ADVERTISEMENT

ವೇಟ್‌ಲಿಫ್ಟಿಂಗ್‌: ಅಜಿತ್‌ಗೆ ಅಗ್ರಸ್ಥಾನ

ಪಿಟಿಐ
Published 8 ಮೇ 2023, 16:03 IST
Last Updated 8 ಮೇ 2023, 16:03 IST
ವೇಟ್‌ಲಿಫ್ಟಿಂಗ್‌– ಪ್ರಾತಿನಿಧಿಕ ಚಿತ್ರ
ವೇಟ್‌ಲಿಫ್ಟಿಂಗ್‌– ಪ್ರಾತಿನಿಧಿಕ ಚಿತ್ರ   

ಜಿಂಜು, ಕೊರಿಯಾ: ಭಾರತದ ಅಜಿತ್‌ ನಾರಾಯಣ ಮತ್ತು ಅಚಿಂತಾ ಶೆವುಲಿ ಅವರು ಏಷ್ಯನ್ ವೇಟ್‌ಲಿಫ್ಟಿಂಗ್‌ ಚಾಂಪಿಯನ್‌ಷಿಪ್‌ನ ‘ಗುಂಪು ಬಿ’ ಪುರುಷರ 73 ಕೆ.ಜಿ. ವಿಭಾಗದಲ್ಲಿ ಕ್ರಮವಾಗಿ ಮೊದಲ ಎರಡು ಸ್ಥಾನಗಳನ್ನು ಪಡೆದರು.

ಸೀನಿಯರ್‌ ವಿಭಾಗದಲ್ಲಿ ಇದೇ ಮೊದಲ ಬಾರಿ ಅಂತರರಾಷ್ಟ್ರೀಯ ಕೂಟದಲ್ಲಿ ಪಾಲ್ಗೊಂಡ ಅಜಿತ್‌ ಒಟ್ಟು 307 ಕೆ.ಜಿ. ಭಾರ ಎತ್ತಿದರು. ಸ್ನ್ಯಾಚ್‌ನಲ್ಲಿ 139 ಕೆ.ಜಿ. ಹಾಗೂ ಕ್ಲೀನ್ ಮತ್ತು ಜರ್ಕ್‌ನಲ್ಲಿ 168 ಕೆ.ಜಿ. ಸಾಧನೆ ಮಾಡಿದರು.

ಅಚಿಂತಾ ಅವರು ಒಟ್ಟು 305 ಕೆ.ಜಿ. ಭಾರ (140 ಕೆ.ಜಿ+ 165 ಕೆ.ಜಿ) ಎತ್ತಿದರು. ಆರಂಭಿಕ ಪ್ರಯತ್ನದಲ್ಲಿ ನಮೂದಿಸಿದ ಕೆ.ಜಿ ಆಧಾರದಲ್ಲಿ ಭಾರತದ ಈ ಇಬ್ಬರು ವೇಟ್‌ಲಿಫ್ಟರ್‌ಗಳಿಗೆ ‘ಬಿ’ ಗುಂಪಿನಲ್ಲಿ ಸ್ಥಾನ ನೀಡಲಾಗಿತ್ತು. ಆರಂಭಿಕ ಪ್ರಯತ್ನದಲ್ಲಿ ಹೆಚ್ಚು ಕೆ.ಜಿ. ಭಾರ ನಮೂದಿಸುವ ಲಿಫ್ಟರ್‌ಗಳಿಗೆ ‘ಎ’ ಗುಂಪಿನಲ್ಲಿ ಸ್ಥಾನ ನೀಡಲಾಗುತ್ತದೆ. ‘ಎ’ ಗುಂಪಿನಲ್ಲಿ ಗೆದ್ದವರಿಗೆ ಮಾತ್ರ ಪದಕ ನೀಡಲಾಗುತ್ತದೆ.

ADVERTISEMENT

ಈ ಚಾಂಪಿಯನ್‌ಷಿಪ್‌ನಲ್ಲಿ ಭಾರತದ ಲಿಫ್ಟರ್‌ಗಳು ಒಟ್ಟು ಮೂರು ಬೆಳ್ಳಿ ಪದಕಗಳೊಂದಿಗೆ ತಮ್ಮ ಅಭಿಯಾನ ಕೊನೆಗೊಳಿಸಿದರು. ಬಿಂದ್ಯಾರಾಣಿ ದೇವಿ ಎರಡು ಹಾಗೂ ಜೆರೆಮಿ ಲಾಲ್‌ರಿನುಂಗಾ ಒಂದು ಬೆಳ್ಳಿ ಜಯಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.