ADVERTISEMENT

ಟೇಬಲ್‌ ಟೆನಿಸ್‌ ಚಾಂಪಿಯನ್‌ಷಿಪ್‌: ಅರ್ಣವ್‌ಗೆ ಪ್ರಶಸ್ತಿ ಡಬಲ್‌

​ಪ್ರಜಾವಾಣಿ ವಾರ್ತೆ
Published 26 ಜನವರಿ 2026, 16:09 IST
Last Updated 26 ಜನವರಿ 2026, 16:09 IST
ಪ್ರಶಸ್ತಿ ಗೆದ್ದ ಅರ್ಣವ್‌ ಎನ್‌, ರಾಶಿ ರಾವ್‌ ಮತ್ತು ವೇದಾಂತ್‌ ವಶಿಷ್ಠ
ಪ್ರಶಸ್ತಿ ಗೆದ್ದ ಅರ್ಣವ್‌ ಎನ್‌, ರಾಶಿ ರಾವ್‌ ಮತ್ತು ವೇದಾಂತ್‌ ವಶಿಷ್ಠ   

ಬೆಂಗಳೂರು: ಅರ್ಣವ್‌ ಎನ್‌. ಅವರು ಬೆಂಗಳೂರು ನಗರ ಜಿಲ್ಲಾ ಟೇಬಲ್ ಟೆನಿಸ್‌ ಚಾಂಪಿಯನ್‌ಷಿಪ್‌ನಲ್ಲಿ ಪುರುಷರ ಮತ್ತು 17 ವರ್ಷದೊಳಗಿನ ಬಾಲಕರ ಸಿಂಗಲ್ಸ್‌ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು.

ಪುರುಷರ ಫೈನಲ್‌ನಲ್ಲಿ ಅರ್ಣವ್‌ 3–1ರಿಂದ ಸಂಜಯ್‌ ಮಾಧವನ್‌ ವಿರುದ್ಧ; 17 ವರ್ಷದೊಳಗಿನವರ ವಿಭಾಗದಲ್ಲಿ ಅವರು 3–1ರಿಂದ ವೇದಾಂತ್‌ ವಶಿಷ್ಠ ವಿರುದ್ಧ ಗೆಲುವು ಸಾಧಿಸಿದರು.

ರಾಶಿ ವಿ.ರಾವ್‌ ಮತ್ತು ವೇದಾಂತ್‌ ಅವರು ಕ್ರಮವಾಗಿ 15 ವರ್ಷದೊಳಗಿನ ಬಾಲಕಿಯರ ಮತ್ತು ಬಾಲಕರ ಕಿರೀಟ ಗೆದ್ದರು. ರಾಶಿ 3–1ರಿಂದ ಐರಿನ್‌ ಅನ್ನಾ ಸುಭಾಷ್ ವಿರುದ್ಧ; ವೇದಾಂತ್‌ 3–2ರಿಂದ ತಮೋಘ್ನ ಎಂ. ವಿರುದ್ಧ ಫೈನಲ್‌ನಲ್ಲಿ ಜಯ ಸಾಧಿಸಿದರು

ADVERTISEMENT

13 ವರ್ಷದೊಳಗಿನ ಬಾಲಕಿಯರ ಫೈನಲ್‌ನಲ್ಲಿ ವಿಭಾ ಟಿ. 3–0ಯಿಂದ ಆಧ್ಯಾ ಎಂ. ವಿರುದ್ಧ; ಬಾಲಕರ ವಿಭಾಗದಲ್ಲಿ ರಿಯಾನ್ಶ್‌ ಗರ್ಗ್‌ 3–0ಯಿಂದ ಶರ್ವಿಲ್‌ ಕಾಂಬ್ಳೇಕರ ವಿರುದ್ಧ ಗೆದ್ದು ಚಾಂಪಿಯನ್‌ ಆದರು.

11 ವರ್ಷದೊಳಗಿನ ಬಾಲಕರ ಸಿಂಗಲ್ಸ್‌ ಫೈನಲ್‌ನಲ್ಲಿ ಶರ್ವಿಲ್‌ 3–0ಯಿಂದ ಅಖಿಲ್‌ ಕೌಶಿಕ್‌ ಅವರನ್ನು ಮಣಿಸಿದರೆ, ಬಾಲಕಿಯರ ವಿಭಾಗದಲ್ಲಿ ಸಮನ್ವಿ ಜೆ. 3–2ರಿಂದ ಶಾನ್ವಿ ಹರಿಪ್ರಸಾದ್‌ ರಾವ್‌ ಅವರನ್ನು ಸೋಲಿಸಿ ಪ್ರಶಸ್ತಿ ಗೆದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.