ADVERTISEMENT

ಏಷ್ಯನ್‌ ಯೂತ್‌ ಪ್ಯಾರಾ ಕ್ರೀಡಾಕೂಟ: ಅಬ್ದುಲ್ ಖಾದಿರ್‌ಗೆ ಡಬಲ್ ಚಿನ್ನದ ಪದಕ

ಪಿಟಿಐ
Published 11 ಡಿಸೆಂಬರ್ 2025, 19:08 IST
Last Updated 11 ಡಿಸೆಂಬರ್ 2025, 19:08 IST
<div class="paragraphs"><p>ಭಾರತದ ಈಜುಪಟು&nbsp;ಅಬ್ದುಲ್ ಖಾದಿರ್ ಇಂದೋರಿ </p></div>

ಭಾರತದ ಈಜುಪಟು ಅಬ್ದುಲ್ ಖಾದಿರ್ ಇಂದೋರಿ

   

ದುಬೈ : ಭಾರತದ ಈಜುಪಟು ಅಬ್ದುಲ್ ಖಾದಿರ್ ಇಂದೋರಿ ಅವರು ಬುಧವಾರ ಏಷ್ಯನ್‌ ಯೂತ್‌ ಪ್ಯಾರಾ ಕ್ರೀಡಾಕೂಟದಲ್ಲಿ ಎರಡು ಚಿನ್ನದ ಪದಕಗಳನ್ನು ಗೆದ್ದಿದ್ದಾರೆ.

ಮಧ್ಯಪ್ರದೇಶದ 17 ವರ್ಷದ ಅಬ್ದುಲ್‌ ಅವರು ಪುರುಷರ 50 ಮೀಟರ್‌ ಬಟರ್‌ಫ್ಲೈ ಮತ್ತು 50 ಮೀಟರ್‌ ಬ್ಯಾಕ್‌ಸ್ಟ್ರೋಕ್‌ ಸ್ಪರ್ಧೆಯಲ್ಲಿ ಚಾಂಪಿಯನ್‌ ಆದರು.

ADVERTISEMENT

‘ಅಬ್ದುಲ್ ಖಾದಿರ್‌ ಅವರ ಸಾಧನೆಯು ಭಾರತದ ಯುವ ಪ್ಯಾರಾ ಅಥ್ಲೀಟ್‌ಗಳ ಸಮರ್ಪಣೆ, ಶಿಸ್ತು ಮತ್ತು ಹೆಚ್ಚುತ್ತಿರುವ ಶಕ್ತಿಯನ್ನು ಪ್ರತಿಬಿಂಬಿಸುತ್ತದೆ’ ಎಂದು ಭಾರತದ ಪ್ಯಾರಾಲಿಂಪಿಕ್ ಸಮಿತಿ ‘ಎಕ್ಸ್‌’ನಲ್ಲಿ ಹೇಳಿದೆ.

ಭಾರತದ ಪ್ಯಾರಾಲಿಂಪಿಕ್ ಸಮಿತಿಯು ಕೂಟಕ್ಕೆ 122 ಕ್ರೀಡಾಪಟುಗಳ ತಂಡವನ್ನು ಕಳುಹಿಸಿದೆ. 2021ರಲ್ಲಿ ಬಹರೇನ್‌ನಲ್ಲಿ ನಡೆದ ಹಿಂದಿನ ಆವೃತ್ತಿಯಲ್ಲಿ ಪದಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದ ಇರಾನ್ ಈ ಬಾರಿ 195 ಕ್ರೀಡಾಪಟುಗಳನ್ನು ಹೊಂದಿರುವ ಅತಿದೊಡ್ಡ ತಂಡವನ್ನು ಕಣಕ್ಕಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.