ADVERTISEMENT

ಭಾರತ ತಂಡದಲ್ಲಿ ಅರ್ಜುನ್‌ ಹಲಕುರ್ಕಿಗೆ ಸ್ಥಾನ

ಮಟ್ಟೆವ್ ಪೆಲಿಕೋನ್‌ ಕುಸ್ತಿ ಟೂರ್ನಿ

ಪಿಟಿಐ
Published 24 ಫೆಬ್ರುವರಿ 2021, 12:09 IST
Last Updated 24 ಫೆಬ್ರುವರಿ 2021, 12:09 IST
ಅರ್ಜುನ್ ಹಲಕುರ್ಕಿ–ಪಿಟಿಐ ಚಿತ್ರ
ಅರ್ಜುನ್ ಹಲಕುರ್ಕಿ–ಪಿಟಿಐ ಚಿತ್ರ   

ನವದೆಹಲಿ:ಕರ್ನಾಟಕದ ಅರ್ಜುನ್ ಹಲಕುರ್ಕಿ ಅವರು ರೋಮ್‌ನಲ್ಲಿ ನಡೆಯಲಿರುವ ಮಟ್ಟೆವ್ ಪೆಲಿಕೋನ್ ಕುಸ್ತಿ ಟೂರ್ನಿಗೆ ಭಾರತ ತಂಡದಲ್ಲಿ ಸ್ಥಾನ ಗಿಟ್ಟಿಸಿದ್ದಾರೆ. ಮಾರ್ಚ್‌ 4ರಿಂದ 7ರವರೆಗೆ ನಡೆಯುವ ಟೂರ್ನಿಗೆ ಭಾರತ ಕುಸ್ತಿ ಫೆಡರೇಷನ್‌ (ಡಬ್ಲ್ಯುಎಫ್‌ಐ) ಬುಧವಾರ 34 ಮಂದಿಯ ತಂಡವನ್ನು ಪ್ರಕಟಿಸಿದೆ. ಬಜರಂಗ್ ಪುನಿಯಾ ಹಾಗೂ ವಿನೇಶಾ ಪೋಗಟ್ ಟೂರ್ನಿಯ ಪ್ರಮುಖ ಆಕರ್ಷಣೆಯಾಗಿದ್ದಾರೆ.

ಬಜರಂಗ್ ಹಾಗೂ ವಿನೇಶಾ ಅವರು ಹೋದ ವರ್ಷದ ಡಿಸೆಂಬರ್‌ನಲ್ಲಿ ಸರ್ಬಿಯಾದ ಬೆಲ್‌ಗ್ರೇಡ್‌ನಲ್ಲಿನಡೆದ ವಿಶ್ವಕಪ್ ಟೂರ್ನಿಯಲ್ಲಿ ಆಡಿರಲಿಲ್ಲ. ಅಂತರರಾಷ್ಟ್ರೀಯ ರ‍್ಯಾಂಕಿಂಗ್ ಸಿರೀಸ್ ಟೂರ್ನಿಯಾಗಿರುವ ಮಟ್ಟೆವ್ ಪೆಲಿಕೋನ್‌ನಲ್ಲಿ ಉತ್ತಮ ಸಾಮರ್ಥ್ಯ ತೋರಲು ಸಜ್ಜಾಗಿದ್ದಾರೆ.

ಭಾರತ ಫ್ರೀಸ್ಟೈಲ್ ವಿಭಾಗದ ತಂಡದಲ್ಲಿ 2019ರ ವಿಶ್ವಕಪ್ ಕಂಚು ವಿಜೇತ ದೀಪಕ್ ಪುನಿಯಾ, ರವಿ ಕುಮಾರ್‌ ಮತ್ತು ನರಸಿಂಗ್ ಯಾದವ್ ಇದ್ದಾರೆ. ನರಸಿಂಗ್ ಅವರು ಉದ್ದೀಪನಾ ಮದ್ದು ಸೇವಿಸಿ ಸಿಕ್ಕಿಬಿದ್ದು ನಾಲ್ಕು ವರ್ಷಗಳ ನಿಷೇಧ ಶಿಕ್ಷೆ ಅನುಭವಿಸಿದ್ದರು. ಹೋದ ವರ್ಷದ ಡಿಸೆಂಬರ್‌ನಲ್ಲಿ ಅವರ ಮೇಲಿದ್ದ ನಿಷೇಧ ಅಂತ್ಯವಾಗಿತ್ತು.

ADVERTISEMENT

ತಂಡಗಳು ಇಂತಿವೆ: ಫ್ರೀಸ್ಟೈಲ್‌: ರವಿ ಕುಮಾರ್‌ (57 ಕೆಜಿ ವಿಭಾಗ), ಬಜರಂಗ್ ಪುನಿಯಾ (65 ಕೆಜಿ), ರೋಹಿತ್ (65 ಕೆಜಿ), ವಿಶಾಲ್‌ ಕಲಿರಾಮನ್‌ (70 ಕೆಜಿ), ಸಂದೀಪ್ ಸಿಂಗ್ ಮಾನ್‌ (74 ಕೆಜಿ), ನರಸಿಂಗ್ ಯಾದವ್‌ (74 ಕೆಜಿ), ಜೀತೆಂದರ್‌ (74 ಕೆಜಿ), ರಾಹುಲ್ ರಾಠಿ (79 ಕೆಜಿ), ದೀಪಕ್ ಪುನಿಯಾ (86 ಕೆಜಿ), ಪ್ರವೀಣ್ ಚಾಹರ್ (86 ಕೆಜಿ), ಪ್ರವೀಣ್‌ (92 ಕೆಜಿ), ಸತ್ಯವ್ರತ್ ಕಡಿಯಾಣ್‌ (97 ಕೆಜಿ), ಸುಮಿತ್ (125 ಕೆಜಿ).

ಗ್ರೀಕೊ ರೋಮನ್‌: ಅರ್ಜುನ್ ಹಲಕುರ್ಕಿ (55 ಕೆಜಿ), ಮನೀಷ್‌ (60 ಕೆಜಿ), ನೀರಜ್ (63 ಕೆಜಿ), ಗೌರವ್ ದುಹೂನ್‌ (67 ಕೆಜಿ), ಕುಲದೀಪ್ ಮಲಿಕ್‌ (72 ಕೆಜಿ), ಗುರುಪ್ರೀತ್ ಸಿಂಗ್‌ (77 ಕೆಜಿ), ಹರ್‌ಪ್ರೀತ್‌ ಸಿಂಗ್‌ (82 ಕೆಜಿ), ಸುನಿಲ್ ಕುಮಾರ್ (87 ಕೆಜಿ), ದೀಪಾಂಶು (97 ಕೆಜಿ), ನವೀನ್‌ (130 ಕೆಜಿ).

ಮಹಿಳೆಯರು: ಮೀನಾಕ್ಷಿ (50 ಕೆಜಿ), ವಿನೇಶಾ (53 ಕೆಜಿ), ನಂದಿನಿ ಬಾಜೀರಾವ್‌ ಸಲೋಕೆ (53 ಕೆಜಿ), ಅಂಶು (57 ಕೆಜಿ), ಸರಿತಾ (59 ಕೆಜಿ), ಸೋನಮ್ (62 ಕೆಜಿ), ಸಾಕ್ಷಿ ಮಲಿಕ್‌ (62 ಕೆಜಿ), ನಿಶಾ (65 ಕೆಜಿ), ಅನಿತಾ (68 ಕೆಜಿ), ಕಿರಣ್‌ (76 ಕೆಜಿ).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.