ADVERTISEMENT

ಏಷ್ಯನ್ ಕುಸ್ತಿ ಚಾಂಪಿಯನ್‌ಷಿಪ್: ಭಾರತಕ್ಕೆ ಚಿನ್ನ ಗೆದ್ದುಕೊಟ್ಟ ದಿವ್ಯಾ ಕಾಕ್ರನ್

ಏಜೆನ್ಸೀಸ್
Published 20 ಫೆಬ್ರುವರಿ 2020, 13:09 IST
Last Updated 20 ಫೆಬ್ರುವರಿ 2020, 13:09 IST
ದಿವ್ಯಾ ಕಾಕ್ರನ್‌ (ಸಂಗ್ರಹ ಚಿತ್ರ)
ದಿವ್ಯಾ ಕಾಕ್ರನ್‌ (ಸಂಗ್ರಹ ಚಿತ್ರ)   

ನವದೆಹಲಿ:ಏಷ್ಯನ್ ಕುಸ್ತಿ ಚಾಂಪಿಯನ್‌ಷಿಪ್ ಕ್ರೀಡಾಕೂಟದ ಮಹಿಳೆಯದ 68 ಕೆಜಿ ವಿಭಾಗದಲ್ಲಿ ದಿವ್ಯಾ ಕಾಕ್ರನ್‌, ಭಾರತಕ್ಕೆ ಮೊದಲ ಚಿನ್ನ ಗೆದ್ದುಕೊಟ್ಟರು.

ಇಲ್ಲಿನ ಇಂದಿರಾಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕ್ರೀಡಾಕೂಟದಮೂರನೇ ದಿನ ದಿವ್ಯಾ ಈ ಸಾಧನೆ ಮಾಡಿದರು.

ಮೊದಲ ಮೂರು ಹಣಾಹಣಿಗಳಲ್ಲಿ ತಜಕಿಸ್ತಾನ, ಮಂಗೋಲಿಯಾ ಮತ್ತು ಉಜ್ಬೇಕಿಸ್ತಾನ ಆಟಗಾರ್ತಿಯರನ್ನು ಮಣಿಸಿದ್ದ ದಿವ್ಯ, ಫೈನಲ್‌ನಲ್ಲಿ ಜಪಾನ್‌ನ ನರುಹಾ ಮತ್ಸುಯುಕಿ ಅವರನ್ನು ಮಣಿಸಿ ಸಂಭ್ರಮಿಸಿದರು. ದಿವ್ಯಾ2018ರ ಏಷ್ಯನ್‌ ಗೇಮ್ಸ್‌ನಲ್ಲಿ ಕಂಚಿನ ಪದಕ ಜಯಿಸಿದ್ದರು.

ADVERTISEMENT

ನಿರ್ಮಲಾ ದೇವಿ,ಪಿಂಕಿ ಹಾಗೂಸರೀತಾ ಅವರೂ ಫೈನಲ್ ತಲುಪಿದ್ದಾರೆ.

ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಮೂರು ಬಾರಿ ಚಿನ್ನ ಗೆದ್ದಿರುವ ನಿರ್ಮಲಾ ದೇವಿ, 50 ಕೆಜಿ ವಿಭಾಗದ ಫೈನಲ್‌ ತಲುಪಿದ್ದಾರೆ. ಅವರು 2018ರಲ್ಲಿ 23 ವರ್ಷದೊಳಗಿನವರ ಚಾಂಪಿಯನ್‌ಷಿಪ್‌ನಲ್ಲಿ ಪದಕ ಗೆದ್ದಿದ್ದ ಜಪಾನಿನ ಮಿಹೊ ಇಗಾರಶಿ ಅವರನ್ನು ಫೈನಲ್‌ನಲ್ಲಿ ಎದುರಿಸಲಿದ್ದಾರೆ.

55 ಕೆಜಿ ವಿಭಾಗದಲ್ಲಿ ಅಂತಿಮ ಸುತ್ತಿಗೆ ತಲುಪಿರುವ ಪಿಂಕಿ, ಮಂಗೋಲಿಯಾದ ದುಲ್ಗುನ್‌ ಬಲೋರ್ಮಾ ಎದುರು ಚಿನ್ನದ ಪದಕಕ್ಕಾಗಿ ಸೆಣಸಲಿದ್ದಾರೆ.

59 ಕೆಜಿ ವಿಭಾಗದ ಫೈನಲ್‌ ಪಂದ್ಯದಲ್ಲಿ ಮಂಗೋಲಿಯಾದ ಬಟ್ಸೆತ್ಸೆಜ್‌ ಅಲ್ತಾನ್ತ್ಸೆತ್ಸೆಜ್‌ ಅವರ ವಿರುದ್ಧ ಭಾರತದ ಸರೀತಾ ಸ್ಪರ್ಧಿಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.