ADVERTISEMENT

ಬೆಟ್‌ ಮೇಲೆ ನಾಲ್ಕು ವರ್ಷ ನಿಷೇಧ

ರಾಯಿಟರ್ಸ್
Published 25 ನವೆಂಬರ್ 2018, 20:25 IST
Last Updated 25 ನವೆಂಬರ್ 2018, 20:25 IST
ಕಿಪ್ಯೆಗೋನ್‌ ಬೆಟ್‌
ಕಿಪ್ಯೆಗೋನ್‌ ಬೆಟ್‌   

ಮೊನಾಕೊ: ನಿಷೇಧಿತ ಉದ್ದೀಪನಾ ಮದ್ದು ಸೇವಿಸಿದ್ದು ಸಾಬೀತಾದ ಕಾರಣ ಕೀನ್ಯಾದ ಅಥ್ಲೀಟ್‌ ಕಿಪ್ಯೆಗೋನ್‌ ಬೆಟ್‌ ಅವರ ಮೇಲೆ ನಾಲ್ಕು ವರ್ಷ ನಿಷೇಧ ಹೇರಲಾಗಿದೆ.

ಈ ವಿಷಯವನ್ನು ಐಎಎಎಫ್‌ ಅಥ್ಲೆಟಿಕ್ಸ್‌ ಇಂಟಿಗ್ರಿಟಿ ಯೂನಿಟ್‌ (ಎಐಯು) ಶುಕ್ರವಾರ ಪ್ರಕಟಣೆಯಲ್ಲಿ ತಿಳಿಸಿದೆ.

20 ವರ್ಷ ವಯಸ್ಸಿನ ಬೆಟ್‌ 2017ರಲ್ಲಿ ಲಂಡನ್‌ನಲ್ಲಿ ನಡೆದಿದ್ದ ವಿಶ್ವ ಚಾಂಪಿಯನ್‌ಷಿಪ್‌ನ 800 ಮೀಟರ್ಸ್‌ ಓಟದ ಸ್ಪರ್ಧೆಯಲ್ಲಿ ಕಂಚಿನ ಪದಕ ಜಯಿಸಿದ್ದರು.

ADVERTISEMENT

ಬೆಟ್‌ ಅವರಿಂದ ಸಂಗ್ರಹಿಸಿದ್ದ ಮೂತ್ರದ ಮಾದರಿಯಲ್ಲಿ ನಿಷೇಧಿತ ಎರಿತ್ರೋ‍ಪೊಯಿಟಿನ್‌ (ಇಪಿಒ) ಮದ್ದಿನ ಅಂಶ ಪತ್ತೆಯಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.