ADVERTISEMENT

ಬ್ಯಾಸ್ಕೆಟ್‌ಬಾಲ್‌: ಬೆಂಗಳೂರು ಉತ್ತರ ಜಿಲ್ಲೆ ಚಾಂಪಿಯನ್‌

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2025, 1:18 IST
Last Updated 8 ಅಕ್ಟೋಬರ್ 2025, 1:18 IST
ರಾಜ್ಯಮಟ್ಟದ 19 ವರ್ಷದೊಳಗಿನ ಬಾಸ್ಕೆಟ್‌ಬಾಲ್ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದ ಬೆಂಗಳೂರು ಉತ್ತರ ಜಿಲ್ಲೆಯ ಬಾಲಕರ ಮತ್ತು ಬಾಲಕಿಯರ ತಂಡಗಳು
ರಾಜ್ಯಮಟ್ಟದ 19 ವರ್ಷದೊಳಗಿನ ಬಾಸ್ಕೆಟ್‌ಬಾಲ್ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದ ಬೆಂಗಳೂರು ಉತ್ತರ ಜಿಲ್ಲೆಯ ಬಾಲಕರ ಮತ್ತು ಬಾಲಕಿಯರ ತಂಡಗಳು   

ಬೆಂಗಳೂರು: ಬೆಂಗಳೂರು ಉತ್ತರ ಜಿಲ್ಲೆಯ ಬಾಲಕರ ಮತ್ತು ಬಾಲಕಿಯರ ತಂಡಗಳು ರಾಜ್ಯಮಟ್ಟದ 19 ವರ್ಷದೊಳಗಿನ ಬಾಸ್ಕೆಟ್‌ಬಾಲ್ ಟೂರ್ನಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿವೆ.

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ (ಪದವಿಪೂರ್ವ) ಬೆಂಗಳೂರು ಉತ್ತರ ಜಿಲ್ಲೆ ಸಹಯೋಗದೊಂದಿಗೆ ಜಾಲಹಳ್ಳಿ ಸೇಂಟ್ ಕ್ಲಾರೆಟ್ ಪಿಯು ಕಾಲೇಜು ಆವರಣದಲ್ಲಿ ಟೂರ್ನಿ ಆಯೋಜಿಸಲಾಯಿತು. ರಾಜ್ಯದ 33 ಜಿಲ್ಲೆಗಳಿಂದ 600 ಸ್ಪರ್ಧಾಳುಗಳು ಭಾಗವಹಿಸಿದ್ದರು. ಬೆಂಗಳೂರು ಉತ್ತರ ಜಿಲ್ಲಾ ತಂಡಗಳು ಸತತ ಎಂಟನೇ ವರ್ಷವೂ ಚಾಂಪಿಯನ್ ಆಗಿ ಹೊರಹೊಮ್ಮಿವೆ.

ಬೆಂಗಳೂರು ಉತ್ತರ ಜಿಲ್ಲೆಯ ಪಿಯು ಮಂಡಳಿಯ ಉಪ ನಿರ್ದೇಶಕ ಟಿ. ಪಾಲಾಕ್ಷ, ಸೇಂಟ್ ಕ್ಲಾರೆಟ್ ಪಿಯು ಕಾಲೇಜಿನ ಪ್ರಾಂಶುಪಾಲ ಮೈಕೆಲ್ ಡಿಸೋಜ ಮತ್ತು ಕರ್ನಾಟಕ ರಾಜ್ಯ ಬಾಸ್ಕೆಟ್‌ಬಾಲ್ ಸಂಸ್ಥೆಯ ವೆಂಕಟೇಶ್ ವಿಜೇತರಿಗೆ ಟ್ರೋಫಿಗಳನ್ನು ಹಸ್ತಾಂತರಿಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.