ಬೆಂಗಳೂರು: ಕರ್ನಾಟಕದ ವಿ.ಸುಧೀಕ್ಷಾ ಅವರು ಭುವನೇಶ್ವರದ ಕಳಿಂಗಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 39ನೇ ರಾಷ್ಟ್ರೀಯ ಜೂನಿಯರ್ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನಲ್ಲಿ 20 ವರ್ಷದೊಳಗಿನವರ ಮಹಿಳೆಯರ 100 ಮೀಟರ್ ಓಟದಲ್ಲಿ ಬೆಳ್ಳಿ ಪದಕ ಗೆದ್ದರು.
ಸುಧೀಕ್ಷಾ ಅವರು 12 ಸೆಕೆಂಡ್‌ನಲ್ಲಿ ಗುರಿ ತಲುಪಿದರು. ಗುಜರಾತ್‌ನ ಸಾಕ್ಷಿ ಚೌಹಾಣ್ (11.86ಸೆ) ಮತ್ತು ಪಶ್ಚಿಮ ಬಂಗಾಳದ ಅನುಷಾ ಬಿಸ್ವಾಸ್ (12.06ಸೆ) ಕ್ರಮವಾಗಿ ಚಿನ್ನ ಮತ್ತು ಕಂಚು ಗೆದ್ದರು.
ಸುಚಿತ್ರಾಗೆ ಬೆಳ್ಳಿ: ಕರ್ನಾಟಕದ ಸುಚಿತ್ರಾ ಎಸ್. ಅವರು 16 ವರ್ಷದೊಳಗಿನ ಬಾಲಕಿಯರ 60 ಮೀಟರ್ ಓಟದಲ್ಲಿ ಬೆಳ್ಳಿ ಗೆದ್ದರು. ಅವರು 7.77 ಸೆಕೆಂಡ್‌ನಲ್ಲಿ ಗುರಿ ಮುಟ್ಟಿದರು.
ಮಹಾರಾಷ್ಟ್ರದ ಶೌರ್ಯಾ ಅಂಬುರೆ (7.60ಸೆ) ಮತ್ತು ಭೂಮಿಕಾ ಎನ್. (7.83ಸೆ) ಕ್ರಮವಾಗಿ ಚಿನ್ನ ಮತ್ತು ಕಂಚು ಗೆದ್ದರು. ಸ್ಪರ್ಧೆಯಲ್ಲಿದ್ದ ಕರ್ನಾಟಕದ ಮತ್ತೊಬ್ಬ ಸ್ಪರ್ಧಿ ನಿಧೀಕ್ಷಾ ನಾಯ್ಕ್ (8.10) ಎಂಟನೇ ಸ್ಥಾನ ಗಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.