ಬೆಂಗಳೂರು: ಕರ್ನಾಟಕದ ಟಿ.ಜಿ. ಉಪಾಧ್ಯ ಹಾಗೂ ಕೆ.ಆರ್. ಮಂಜುನಾಥ (ಅಂಪೈರ್) ಅವರು ಅಂತರರಾಷ್ಟ್ರೀಯ ಟೇಬಲ್ ಟೆನಿಸ್ ಸಂಸ್ಥೆ ಹಾಗೂ ಏಷ್ಯನ್ ಟೇಬಲ್ ಟೆನಿಸ್ ಯೂನಿಯನ್ ಜಂಟಿ ಆಶ್ರಯದಲ್ಲಿ ನಡೆಯಲಿರುವ 28ನೇ ಏಷ್ಯನ್ ಟೇಬಲ್ ಟೆನಿಸ್ ಚಾಂಪಿಯನ್‌ಷಿಪ್‌ಗೆ ತಾಂತ್ರಿಕ ಸಿಬ್ಬಂದಿಯಾಗಿ ಆಯ್ಕೆಯಾಗಿದ್ದಾರೆ.
ಉಪಾಧ್ಯ ಅವರು ಡೆಪ್ಯುಟಿ ರೆಫ್ರಿಯಾಗಿ ಹಾಗೂ ಮಂಜುನಾಥ ಅವರು ‘ಬ್ಲ್ಯೂ ಬ್ಯಾಡ್ಜ್ ಅಂಪೈರ್’ ಆಗಿ ಕಾರ್ಯ ನಿರ್ವಹಿಸಲಿದ್ದಾರೆ. ಟೂರ್ನಿಯು ಅಕ್ಟೋಬರ್ 11ರಿಂದ 15ರ ವರೆಗೆ ಭುವನೇಶ್ವರದ ಕಳಿಂಗ ಕ್ರೀಡಾಂಗಣದಲ್ಲಿ ನಡೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.