ADVERTISEMENT

23ರಿಂದ ಬಿಎಐ ಕಚೇರಿ ಬಂದ್‌

ಕೊರೊನಾ ಸೋಂಕು ಪರಿಣಾಮ: ಮನೆಯಿಂದಲೇ ಕಾರ್ಯನಿರ್ವಹಿಸಲು ಸಿಬ್ಬಂದಿಗೆ ಸೂಚನೆ

ಪಿಟಿಐ
Published 20 ಮಾರ್ಚ್ 2020, 19:04 IST
Last Updated 20 ಮಾರ್ಚ್ 2020, 19:04 IST
   

ನವದೆಹಲಿ: ಹೆಚ್ಚುತ್ತಿರುವ ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಭಾರತ ಬ್ಯಾಡ್ಮಿಂಟನ್‌ ಸಂಸ್ಥೆ (ಬಿಎಐ) ಇದೇ 23ರಿಂದ ತನ್ನ ಕಚೇರಿಯನ್ನು ಮುಚ್ಚಲಿದೆ. ಸಂಸ್ಥೆಯು ಶುಕ್ರವಾರ ಈ ವಿಷಯವನ್ನು ಪ್ರಕಟಿಸಿದೆ.

‘ಭಾರತ ಸರಕಾರ ಹಾಗೂ ಕ್ರೀಡಾ ಇಲಾಖೆಯು, ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ನೀಡಿರುವ ಸಲಹೆಗಳು ಹಾಗೂ ರಕ್ಷಣಾ ಕ್ರಮಗಳ ಅನ್ವಯ ಕಚೇರಿಯನ್ನು ಮಾರ್ಚ್‌ 23ರಿಂದ ಮುಚ್ಚಲಾಗುವುದು’ ಎಂದುಬಿಎಐ ಪ್ರಕಟಣೆ ತಿಳಿಸಿದೆ.

‘ಅಧಿಕಾರಿಗಳೊಂದಿಗೆ ಚರ್ಚಿಸಿ ಇದೇ ತಿಂಗಳ 31ಕ್ಕೆ ಪರಿಸ್ಥಿತಿಯನ್ನು ಮರು ಪರಿಶೀಲಿಸಿ ಹಾಗೂ ಸೂಕ್ತ ಕ್ರಮ ಕಂಡುಕೊಳ್ಳಲಾಗುವುದು. ಸಿಬ್ಬಂದಿಯ ಆರೋಗ್ಯ ನಮ್ಮ ಪ್ರಮುಖ ಆದ್ಯತೆಯಾಗಿದೆ’ ಎಂದು ಬಿಎಐ ಪ್ರಧಾನ ಕಾರ್ಯದರ್ಶಿ ಅಜಯ್‌ ಸಿಂಘಾನಿಯಾ ಹೇಳಿದ್ದಾರೆ.

ADVERTISEMENT

ಎಲ್ಲ ಸಿಬ್ಬಂದಿಗೆ ಮನೆಯಿಂದಲೇ ಕಾರ್ಯನಿರ್ವಹಿಸಲು ಸೂಚಿಸಲಾಗಿದೆ. ತುರ್ತುಸ್ಥಿತಿಯಲ್ಲಿ ಮಾತ್ರ ಕಚೇರಿಗೆ ತೆರಳಬಹುದು.

ಕೊರೊನಾ ಸೋಂಕಿನ ಕಾರಣದಿಂದಲೇ ಇದೇ 24ರಿಂದ ನವದೆಹಲಿಯಲ್ಲಿ ನಡೆಯಬೇಕಿದ್ದ ಇಂಡಿಯಾ ಓಪನ್‌ ಟೂರ್ನಿಯನ್ನು ಬಿಎಐ ರದ್ದು ಮಾಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.