ADVERTISEMENT

ಏಷ್ಯನ್ ವಯೋವರ್ಗ ಬ್ಯಾಡ್ಮಿಂಟನ್: ಲಕ್ಷ್ಯಾ, ದೀಕ್ಷಾ, ಶೈನಾ ಮುನ್ನಡೆ

ಪಿಟಿಐ
Published 24 ಅಕ್ಟೋಬರ್ 2025, 14:12 IST
Last Updated 24 ಅಕ್ಟೋಬರ್ 2025, 14:12 IST
ಬ್ಯಾಡ್ಮಿಂಟನ್
ಬ್ಯಾಡ್ಮಿಂಟನ್   

ಚೆಂಗ್ಡು: ಭಾರತದ ಲಕ್ಷ್ಯಾ ರಾಜೇಶ್‌, ದೀಕ್ಷಾ ಸುಧಾರಕ್ ಮತ್ತು ಶೈನಾ ಮಣಿಮುತ್ತು ಅವರು ಬ್ಯಾಡ್ಮಿಂಟನ್ ಏಷ್ಯಾ 17 ಮತ್ತು 15 ವರ್ಷದೊಳಗಿನವರ ಚಾಂಪಿಯನ್‌ಷಿಪ್‌ನಲ್ಲಿ ಶುಕ್ರವಾರ ಕ್ವಾರ್ಟರ್‌ಫೈನಲ್ ತಲುಪಿದ್ದಾರೆ.

17 ವರ್ಷದೊಳಗಿನವರ ಬಾಲಕಿಯರ ಸಿಂಗಲ್ಸ್‌ನಲ್ಲಿ ಆರನೇ ಶ್ರೇಯಾಂಕದ ದೀಕ್ಷಾ ಸಂಯಮದಿಂದ ಆಡಿ 21–19, 21–15 ರಿಂದ ಚೀನಾ ತೈಪೆಯ ಪಿನ್‌ ಸುವಾನ್ ಚಿಯಾಂಗ್ ಅವರನ್ನು ಸೋಲಿಸಿ ಎಂಟರ ಘಟ್ಟಕ್ಕೆ ಮುನ್ನಡೆದರು. ಲಕ್ಷ್ಯಾ 21–19, 21–15 ರಿಂದ ಕೊರಿಯಾದ ಲೀ ಯುನ್ ಸಿಯೊ ಅವರನ್ನು ಹಿಮ್ಮೆಟ್ಟಿಸಿದರು.

15 ವರ್ಷದೊಳಗಿನವರ ಪ್ರಿಕ್ವಾರ್ಟರ್‌ಫೈನಲ್‌ನಲ್ಲಿ ಅಗ್ರ ಶ್ರೇಯಾಂಕದ ಮಣಿಮುತ್ತು 21–17, 21–16 ರಿಂದ ಚೀನಾದ ಲಿ ಮನ್ ಲಿನ್‌ ಅವರನ್ನು ಸುಲಭವಾಗಿ ಸೋಲಿಸಿದರು.

ADVERTISEMENT

ಬಾಲಕಿಯರ ಡಬಲ್ಸ್‌ನಲ್ಲಿ ಅದಿತಿ ದೀಪಕ್‌ ರಾಜ್‌– ಬಿ.ವಿ.ಪೊನ್ನಮ್ಮ ವೃದ್ಧಿ ತೀವ್ರ ಹೋರಾಟದ ಪಂದ್ಯದಲ್ಲಿ ಕೊರಿಯಾದ ಲೀ ಯುನ್ ಸಿಯೊ– ಪಾರ್ಕ್ ಯೂ ಜಿಯಾಂಗ್ ಅವರನ್ನು 17–21, 21–15, 21–17 ರಿಂದ ಸೋಲಿಸಿದರು.

ಬಾಲಕರ ಡಬಲ್ಸ್‌ನಲ್ಲಿ ಚರಣ್ ರಾಮ್ ತಿಪ್ಪಣ– ಹರಿ ಕೃಷ್ಣ ವೀರಮ್‌ರೆಡ್ಡಿ ಶಿಸ್ತಿನ ಆಟವಾಡಿ 21–14, 21–8 ರಿಂದ ಜಪಾನ್‌ನ ಕೊಸುಕೆ ಶಿನೊಹರ– ಹಿರಾಟೊ ನಕಟ್ಸುಕ ಅವರನ್ನು ಮಣಿಸಿದರು.

ಬಾಲಕರ ಸಿಂಗಲ್ಸ್‌ನಲ್ಲಿ ಜಗಶೇರ್ ಸಿಂಗ್‌ ಖಂಗುರ 21–12, 2–17 ರಿಂದ ಮಲೇಷ್ಯಾದ ವಿನ್ಸನ್ ಚೊಹ್‌ ವಿರುದ್ಧ ಜಯಗಳಿಸಿದರು.

15 ವರ್ಷದೊಳಗಿನ ಬಾಲಕರ ಸಿಂಗಲ್ಸ್‌ನಲ್ಲಿ ವಝಿರ್ ಸಿಂಗ್ ಹೋರಾಟದ ಆಟವಾಡಿದರೂ 19–21, 22–20, 22–24 ರಲ್ಲಿ ಏಳನೇ ಶ್ರೇಯಾಂಕದ ರೇವನ್ ಅಡ್ರಿಲೊ ಸುಪುತ್ರ (ಇಂಡೊನೇಷ್ಯಾ) ಅವರಿಗೆ ಮಣಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.