
ಬೆಂಗಳೂರು: ಕರ್ನಾಟಕದ ಅಂಜನಾ ರಾವ್ ಅವರು ಅಮೆರಿಕದ ಲಾಸ್‌ವೇಗಸ್‌ನಲ್ಲಿ ಇತ್ತೀಚೆಗೆ ನಡೆದ ಅಮೆರಿಕ ಓಪನ್ ಟೇಬಲ್ ಟೆನಿಸ್ ಚಾಂಪಿಯನ್‌ಷಿಪ್‌ನಲ್ಲಿ ಎರಡು ಕಂಚಿನ ಪದಕಗಳನ್ನು ಗೆದ್ದುಕೊಂಡಿದ್ದಾರೆ.
ವಿಶ್ವದ ವಿವಿಧ ದೇಶಗಳಿಂದ ಒಟ್ಟು 1300 ಮಂದಿ ಈ ಚಾಂಪಿಯನ್‌ಷಿಪ್‌ನ ವಿವಿಧ ವಿಭಾಗಗಳಲ್ಲಿ ಭಾಗವಹಿಸಿದ್ದರು. ಮಹಿಳೆಯರ 40 ವರ್ಷ ಮೇಲ್ಪಟ್ಟವರ ವಿಭಾಗದ ಸಿಂಗಲ್ಸ್‌ನಲ್ಲಿ ಮತ್ತು ಇದೇ ವಿಭಾಗದ ಡಬಲ್ಸ್‌ನಲ್ಲಿ ಅವರು ಈ ಪದಕಗಳನ್ನು ಜಯಿಸಿದ್ದಾರೆ.
ಸಿಂಗಲ್ಸ್ ಕ್ವಾರ್ಟರ್‌ಫೈನಲ್‌ನಲ್ಲಿ ಮಾರ್ಗಿಟ್ ಜೀಗರ್ ಅವರನ್ನು 11–4, 11–5 11–5 ರಿಂ ಸೋಲಿಸಿದ್ದ ಅಂಜನಾ ಸೆಮಿಫೈನಲ್‌ನಲ್ಲಿ ಹುಯಿ ಝಾವೊ ಅವರಿಗೆ 9–11, 7–11, 9–11 ರಲ್ಲಿ ಮಣಿದಿದ್ದರು.
ಡಬಲ್ಸ್‌ನಲ್ಲಿ ಅಂಜನಾ ಮತ್ತು ದಿವ್ಯಾ ನಾಗರಾಜ್ ಜೋಡಿ ಚೀನಾದ ಜೂನ್ ಲೀ– ಸುಯ ಯೆನ್‌ಲಿನ್ ಜೋಡಿ ಎದುರು 11–13, 8–11, 7–11 ರಲ್ಲಿ ಸೋಲನುಭವಿಸಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.