ADVERTISEMENT

ಮ್ಯಾರಥಾನ್‌ಗೆ ಅವಿನಾಶ್ ರಾಯಭಾರಿ

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2022, 19:35 IST
Last Updated 7 ನವೆಂಬರ್ 2022, 19:35 IST
ಅವಿನಾಶ್ ಸಬ್ಳೆ
ಅವಿನಾಶ್ ಸಬ್ಳೆ   

ಬೆಂಗಳೂರು:ರೋಟರಿ ಬೆಂಗಳೂರು ಐಟಿ ಕಾರಿಡಾರ್‌ ಆಯೋಜಿಸುವ ಬೆಂಗಳೂರು ಮಿಡ್‌ನೈಟ್ ಮ್ಯಾರಥಾನ್‌ಗೆ ಸ್ಟೀಪಲ್‌ಚೇಸರ್ ಅಥ್ಲೀಟ್‌ ಅವಿನಾಶ್ ಸಬ್ಳೆ ಪ್ರಚಾರ ರಾಯಭಾರಿಯಾಗಿ ನೇಮಕಗೊಂಡಿದ್ದಾರೆ. ಮ್ಯಾರಥಾನ್‌ ಡಿ. 10ರಂದು ವೈಟ್‌ಫೀಲ್ಡ್‌ನಲ್ಲಿ ನಡೆಯಲಿದೆ.

ಸೈಕ್ಲಿಂಗ್ ಟ್ರಯಲ್ಸ್ 13ರಂದು
ಬೆಂಗಳೂರು:
ಅಸ್ಸಾಂನ ಗುವಾಹಟಿಯಲ್ಲಿ ಡಿಸೆಂಬರ್‌ನಲ್ಲಿ ನಡೆಯಲಿರುವ ರಾಷ್ಟ್ರೀಯ ಟ್ರ್ಯಾಕ್‌ ಸೈಕ್ಲಿಂಗ್‌ ಚಾಂಪಿಯನ್‌ಷಿಪ್‌ಗೆ ರಾಜ್ಯ ತಂಡಗಳ ಆಯ್ಕೆಯಾಗಿ ನವೆಂಬರ್‌ 13ರಂದು ಟ್ರಯಲ್ಸ್ ಆಯೋಜಿಸಲಾಗಿದೆ.

ಬೆಳಗಾವಿ ಜಿಲ್ಲೆಯ ಚಂದರಗಿ ಕ್ರೀಡಾಶಾಲೆಯಲ್ಲಿ14, 16, 18 ವರ್ಷದೊಳಗಿನ ಬಾಲಕ-ಬಾಲಕಿಯರಿಗೆ ಮತ್ತು ಮುಕ್ತ ಪುರುಷ-ಮಹಿಳೆಯರಿಗಾಗಿಆಯ್ಕೆ ಟ್ರಯಲ್ಸ್ ನಡೆಯಲಿದೆ.ಹೆಚ್ಚಿನ ಮಾಹಿತಿಗಾಗಿ ರಾಜ್ಯ ಸೈಕ್ಲಿಂಗ್ ಸಂಸ್ಥೆಯ ಗೌರವ ಕಾರ್ಯದರ್ಶಿ ಶ್ರೀಶೈಲ ಎಂ. ಕುರಣಿ (ಮೊಬೈಲ್ ಸಂಖ್ಯೆ 9008377875) ಅವರನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ADVERTISEMENT

ಶೈನಾ–ಐಕ್ಯಗೆ ಪ್ರಶಸ್ತಿ
ಬೆಂಗಳೂರು: ಕರ್ನಾಟಕದ ಶೈನಾ ಮಣಿಮುತ್ತು ಮತ್ತು ಐಕ್ಯ ಶೆಟ್ಟಿ ಅವರು ನವೀ ಮುಂಬೈನಲ್ಲಿ ನಡೆದ ಅಖಿಲ ಭಾರತ ಸಬ್‌ಜೂನಿಯರ್ ರ‍್ಯಾಂಕಿಂಗ್‌ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಪ್ರಶಸ್ತಿ ಜಯಿಸಿದರು.

ಭಾನುವಾರ ಕೊನೆಗೊಂಡ ಟೂರ್ನಿಯ ಬಾಲಕಿಯರ ಡಬಲ್ಸ್ ಫೈನಲ್‌ನಲ್ಲಿ ಕರ್ನಾಟಕದ ಜೋಡಿಯು 21–14, 18–21, 21–19ರಿಂದ ತಮಿಳುನಾಡಿನ ಲಾಕ್ಷಾ ಎನ್‌.ಡಿ. ಮತ್ತು ದೀಕ್ಷಾ ಎಸ್‌.ಆರ್. ಅವರನ್ನು ಪರಾಭವಗೊಳಿಸಿದರು.

ರಯಾನ್ ಮಿಂಚು
ಬೆಂಗಳೂರು:
ಬ್ಲ್ಯೂಸ್ಟಾರ್ ಕ್ಲಬ್ ತಂಡವುಕರ್ನಾಟಕ ರಾಜ್ಯ ಹಾಕಿ ಸಂಸ್ಥೆಯ ಸಿ ಡಿವಿಷನ್ ಲೀಗ್‌ ಚಾಂಪಿಯನ್‌ಷಿಪ್‌ನಲ್ಲಿ ಜಯ ಗಳಿಸಿತು.

ಸೋಮವಾರ ಇಲ್ಲಿ ನಡೆದ ಪಂದ್ಯದಲ್ಲಿ ಬ್ಲ್ಯೂಸ್ಟಾರ್ 7–0ಯಿಂದ ಹಾವೇರಿ ಸ್ಪೋರ್ಟ್ಸ್ ಕ್ಲಬ್ ತಂಡವನ್ನು ಪರಾಭವಗೊಳಿಸಿತು. ರಯಾನ್ ಆರನೇ ನಿಮಿಷದಲ್ಲಿ ತಂಡದ ಪರ ಮೊದಲ ಗೋಲು ಹೊಡೆದರು. ಬಳಿಕ 33 ಮತ್ತು 50ನೇ ನಿಮಿಷಗಳಲ್ಲಿಯೂ ಚೆಂಡನ್ನು ಗೋಲುಪೆಟ್ಟಿಗೆಗೆ ಸೇರಿಸಿದರು. ಶ್ರೀಹರ್ಷ (4 ಮತ್ತು 11ನೇ ನಿ.), ಸುಂದರ್‌ರಾಜ್‌ (39ನೇ ನಿ.) ಮತ್ತು ಪವನ್‌ಕುಮಾರ್ ಕೆ.ಎಂ. (43ನೇ ನಿ.) ವಿಜೇತ ತಂಡದ ಪರ ಗೋಲು ಗಳಿಸಿದರು.

ಇನ್ನೊಂದು ಪಂದ್ಯದಲ್ಲಿ ಫ್ರೆಂಡ್ಸ್ ಕ್ಲಬ್‌,ಕಲಬುರ್ಗಿ 4–1ರಿಂದ ಬಾಷ್ ಸ್ಪೋರ್ಟ್ಸ್ ಕ್ಲಬ್ ಎದುರು ಗೆದ್ದಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.