ADVERTISEMENT

ಬ್ಯಾಡ್ಮಿಂಟನ್‌: ಎಸ್ಪಿ ದೇವರಾಜ ಪ್ರಥಮ

ಪೊಲೀಸ್ ವಾರ್ಷಿಕ ಕ್ರೀಡಾಕೂಟ: 100 ಮೀ ಓಟದಲ್ಲಿ ಮಾರುತಿ ಹೆಗಡೆ ಪ್ರಥಮ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2021, 14:16 IST
Last Updated 4 ಮಾರ್ಚ್ 2021, 14:16 IST
ಹಾವೇರಿ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಪೊಲೀಸ್‌ ಇಲಾಖೆ ಮತ್ತು ಮಾಧ್ಯಮ ಬಳಗದ ಕ್ರಿಕೆಟ್‌ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದ ಪತ್ರಕರ್ತ ರಮೇಶ ಬಿ.ಹುಣಸಿಮರದ ಅವರು ‘ಸರ್ವೋತ್ತಮ ಆಟಗಾರ’ ಪ್ರಶಸ್ತಿ ಪಡೆದರು. ಹೆಚ್ಚುವರಿ ಜಿಲ್ಲಾಧಿಕಾರಿ ಎಸ್‌.ಯೋಗೇಶ್ವರ, ಸಿಇಒ ಮೊಹಮ್ಮದ್‌ ರೋಶನ್‌, ಎಸ್ಪಿ ಕೆ.ಜಿ.ದೇವರಾಜು, ಎಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಇದ್ದಾರೆ 
ಹಾವೇರಿ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಪೊಲೀಸ್‌ ಇಲಾಖೆ ಮತ್ತು ಮಾಧ್ಯಮ ಬಳಗದ ಕ್ರಿಕೆಟ್‌ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದ ಪತ್ರಕರ್ತ ರಮೇಶ ಬಿ.ಹುಣಸಿಮರದ ಅವರು ‘ಸರ್ವೋತ್ತಮ ಆಟಗಾರ’ ಪ್ರಶಸ್ತಿ ಪಡೆದರು. ಹೆಚ್ಚುವರಿ ಜಿಲ್ಲಾಧಿಕಾರಿ ಎಸ್‌.ಯೋಗೇಶ್ವರ, ಸಿಇಒ ಮೊಹಮ್ಮದ್‌ ರೋಶನ್‌, ಎಸ್ಪಿ ಕೆ.ಜಿ.ದೇವರಾಜು, ಎಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಇದ್ದಾರೆ    

ಹಾವೇರಿ: ಪೊಲೀಸ್ ವಾರ್ಷಿಕ ಕ್ರೀಡಾಕೂಟದ ಎಸ್.ಎಲ್.ಆರ್. ಶೂಟಿಂಗ್, 9 ಎಂ.ಎಂ ಪಿಸ್ತೂಲ್ ಹಾಗೂ ಬ್ಯಾಡ್ಮಿಂಟನ್ ಸ್ಪರ್ಧೆಯ ಸಿಂಗಲ್ ವಿಭಾಗದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಜಿ. ದೇವರಾಜು ಪ್ರಥಮ ಸ್ಥಾನ ಹಾಗೂ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ದ್ವಿತೀಯ ಸ್ಥಾನ ಪಡೆದಿದ್ದಾರೆ.

ನಗರದ ಹೊಸಮನಿ ಸಿದ್ದಪ್ಪ ಜಿಲ್ಲಾ ಕ್ರೀಡಾಂಗಣದಲ್ಲಿ ಮೂರು ದಿನ ನಡೆದ ವಾರ್ಷಿಕ ಕ್ರೀಡಾಕೂಟ ಗುರುವಾರ ಸಮಾರೋಪಗೊಂಡು, ಫಲಿತಾಂಶ ಪ್ರಕಟಗೊಂಡಿದೆ.

ಡಿವೈಎಸ್ಪಿ ವಿಭಾಗದ ಎಸ್.ಎಲ್.ಆರ್.ಶೂಟಿಂಗ್ ವಿಭಾಗದಲ್ಲಿ ಹರಿಶ್ಚಂದ್ರ ನಾಯಕ್ (ಡಿ.ಎ.ಆರ್) ಪ್ರಥಮ ಸ್ಥಾನ,. ಟಿ.ವಿ ಸುರೇಶ (ರಾಣೆಬೆನ್ನೂರು) ಹಾಗೂ ಕಲ್ಲೇಶಪ್ಪ ಓ.ಬಿ.(ಶಿಗ್ಗಾವಿ) ದ್ವಿತೀಯ, ವಿಜಯಕುಮಾರ ಸಂತೋಷ್ (ಹಾವೇರಿ) ತೃತೀಯ ಸ್ಥಾನ ಪಡೆದಿದ್ದಾರೆ. ಶೂಟಿಂಗ್ 9 ಎಂಎಂ ಹಾಗೂ ಚಕ್ರ ಎಸೆತ ಸ್ಪರ್ಧೆಯಲ್ಲಿ ಹರಿಶ್ಚಂದ್ರ ನಾಯಕ್ ಪ್ರಥಮ ಸ್ಥಾನ. ಕಲ್ಲೇಶಪ್ಪ ಓ.ಬಿ. ದ್ವಿತೀಯ, ವಿಜಯಕುಮಾರ ಸಂತೋಷ್ ತೃತೀಯ ಸ್ಥಾನ ಪಡೆದಿದ್ದಾರೆ.

ADVERTISEMENT

ಗುಂಡು ಎಸೆತ ಹಾಗೂ ಬ್ಯಾಡ್ಮಿಂಟನ್ ಸಿಂಗಲ್ ಸ್ಪರ್ಧೆಯಲ್ಲಿ ಡಿ.ವೈ.ಎಸ್.ಪಿ.ಗಳಾದ ಟಿ.ವಿ ಸುರೇಶ ಪ್ರಥಮ, ಹರಿಶ್ಚಂದ್ರ ನಾಯಕ್ ದ್ವಿತೀಯ ಹಾಗೂ ವಿಜಯಕುಮಾರ ಸಂತೋಷ್ ತೃತೀಯ ಸ್ಥಾನ ಪಡೆದಿದ್ದಾರೆ.

ಸಿಪಿಐ, ಪಿ.ಐ ಹಾಗೂ ಆರ್.ಪಿ.ಐ ಅಧಿಕಾರಿಗಳ ವಿಭಾಗದಲ್ಲಿ ಚಕ್ರ ಎಸೆತದಲ್ಲಿ ಎಂ.ಐ.ಗೌಡಪ್ಪಗೌಡ್ರ, ಬಸವರಾಜ ಹಳಬಣ್ಣನವರ, ಬಸವರಾಜ ಪಿ.ಎಸ್, ಗುಂಡು ಎಸೆತದಲ್ಲಿ ಸಂತೋಷ ಪವಾರ, ಎಂ.ವೈ.ಗೌಡಪ್ಪಗೌಡ್ರ, ಮಂಜುನಾಥ ಪಂಡಿತ್, 100 ಮೀ. ಓಟದಲ್ಲಿ ಮಾರುತಿ ಹೆಗಡೆ, ಎಂ.ಐ.ಗೌಡರ, ಬಸವರಾಜ ಪಿ.ಎಚ್., ಶೂಟಿಂಗ್ ಎಸ್.ಎಲ್.ಆರ್. ಸ್ಪರ್ಧೆಯಲ್ಲಿ ಚಿದಾನಂದ, ಎಂ.ಐ.ಗೌಡಪ್ಪಗೌಡರ, ಉಮೇಶಗೌಡ ಪಾಟೀಲ, ಶೂಟಿಂಗ್ 9 ಎಂಎಂ ಪಿಸ್ತೂಲ್ ಸ್ಪರ್ಧೆಯಲ್ಲಿ ಮಾರುತಿ ಹೆಗಡೆ, ಎಂ.ಐ.ಗೌಡಪ್ಪಗೌಡ, ಎಸ್.ಆರ್.ಗಣಾಚಾರ ಕ್ರಮವಾಗಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದಿದ್ದಾರೆ.

ಬ್ಯಾಡ್ಮಿಂಟನ್ ಸಿಂಗಲ್ ಸ್ಪರ್ಧೆಯಲ್ಲಿ ಮಾರುತಿ ಹೆಗಡೆ, ಕೆ.ಆರ್. ಗೋವಿಂದಪ್ಪ ಕ್ರಮವಾಗಿ ಪ್ರಥಮ ದ್ವಿತೀಯ ಹಾಗೂ ಬ್ಯಾಡ್ಮಿಂಟನ್ ಡಬಲ್ ಸ್ಪರ್ಧೆಯಲ್ಲಿ ಮಾರುತಿ ಹೆಗಡೆ, ಮಂಜುನಾಥ ಪ್ರಥಮ, ವಿಜಯಕುಮಾರ ಎಂ.ಸಂತೋಷ, ಬಸವರಾಜ ಹಳಬಣ್ಣನವರ ಕ್ರಮವಾಗಿ ದ್ವಿತೀಯ ಸ್ಥಾನ ಪಡೆದಿದ್ದಾರೆ.

100 ಮೀ. ಓಟದ ಸ್ಪರ್ಧೆಯಲ್ಲಿ ವೆಂಕಟರಾಯ ನಾಯಕ್, ಸಂತೋಷ ಪಾಟೀಲ, ಶಿದ್ಧಾರೂಢ ಬಡಿಗೇರ, ಶೂಟಿಂಗ್ ಎಸ್.ಎಲ್.ಆರ್. ಸ್ಪರ್ಧೆಯಲ್ಲಿ ಮಹಾಂತೇಶ ಎಂ.ಎಂ., ಪಿ.ಬಿ. ಕರಿಗಾರ, ವಿ.ಜಿ ನಾಯಕ್, 9 ಎಂ.ಎಂ ಪಿಸ್ತೂಲ್ ವಿಭಾಗದಲ್ಲಿ ವಿ.ಜಿ.ನಾಯಕ್, ಜಯಪ್ಪ ನಾಯಕ್, ಪ್ರಶಾಂತ ತಳವಾರ, ವಸಂತ ಎಚ್.ಸಿ. ಕ್ರಮವಾಗಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದಿದ್ದಾರೆ.

ಮಹಿಳಾ ವಿಭಾಗದ ಸಿಪಿಐ, ಪಿ.ಎಸ್.ಐ ವಿಭಾಗದ 100 ಮೀ.ಓಟದ ಸ್ಪರ್ಧೆಯಲ್ಲಿ ಆಶಾ ಆರ್, ನಾಗಮ್ಮ ಕೆ., ರೇಣುಕಾ ಜಿ.ಎಂ. ಕ್ರಮವಾಗಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದಿದ್ದಾರೆ.

ಗುಂಪು ಆಟ ವಿಭಾಗದ ವಾಲಿಬಾಲ್ ಹಾಗೂ ಕಬಡ್ಡಿ ಸ್ಪರ್ಧೆಯಲ್ಲಿ ಹಾವೇರಿ ಉಪವಿಭಾಗ ಪ್ರಥಮ, ಡಿ.ಎ.ಆರ್. ಹಾವೇರಿ ತಂಡ ದ್ವಿತೀಯ ಸ್ಥಾನ ಪಡೆದಿದೆ. ಕ್ರಿಕೆಟ್ ಸ್ಪರ್ಧೆಯಲ್ಲಿ ಪೊಲೀಸ್ ತಂಡ ಪ್ರಥಮ, ಮಿಡಿಯಾ ತಂಡ ಎರಡನೇ ಸ್ಥಾನ ಪಡೆದಿದೆ.

ಲಾನ್ ಟೆನ್ನಿಸ್ ಡಬಲ್ ಸ್ಪರ್ಧೆಯ ಅಧಿಕಾರಿಗಳ ವಿಭಾಗದಲ್ಲಿ ವೆಂಕಟೇಶ ನಾಯಕ್, ಪ್ರಕಾಶಗೌಡ ಪ್ರಥಮ, ಮಾರುತಿ ಹೆಗಡೆ, ಸಂತೋಷ ಪಾಟೀಲ ಎರಡನೇ ಸ್ಥಾನ, ಲಾನ್ ಟೆನ್ನಿಸ್ ಸಿಂಗಲ್ ಸ್ಪರ್ಧೆಯಲ್ಲಿ ಮಾರುತಿ ಹೆಗಡೆ ಪ್ರಥಮ, ಮಲ್ಲಿಕಾರ್ಜುನ ಬಾಲದಂಡಿ ದ್ವಿತೀಯ ಸ್ಥಾನ, ಲಾನ್ ಟೆನ್ನಿಸ್ ಸಿಂಗಲ್ ವಿಭಾಗದಲ್ಲಿ ಕರಿಗಾರ ಪ್ರಥಮ, ಎಸ್.ಆರ್.ಬಡಿಗೇರ ದ್ವಿತೀಯ ಸ್ಥಾನ ಪಡೆದಿದ್ದಾರೆ.

ಸಾರ್ವಜನಿಕರು ಮತ್ತು ಅಧಿಕಾರಿಗಳ ವಿಭಾಗದಲ್ಲಿ ಲಾನ್ ಟೆನ್ನಿಸ್ ಡಬಲ್ ಸ್ಪರ್ಧೆಯಲ್ಲಿ ಮಲ್ಲಿಕಾರ್ಜುನ ಬಾಲದಂಡಿ, ಮಾರುತಿ ಹೆಗಡೆ ಪ್ರಥಮ ಸ್ಥಾನ, ಶಿವರಾಜ ಮತ್ತೂರ, ನಾಗರಾಜ ಕಾಸಂಬ ದ್ವಿತೀಯ ಸ್ಥಾನ ಪಡೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.