ADVERTISEMENT

ಏಷ್ಯನ್ ಸ್ನೂಕರ್: ಭಾರತಕ್ಕೆ ಚಿನ್ನ

ಪಿಟಿಐ
Published 29 ಜೂನ್ 2025, 4:16 IST
Last Updated 29 ಜೂನ್ 2025, 4:16 IST
ಸ್ನೂಕರ್– ಸಾಂದರ್ಭಿಕ ಚಿತ್ರ
ಸ್ನೂಕರ್– ಸಾಂದರ್ಭಿಕ ಚಿತ್ರ   

ಕೊಲಂಬೊ: ಪಂಕಜ್ ಅದ್ವಾನಿ, ಆದಿತ್ಯ ಮೆಹ್ತಾ ಮತ್ತು ಬ್ರಿಜೇಶ್ ಧಮಾನಿ ಅವರಿದ್ದ ಭಾರತ ತಂಡವು ಎಸಿಬಿಎಸ್ ಏಷ್ಯನ್ ಸ್ನೂಕರ್ ಟೀಮ್ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನದ ಪದಕ ಜಯಿಸಿತು.

ಇಲ್ಲಿನ ಮೂರ್ಸ್‌ ಸ್ಪೋರ್ಟ್ಸ್‌ ಕ್ಲಬ್‌ನಲ್ಲಿ ಶನಿವಾರ ನಡೆದ ಫೈನಲ್‌ ಪಂದ್ಯದಲ್ಲಿ ಭಾರತ ತಂಡವು 3–1ರಿಂದ ಮಲೇಷ್ಯಾ ತಂಡವನ್ನು ಮಣಿಸಿತು. ಇದೇ ತಂಡವು ಎರಡು ವರ್ಷಗಳ ಹಿಂದೆ ಇರಾನ್‌ನಲ್ಲಿ ಚಿನ್ನದ ಪದಕವನ್ನು ಜಯಿಸಿತ್ತು.

ಆರಂಭದಲ್ಲಿ ನಡೆದ ಸಿಂಗಲ್ಸ್‌ ವಿಭಾಗದ ಪಂದ್ಯದಲ್ಲಿ ಬ್ರಿಜೇಶ್ ಧಮಾನಿ 58(52)–68ರಿಂದ ಥೋರ್‌ ಶುವಾನ್‌ ಲಿಯಾಂಗ್‌ ಎದುರು ಸೋಲುಕಂಡರು.

ADVERTISEMENT

ಪಂಕಜ್ ಅದ್ವಾನಿ 66 (51)–25ರಿಂದ ಲಿಮ್‌ ಕಾಕ್‌ ಲಿಯಾಂಗ್‌ ಎದುರು ಜಯ ಸಾಧಿಸಿದರು.

ಡಬಲ್ಸ್‌ನಲ್ಲಿ ಪಂಕಜ್‌ ಮತ್ತು ಧಮಾನಿ ಜೋಡಿ 76 (60)–33ರಿಂದ ಥೋರ್‌ ಶುವಾನ್‌, ಲಿಮ್‌ ಕಾಕ್‌ ಜೋಡಿಯನ್ನು ಸೋಲಿಸಿದರು. ಅಂತಿಮವಾಗಿ ಪಂಕಜ್‌ 58-1ರಿಂದ ಥೋರ್‌ ಶುವಾನ್‌ ಅವರನ್ನು ಮಣಿಸಿದರು.

ಆದಿತ್ಯಾ ಮೆಹ್ತಾ ಅವರು ಕುತ್ತಿಗೆ ನೋವಿನಿಂದಾಗಿ ಹಾಂಗ್‌ಕಾಂಗ್‌ ಎದುರಿನ ಸೆಮಿಫೈನಲ್‌ ಪಂದ್ಯದಲ್ಲಿ ಆಡಿರಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.