮಾಡಿದ್ದಾರೆ ಎಂದು ಮಹಿಳಾ ಸೇಲಿಂಗ್‌ ಸ್ಪರ್ಧಿ ದೂರು ನೀಡಿದ್ದಾರೆ. ಈ ಬಗ್ಗೆ ವೈಎಐಗೆ ದೂರು ನೀಡಿದರೂ, ಅವರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿಲ್ಲ. ಸ್ಪರ್ಧಿಯ ದೂರನ್ನು ಕಡೆಗಣಿಸಿದ್ದು ಏಕೆ ಎಂಬ ಬಗ್ಗೆ ಸ್ಪಷ್ಟೀಕರಣ ನೀಡುವಂತೆ ಫೆಡರೇಷನ್‌ಗೆ ಸೂಚಿಸಿದ್ದೇವೆ‘ ಎಂದು ಸಾಯ್‌ ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.