ADVERTISEMENT

ನವದೆಹಲಿಯಲ್ಲಿ ಮುಂದಿನ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌

ಪಿಟಿಐ
Published 1 ಸೆಪ್ಟೆಂಬರ್ 2025, 23:30 IST
Last Updated 1 ಸೆಪ್ಟೆಂಬರ್ 2025, 23:30 IST
   

ಪ್ಯಾರಿಸ್‌: ಭಾರತವು 2026ರ ವಿಶ್ವಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌ನ ಅತಿಥ್ಯ ವಹಿಸಿಕೊಂಡಿದೆ. ರಾಜಧಾನಿ ನವದೆಹಲಿ ಯಲ್ಲಿ 30ನೇ ಆವೃತ್ತಿಯ ಈ ಪ್ರತಿಷ್ಠಿತ ಚಾಂಪಿಯನ್‌ಷಿಪ್‌ ನಡೆಯಲಿದೆ.

17 ವರ್ಷಗಳ ನಂತರ ಭಾರತಕ್ಕೆ ವಿಶ್ವ ಚಾಂಪಿಯನ್‌ಷಿಪ್ ಮರಳುತ್ತಿದೆ. 2009ರಲ್ಲಿ ಕೊನೆಯ ಬಾರಿ ಈ ಚಾಂಪಿಯನ್‌ಷಿಪ್‌ ಭಾರತದಲ್ಲಿ (ಹೈದರಾಬಾದಿನಲ್ಲಿ) ನಡೆದಿತ್ತು.

ಪ್ಯಾರಿಸ್‌ನಲ್ಲಿ ಭಾನುವಾರ 29ನೇ ವಿಶ್ವ ಚಾಂಪಿಯನ್‌ಷಿಪ್‌ನ ಸಮಾರೋಪದಲ್ಲಿ ಆತಿಥ್ಯದ ಘೋಷಣೆ ಮಾಡಲಾಯಿತು.

ADVERTISEMENT

‘ಪ್ಯಾರಿಸ್‌ನಲ್ಲಿ ಆಯೋಜನೆಗೊಂಡ ರೀತಿಯಲ್ಲೇ ಈ ಚಾಂಪಿಯನ್‌ಷಿಪ್‌ ಅನ್ನು ಗುಣಮಟ್ಟ ಮತ್ತು ವೈಭವದಿಂದ ನಡೆಸಲು ಶತಪ್ರಯತ್ನ ಹಾಕಲಿದ್ದೇವೆ. ಬ್ಯಾಡ್ಮಿಂಟನ್ ಪರಿವಾರವನ್ನು ದೆಹಲಿಗೆ ಸ್ವಾಗತಿಸಲು ನಾವು ಎದುರುನೋಡುತ್ತಿದ್ದೇವೆ’ ಎಂದು ಭಾರತ ಬ್ಯಾಡ್ಮಿಂಟನ್‌ ಸಂಸ್ಥೆಯ ಗೌರವ ಮಹಾ ಕಾರ್ಯದರ್ಶಿ ಸಂಜಯ್ ಮಿಶ್ರಾ ಅವರನ್ನು ಉಲ್ಲೇಖಿಸಿ ಬಿಎಐಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.