ADVERTISEMENT

ಆಳ್ವಾಸ್‌ಗೆ ಪ್ರಶಸ್ತಿ ‘ಡಬಲ್‌’

ರಾಜ್ಯ ಸೀನಿಯರ್‌ ಬಾಲ್‌ ಬ್ಯಾಡ್ಮಿಂಟನ್‌ ಟೂರ್ನಿ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2019, 19:13 IST
Last Updated 11 ಫೆಬ್ರುವರಿ 2019, 19:13 IST
ಪುರುಷರ ವಿಭಾಗದಲ್ಲಿ ಪ್ರಶಸ್ತಿ ಜಯಿಸಿದ ಆಳ್ವಾಸ್‌ ತಂಡದವರು ಟ್ರೋಫಿಯೊಂದಿಗೆ ಸಂಭ್ರಮಿಸಿದರು (ಎಡದಿಂದ) ಕಿರಣ್‌ ಕುಮಾರ್‌, ರವಿರಾಜ್‌, ಆಕಾಶ್‌, ಮಹದೇವಸ್ವಾಮಿ, ಅಭಿಜಿತ್‌ ನಂದಿ (ನಾಯಕ), ಉಲ್ಲಾಸ್‌, ಗೋಪಾಲ್‌, ಯಶವಂತ್‌ ಮತ್ತು ಕವನ್‌.
ಪುರುಷರ ವಿಭಾಗದಲ್ಲಿ ಪ್ರಶಸ್ತಿ ಜಯಿಸಿದ ಆಳ್ವಾಸ್‌ ತಂಡದವರು ಟ್ರೋಫಿಯೊಂದಿಗೆ ಸಂಭ್ರಮಿಸಿದರು (ಎಡದಿಂದ) ಕಿರಣ್‌ ಕುಮಾರ್‌, ರವಿರಾಜ್‌, ಆಕಾಶ್‌, ಮಹದೇವಸ್ವಾಮಿ, ಅಭಿಜಿತ್‌ ನಂದಿ (ನಾಯಕ), ಉಲ್ಲಾಸ್‌, ಗೋಪಾಲ್‌, ಯಶವಂತ್‌ ಮತ್ತು ಕವನ್‌.   

ಬೆಂಗಳೂರು: ಮೂಡುಬಿದಿರೆಯ ಆಳ್ವಾಸ್‌ ಶಿಕ್ಷಣ ಸಂಸ್ಥೆಯ ಪುರುಷರ ಮತ್ತು ಮಹಿಳಾ ತಂಡದವರು ಕರ್ನಾಟಕ ಬಾಲ್‌ ಬ್ಯಾಡ್ಮಿಂಟನ್‌ ಸಂಸ್ಥೆ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಬಾಲ್‌ ಬ್ಯಾಡ್ಮಿಂಟನ್‌ ಸಂಸ್ಥೆ ಸಹಯೋಗದ ರಾಜ್ಯ ಸೀನಿಯರ್‌ ಬಾಲ್‌ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌ನಲ್ಲಿ ಪ್ರಶಸ್ತಿ ಗೆದ್ದಿದ್ದಾರೆ.

ಆಳ್ವಾಸ್‌ ವಿದ್ಯಾಸಿರಿ ಕ್ಯಾಂಪಸ್‌ನಲ್ಲಿ ಭಾನುವಾರ ನಡೆದ ಪುರುಷರ ವಿಭಾಗದ ಫೈನಲ್‌ನಲ್ಲಿ ಆಳ್ವಾಸ್‌ 35–33, 35–27 ನೇರ ಸೆಟ್‌ಗಳಿಂದ ಬೆಂಗಳೂರಿನ ವಿಜಯನಗರ ಕ್ಲಬ್‌ ತಂಡವನ್ನು ಪರಾಭವಗೊಳಿಸಿತು.

ಕೆನರಾ ಬ್ಯಾಂಕ್‌ ತಂಡ ಮೂರನೇ ಸ್ಥಾನ ಪಡೆಯಿತು.

ADVERTISEMENT

ಮಹಿಳಾ ವಿಭಾಗದ ಪ್ರಶಸ್ತಿ ಸುತ್ತಿನ ಹೋರಾಟದಲ್ಲಿ ಆಳ್ವಾಸ್‌ ‘ಎ’ ತಂಡ 35–18, 35–16 ನೇರ ಸೆಟ್‌ಗಳಿಂದ ಆಳ್ವಾಸ್‌ ‘ಬಿ’ ತಂಡವನ್ನು ಸೋಲಿಸಿತು.

ಮಂಗಳೂರು ಜಿಲ್ಲಾ ತಂಡ ಮೂರನೇ ಸ್ಥಾನ ತನ್ನದಾಗಿಸಿಕೊಂಡಿತು.

ಆಳ್ವಾಸ್‌ ತಂಡದ ಯಶವಂತ್‌ ಮತ್ತು ಗಾಯತ್ರಿ ಅವರು ಟೂರ್ನಿಯ ಶ್ರೇಷ್ಠ ಆಟಗಾರ ಮತ್ತು ಆಟಗಾರ್ತಿ ಗೌರವ ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.