ಪ್ಯಾರಿಸ್ (ಪಿಟಿಐ): ಭಾರತದ ಪ್ರೀತಿ ಪವಾರ್ ಅವರು ಒಲಿಂಪಿಕ್ಸ್‌ನ ಮಹಿಳೆಯರ 54 ಕೆ.ಜಿ.ವಿಭಾಗದಲ್ಲಿ ಶನಿವಾರ ಸ್ಪರ್ಧೆಗಿಳಿಯಲಿದ್ದಾರೆ. ವಿಯೆಟ್ನಾಂನ ತಿ ಕಿಮ್ ವೊ ಅವರು ಪ್ರೀತಿ ಅವರಿಗೆ ಮೊದಲ ಎದುರಾಳಿಯಾಗಿದ್ದಾರೆ.
ವಿಶ್ವ ಚಾಂಪಿಯನ್‌ಷಿಪ್ ಪದಕ ವಿಜೇತೆ ಭಾರತದ ನಿಖತ್ ಜರೀನ್ (50 ಕೆಜಿ.), ಲವ್ಲೀನಾ ಬೊರ್ಗೊಹೈನ್ (75 ಕೆ.ಜಿ.) ಮತ್ತು ನಿಶಾಂತ್ ದೇವ್ (71 ಕೆ.ಜಿ.) ಅವರೂ ಬಾಕ್ಸಿಂಗ್‌ನಲ್ಲಿ ತಮ್ಮ ಅಭಿಯಾನ ಆರಂಭಿಸಲಿದ್ದಾರೆ. ಭಾರತಕ್ಕೆ ಪದಕ ತಂದು ಕೊಡಲು ಕಠಿಣ ಎದುರಾಳಿಗಳೊಂದಿಗೆ ಸೆಣಸಲಿದ್ದಾರೆ.
ಭಾರತದ ಆರು ಬಾಕ್ಸರ್‌ಗಳಿಗೆ ಗುರುವಾರ ಕಠಿಣ ಡ್ರಾಗಳನ್ನು ನೀಡಲಾಗಿದೆ. ಎರಡು ಬಾರಿಯ ವಿಶ್ವ ಚಾಂಪಿಯನ್ ಜರೀನ್ ಮೇಲೆ ಪದಕ ನಿರೀಕ್ಷೆ ಹೆಚ್ಚಿದೆ. ಜೈಸ್ಮಿನ್ ಲಂಬೋರಿಯಾ (57 ಕೆ.ಜಿ.), ಅಮಿತ್ ಪಂಗಲ್ (51 ಕೆ.ಜಿ) ಅವರೂ ಸ್ಪರ್ಧಾಕಣದಲ್ಲಿದ್ದು, ಉತ್ತಮ ಪ್ರದರ್ಶನದ ವಿಶ್ವಾಸದಲ್ಲಿದ್ಆರೆ.
ಭಾರತದ ಬಾಕ್ಸರ್‌ಗಳು ಇದುವರೆಗೆ ಒಲಿಂಪಿಕ್ಸ್‌ನಲ್ಲಿ ಮೂರು ಕಂಚಿನ ಪದಕಗಳನ್ನು ಗೆದ್ದಿದ್ದಾರೆ.
ಬಾಕ್ಸಿಂಗ್‌ನಲ್ಲಿ ಪದಕ ವಿಜೇತರು
ಬೀಜಿಂಗ್;2008; ವಿಜೇಂದರ್ ಸಿಂಗ್
ಲಂಡನ್;2012;ಮೇರಿ ಕೋಮ್
ಟೋಕಿಯೊ;2021;ಲವ್ಲೀನಾ ಬೊರ್ಗೊಹೈನ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.