ADVERTISEMENT

ಒಲಿಂಪಿಕ್ಸ್‌ ಅರ್ಹತಾ ಏಷ್ಯನ್‌ ಬಾಕ್ಸಿಂಗ್‌ ಟೂರ್ನಿ: ಪಂಗಲ್‌ಗೆ ಅಗ್ರಶ್ರೇಯಾಂಕ

ಪಿಟಿಐ
Published 2 ಮಾರ್ಚ್ 2020, 19:15 IST
Last Updated 2 ಮಾರ್ಚ್ 2020, 19:15 IST
ಅಮಿತ್‌ ಪಂಗಲ್‌
ಅಮಿತ್‌ ಪಂಗಲ್‌   

ಅಮಾನ್‌, ಜೋರ್ಡಾನ್‌: ವಿಶ್ವ ಚಾಂಪಿಯನ್‌ಷಿಪ್‌ ಬೆಳ್ಳಿ ಪದಕ ವಿಜೇತ ಭಾರತದ ಅಮಿತ್‌ ಪಂಗಲ್‌ (52 ಕೆಜಿ ವಿಭಾಗ) ಹಾಗೂ ಮೇರಿ ಕೋಮ್‌ (51 ಕೆಜಿ) ಅವರು ಒಲಿಂಪಿಕ್ಸ್‌ ಅರ್ಹತಾ ಏಷ್ಯನ್‌ ಬಾಕ್ಸಿಂಗ್‌ ಟೂರ್ನಿಯ ಪುರುಷ ಮತ್ತು ಮಹಿಳೆಯರ ವಿಭಾಗದಲ್ಲಿಕ್ರಮವಾಗಿ ಒಂದು ಮತ್ತು ಎರಡನೇ ಶ್ರೇಯಾಂಕ ಪಡೆದಿದ್ದಾರೆ.

ಮಂಗಳವಾರದಿಂದ ಇಲ್ಲಿ ಆರಂಭವಾಗುವ ಟೂರ್ನಿಯಲ್ಲಿ ಭಾರತದ ಎಂಟು ಮಹಿಳಾ ಮತ್ತು ಪುರುಷರು ಒಲಿಂಪಿಕ್ಸ್‌ ಅರ್ಹತೆಯ ಮೇಲೆ ಕಣ್ಣಿಟ್ಟು ಅಖಾಡಕ್ಕಿಳಿಯಲಿದ್ದಾರೆ.

ಶ್ರೇಯಾಂಕ ಪಡೆದ ಭಾರತದ ಏಕೈಕ ಬಾಕ್ಸರ್ ಪಂಗಲ್‌. ಲವ್ಲಿನಾ ಬೊರ್ಗೊಹೈನ್ (69 ಕೆಜಿ) ಹಾಗೂ ಪೂಜಾ ರಾಣಿ (75 ಕೆಜಿ) ಮಹಿಳೆಯರ ವಿಭಾಗದಲ್ಲಿ ಕ್ರಮವಾಗಿ ಎರಡು ಮತ್ತು ಮೂರನೇ ಶ್ರೇಯಾಂಕ ಪಡೆದಿದ್ದಾರೆ.

ADVERTISEMENT

ಟೂರ್ನಿಯಲ್ಲಿ 63 ಕೋಟಾ ಸ್ಥಾನಗಳು ಇದ್ದು, ಸೆಮಿಫೈನಲ್‌ ಹಂತ ತಲುಪುವ ಬಾಕ್ಸರ್‌ ಟೋಕಿಯೊ ಟಿಕೆಟ್‌ ಖಚಿತಪಡಿಸಲಿದ್ದಾರೆ.

ಭಾರತ ತಂಡ
ಪುರುಷರು:
ಅಮಿತ್‌ ಪಂಗಲ್‌ (52 ಕೆಜಿ), ಗೌರವ್‌ ಸೋಲಂಕಿ (57 ಕೆಜಿ), ಮನೀಷ್‌ ಕೌಶಿಕ್ (63 ಕೆಜಿ), ವಿಕಾಸ್‌ ಕೃಷ್ಣ (69 ಕೆಜಿ), ಆಶಿಶ್‌ ಕುಮಾರ್ (75 ಕೆಜಿ), ಸಚಿನ್‌ ಕುಮಾರ್ (81 ಕೆಜಿ), ನಮನ್‌ ತನ್ವರ್‌ (91 ಕೆಜಿ), ಸತೀಶ್‌ ಕುಮಾರ್‌ (+91 ಕೆಜಿ).

ಮಹಿಳೆಯರು: ಎಂ.ಸಿ.ಮೇರಿ ಕೋಮ್‌ (51 ಕೆಜಿ), ಸಾಕ್ಷಿ ಚೌಧರಿ (57 ಕೆಜಿ), ಸಿಮ್ರನ್‌ಜೀತ್‌ ಕೌರ್‌ (60 ಕೆಜಿ), ಲವ್ಲಿನಾ ಬೊರ್ಗೊಹೈನ್‌ (69 ಕೆಜಿ), ಪೂಜಾ ರಾಣಿ (75 ಕೆಜಿ).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.