ADVERTISEMENT

ಬ್ಯಾಂಕ್‌ ಆಫ್‌ ಬರೋಡ ತಂಡಕ್ಕೆ ಸುಲಭ ಜಯ

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2020, 20:07 IST
Last Updated 22 ಫೆಬ್ರುವರಿ 2020, 20:07 IST

ಬೆಂಗಳೂರು: ಬ್ಯಾಂಕ್‌ ಆಫ್‌ ಬರೋಡಾ ತಂಡ, ಪ್ರೊ.ಎನ್‌.ಸಿ.ಪರಪ್ಪ ಸ್ಮಾರಕ ಟ್ರೋಫಿಗಾಗಿ ನಡೆಯುತ್ತಿರುವ ರಾಜ್ಯ ‘ಎ’ ಡಿವಿಷನ್‌ ಬ್ಯಾಸ್ಕೆಟ್‌ಬಾಲ್‌ ಚಾಂಪಿಯನ್‌ಷಿಪ್‌ನಲ್ಲಿ ಬೀಗಲ್ಸ್‌ ತಂಡವನ್ನು 57–29 ರಿಂದ ಸೋಲಿಸಿತು.

ಎಂ.ಎನ್‌.ಕೃಷ್ಣರಾವ್‌ ಪಾರ್ಕ್‌ ಮೈದಾನದಲ್ಲಿ ಶನಿವಾರ ನಡೆದ ಇತರ ಪಂದ್ಯಗಳಲ್ಲಿ ಎಎಸ್‌ಸಿ 58–35 ರಿಂದ ಮೈಸೂರಿನ ರೈಸಿಂಗ್‌ ಸ್ಟಾರ್‌ ತಂಡವನ್ನು; ಐಬಿಬಿಸಿ 63–40 ರಿಂದ ಜೆಎಸ್‌ಸಿ ತಂಡವನ್ನು, ಡಿವೈಇಎಸ್‌ 23–12 ರಿಂದ ಬಿಎಸ್‌ಎನ್‌ಎಲ್‌ ತಂಡವನ್ನು, ಜಿಎಸ್‌ಟಿ ಮತ್ತು ಕಸ್ಟಮ್ಸ್‌ ತಂಡ 68–61 (ವಿರಾಮ 23–24) ರಿಂದ ಎಸ್‌.ಬ್ಲೂಸ್‌ ತಂಡವನ್ನು ಮಣಿಸಿದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT