ADVERTISEMENT

Volleyball: ಎಎಲ್‌ವಿ ತಂಡಕ್ಕೆ ಜಯ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2025, 1:05 IST
Last Updated 16 ಸೆಪ್ಟೆಂಬರ್ 2025, 1:05 IST
   

ಬೆಂಗಳೂರು: ಎಎಲ್‌ವಿ ತಂಡವು ಎ. ಲೋಕೇಶ್‌ ಗೌಡ ಸ್ಮರಣಾರ್ಥ ಟ್ರೋಫಿಗಾಗಿ ನಡೆಯುತ್ತಿರುವ ರಾಜ್ಯ ಸೀನಿಯರ್‌ ಪುರುಷರ ಮತ್ತು ಮಹಿಳೆಯರ ವಾಲಿಬಾಲ್‌ ಚಾಂಪಿಯನ್‌ಷಿಪ್‌ನ ಲೀಗ್‌ ಪಂದ್ಯದಲ್ಲಿ ಸೋಮವಾರ 3–0ಯಿಂದ ಎಂಎಲ್‌ಸಿ ತಂಡವನ್ನು ಸೋಲಿಸಿತು.

ಕಂಠೀರವ ಕ್ರೀಡಾಂಗಣದಲ್ಲಿ ನಡೆದ ದಿನದ ಇತರ ಪಂದ್ಯಗಳಲ್ಲಿ ಎಸ್‌ಡಿಎಂ ತಂಡವು –30ಯಿಂದ ಬಿಎಂಎಸ್‌ ಎದುರು; ಸಿಸಿಎಂ ತಂಡವು 3–0ಯಿಂದ ಎಸ್‌ಎಚ್‌ಯು ವಿರುದ್ಧ; ಐಸಿಟಿ ತಂಡವು 3–1ರಿಂದ ಜೆಎಸ್‌ಎಸ್‌ ವಿರುದ್ಧ ಹಾಗೂ ಪಿಒಎಸ್‌ ತಂಡವು 3–0ಯಿಂದ ಆರ್‌ಎಸ್‌ಸಿ ವಿರುದ್ಧ ಗೆಲುವು ಸಾಧಿಸಿದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT