ADVERTISEMENT

ಭಾರತದ ಚಿತ್ತ 2036ರ ಒಲಿಂಪಿಕ್ಸ್ ಬಿಡ್‌ನತ್ತ

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2024, 22:46 IST
Last Updated 12 ಆಗಸ್ಟ್ 2024, 22:46 IST
<div class="paragraphs"><p>ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ರಿಲಯನ್ಸ್‌ನಿಂದ ಆರಂಭಿಸಲಾಗಿರುವ ಇಂಡಿಯಾ ಹೌಸ್‌ನಲ್ಲಿ ಐಒಸಿ ಸದಸ್ಯೆ ನೀತಾ ಅಂಬಾನಿ ಅವರು ಭಾರತ ಹಾಕಿ ತಂಡದ ಗೋಲ್‌ಕೀಪರ್ ಪಿ.ಆರ್. ಶ್ರೀಜೇಶ್ ಅವರನ್ನು ಗೌರವಿಸಿದರು. ಐಒಎ ಅಧ್ಯಕ್ಷೆ ಪಿ.ಟಿ. ಉಷಾ ಹಾಜರಿದ್ದರು&nbsp;&nbsp;</p></div>

ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ರಿಲಯನ್ಸ್‌ನಿಂದ ಆರಂಭಿಸಲಾಗಿರುವ ಇಂಡಿಯಾ ಹೌಸ್‌ನಲ್ಲಿ ಐಒಸಿ ಸದಸ್ಯೆ ನೀತಾ ಅಂಬಾನಿ ಅವರು ಭಾರತ ಹಾಕಿ ತಂಡದ ಗೋಲ್‌ಕೀಪರ್ ಪಿ.ಆರ್. ಶ್ರೀಜೇಶ್ ಅವರನ್ನು ಗೌರವಿಸಿದರು. ಐಒಎ ಅಧ್ಯಕ್ಷೆ ಪಿ.ಟಿ. ಉಷಾ ಹಾಜರಿದ್ದರು  

   

–ಪಿಟಿಐ ಚಿತ್ರ

ಪ್ಯಾರಿಸ್: ಭಾರತ ಸೇರಿದಂತೆ ಹಲವು ದೇಶಗಳು 2036ರ ಒಲಿಂಪಿಕ್ಸ್ ಆಯೋಜನೆ ಹಕ್ಕು ಪಡೆಯಲು ಸ್ಪರ್ಧೆಗಿಳಿದಿವೆ. 

ADVERTISEMENT

ಟರ್ಕಿ, ಕತಾರ್, ಸೌದಿ ಅರೇಬಿಯಾ,  ಇಂಡೋನೆಷ್ಯಾ ದೇಶಗಳು ಪ್ರಮುಖವಾಗಿವೆ.

ಈಗಾಗಲೇ 2028ರಲ್ಲಿ ಲಾಸ್ ಏಂಜಲೀಸ್ ಮತ್ತು 2032ರಲ್ಲಿ ಆಸ್ಟ್ರೇಲಿಯಾದ ಬ್ರಿಸ್ಬೆನ್ ನಗರಗಳು ಒಲಿಂಪಿಕ್ಸ್ ಆತಿಥ್ಯ ವಹಿಸಲಿವೆ. ಭಾರತವು 2036ರ ಕೂಟ ಆಯೋಜಿಸಲು ಆಸಕ್ತಿ ತೋರಿದೆ.

ಒಂದೊಮ್ಮೆ 2029ರೊಳಗೆ ಬಿಡ್ ಪ್ರಕ್ರಿಯೆ ಮುಗಿದರೆ, ಆಯೋಜನೆಯ ಅವಕಾಶ ಪಡೆಯುವ ದೇಶದ ಮುಂದೆ ದೊಡ್ಡ ಸವಾಲು ಎದುರಾಗಲಿದೆ. ಪ್ಯಾರಿಸ್‌ ಒಲಿಂಪಿಕ್ಸ್‌ನ ಅದ್ದೂರಿತನವನ್ನು ಮೀರಿಸುವಂತೆ ಆಯೋಜಿಸುವ ಸವಾಲು ಅದಾಗಿದೆ.

‘ಐಒಸಿ ಏನು ನಿರೀಕ್ಷಿಸುತ್ತಿದೆ ಎಂದಷ್ಟೇ ನಾನು ಗಮನಿಸುತ್ತಿರುವೆ. ಅವರ ಕನಸೇನು ಮತ್ತು ಜಗತ್ತು ಏನು ಬಯಸುತ್ತದೆ ಎಂದು ನೋಡಬೇಕಿದೆ. ಬಿಡ್ ಗೆಲ್ಲಲು ಯಾವ ದೇಶಗಳು ಸ್ಪರ್ಧೆಯಲ್ಲಿವೆ ಎಂಬುದನ್ನು ನೋಡುತ್ತಿಲ್ಲ’ ಎಂದು ಇಸ್ತಾನ್‌ಬುಲ್ ಮೇಯರ್ ಇಕ್ರೆಮ್ ಇಮಾಮೊಗ್ಲು ಅವರು ಸಂದರ್ಶನದಲ್ಲಿ ಹೇಳಿದ್ದಾರೆ. 

ಐಒಸಿಯ ಮೂಲಗಳು ಹೇಳಿರುವ ಪ್ರಕಾರ ಈ ಪೈಪೋಟಿಯಲ್ಲಿರುವ ದೇಶಗಳ ಸಂಖ್ಯೆಯು ಎರಡಂಕಿಯಲ್ಲಿದೆ.

ಜುಲೈ 27ರಂದು ಪ್ಯಾರಿಸ್‌ನಲ್ಲಿ ಇಂಡಿಯಾ ಹೌಸ್ ಉದ್ಘಾಟನೆ ಸಂದರ್ಭದಲ್ಲಿ, ಐಒಸಿ ಸದಸ್ಯೆ ನೀತಾ ಅಂಬಾನಿ ಅವರು, ‘ಒಲಿಂಪಿಕ್ಸ್ ಆಯೋಜನೆಯು 140 ಕೋಟಿ ಭಾರತೀಯರ ಕನಸು’ ಎಂದಿದ್ದರು.

ಶ್ರೀಮಂತ ಉದ್ಯಮಿ ಅಂಬಾನಿಯವರ ಕುಟುಂಬ ಮತ್ತು ಪ್ರಧಾನಿ ನರೇಂದ್ರ ಮೋದಿಯವರ ವರ್ಚಸ್ಸು ಐಒಸಿಯ ಗಮನ ಸೆಳೆಯುವುದೇ ಎಂಬುದನ್ನು ನೋಡಬೇಕಿದೆ.

ಇನ್ನೊಂದೆಡೆ ಫಿಫಾ ವಿಶ್ವಕಪ್ ಟೂರ್ನಿಯನ್ನು ಅಮೋಘವಾಗಿ ಆಯೋಜಿಸಿದ್ದ ಕತಾರ್, ಆರ್ಥಿಕ ಶಕ್ತಿಯಾಗಿ ಬೆಳೆಯುತ್ತಿರುವ ಇಂಡೋನೆಷ್ಯಾ ದೇಶಗಳು ಏಷ್ಯಾ ಕೋಟಾದಲ್ಲಿ ಬಿಡ್ ಪಡೆಯುವ ಪ್ರಯತ್ನದಲ್ಲಿವೆ ಎನ್ನಲಾಗಿದೆ. ಇಸ್ತಾನ್‌ಬುಲ್ 2036 ಅಥವಾ 2040ರ ಕೂಟವನ್ನು ಪಡೆಯುವತ್ತ ಚಿತ್ತ ನೆಟ್ಟಿದೆ ಎನ್ನಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.