ಇಟಾಲಿಯನ್ ಓಪನ್ ಪ್ರಶಸ್ತಿಯೊಂದಿಗೆ ಕಾರ್ಲೋಸ್ ಅಲ್ಕರಾಜ್
ರೋಮ್: ಇಟಾಲಿಯನ್ ಓಪನ್ ಪ್ರಶಸ್ತಿ ಮುಡಿಗೇರಿಸಿಕೊಳ್ಳುವ ಮೂಲಕ ಸ್ಪೇನ್‌ನ ಟೆನಿಸ್ ತಾರೆ ಕಾರ್ಲೋಸ್ ಅಲ್ಕರಾಜ್ ಅವರು ಇದೇ 25ರಿಂದ ಆರಂಭವಾಗುವ ಫ್ರೆಂಚ್ ಓಪನ್ ಟೂರ್ನಿಗೆ ಭರ್ಜರಿ ಸಿದ್ಧತೆ ನಡೆಸಿದ್ದಾರೆ.
ರೋಲ್ಯಾಂಡ್ ಗ್ಯಾರೋಸ್‌ನಲ್ಲಿ ಕ್ವಾಲಿಫೈಯರ್ ಸುತ್ತುಗಳು ಸೋಮವಾರ ಆರಂಭವಾಗಿದೆ. ಮುಂದಿನ ಭಾನುವಾರ ಮುಖ್ಯಸುತ್ತಿನ ಸ್ಪರ್ಧೆ ಶುರುವಾಗಲಿದೆ. ಪುರುಷರ ಸಿಂಗಲ್ಸ್‌ನ ಹಾಲಿ ಚಾಂಪಿಯನ್ ಅಲ್ಕರಾಜ್ ಪ್ರಶಸ್ತಿ ಉಳಿಸಿಕೊಳ್ಳಲು ಸಜ್ಜಾಗಿದ್ದಾರೆ.
ರೋಮ್‌ನಲ್ಲಿ ಭಾನುವಾರ ನಡೆದ ಎಟಿಪಿ 1000 ಮಾಸ್ಟರ್ ಹಂತದ ಟೂರ್ನಿಯ ಫೈನಲ್‌ನಲ್ಲಿ 22 ವರ್ಷ ವಯಸ್ಸಿನ ಅಲ್ಕರಾಜ್ ಅವರು 7-6 (5), 6-1ರ ನೇರ ಸೆಟ್‌ಗಳಿಂದ ವಿಶ್ವದ ಅಗ್ರಮಾನ್ಯ ಆಟಗಾರ ಯಾನಿಕ್ ಸಿನ್ನರ್ ಅವರನ್ನು ಮಣಿಸಿ ಇಟಾಲಿಯನ್ ಓಪನ್ ಕಿರೀಟ ಗೆದ್ದು, ಆತ್ಮವಿಶ್ವಾಸ ವೃದ್ಧಿಸಿಕೊಂಡಿದ್ದಾರೆ.
ಇಟಲಿಯ ಆಟಗಾರ ಉದ್ದೀಪನ ಮದ್ದು ಸೇವನೆಗಾಗಿ ಮೂರು ತಿಂಗಳ ನಿಷೇಧ ಪೂರ್ಣಗೊಳಿಸಿ ಸ್ಪರ್ಧಾಕಣಕ್ಕೆ ಮರಳಲಿದ್ದರು. ಫ್ರೆಂಚ್ ಓಪನ್‌ನಲ್ಲೂ ಅಲ್ಕರಾಜ್ ಮತ್ತು ಸಿನ್ನರ್ ಪ್ರಶಸ್ತಿ ಗೆಲ್ಲುವ ನೆಚ್ಚಿನ ಆಟಗಾರರಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.