ಬ್ಯಾಸ್ಕೆಟ್‌ಬಾಲ್
ಬೆಂಗಳೂರು: ಅನಿಲ್ ಹಾಗೂ ತಿಲಕ್ ಅವರ ಆಟದ ಬಲದಿಂದ ಕೋಲಾರ ಜಿಲ್ಲಾ ತಂಡವು ಎಸ್.ರಂಗರಾಜನ್ ಸ್ಮರಣಾರ್ಥ ಟ್ರೋಫಿಗಾಗಿ ನಡೆಯುತ್ತಿರುವ ರಾಜ್ಯ ‘ಸಿ’ ಡಿವಿಷನ್ ಲೀಗ್ ಪುರುಷರ ಬ್ಯಾಸ್ಕೆಟ್‌ಬಾಲ್ ಚಾಂಪಿಯನ್‌ಷಿಪ್‌ನ ಪಂದ್ಯದಲ್ಲಿ 61–51ರಿಂದ ಮೌಂಟ್ಸ್ ಕ್ಲಬ್ ತಂಡವನ್ನು ಮಣಿಸಿತು.
ಕಂಠೀರವ ಕ್ರೀಡಾಂಗಣದ ಬ್ಯಾಸ್ಕೆಟ್‌ಬಾಲ್ ಕೋರ್ಟ್‌ನಲ್ಲಿ ಮಂಗಳವಾರ ನಡೆದ ಲೀಗ್ ಹಂತದ ಪಂದ್ಯದಲ್ಲಿ ಮೊದಲಾರ್ಧದಲ್ಲಿ ಹತ್ತು ಅಂಕಗಳಿಂದ (22–32) ಹಿನ್ನಡೆಯಲ್ಲಿದ್ದ ಕೋಲಾರ ತಂಡವು ನಂತರದಲ್ಲಿ ಪಾರಮ್ಯ ಮೆರೆಯಿತು. ಅನಿಲ್ 27 ಹಾಗೂ ತಿಲಕ್ 10 ಅಂಕ ಗಳಿಸಿದರು. ಮೌಂಟ್ಸ್ ಕ್ಲಬ್ ತಂಡದ ಆ್ಯಂಡ್ರ್ಯೂ 21 ಹಾಗೂ ತರುಣ್ 12 ಅಂಕ ಕಲೆಹಾಕಿದರು.
ಫಲಿತಾಂಶಗಳು: ಎಚ್‌ಬಿಆರ್ ಬಿ.ಸಿ ತಂಡವು 71–67ರಿಂದ ಮೈಸೂರು ಜಿಲ್ಲೆ ಎ ವಿರುದ್ಧ; ಮೈಸೂರು ಜಿಲ್ಲೆ ಬಿ 64–57ರಿಂದ ಧಾರವಾಡ ಜಿಲ್ಲೆ ಎ ವಿರುದ್ಧ; ಚಿಕ್ಕಮಗಳೂರು ಜಿಲ್ಲೆ 85–76ರಿಂದ ಕೋಲಾರ ಜಿಲ್ಲೆ ವಿರುದ್ಧ; ಹಾಸನ ಜಿಲ್ಲೆ 69–48ರಿಂದ ಧಾರವಾಡ ಜಿಲ್ಲೆ ಬಿ ವಿರುದ್ಧ; ಯಲಹಂಕ ನ್ಯೂ ಟೌನ್ ಬಿ.ಸಿ ತಂಡವು 61–50ರಿಂದ ಮೈಸೂರು ಜಿಲ್ಲೆ ಎ ವಿರುದ್ಧ; ಎಂಇಜಿ & ಸೆಂಟರ್ ತಂಡವು 71–36ರಿಂದ ಹಾಸನ ಜಿಲ್ಲೆ ವಿರುದ್ಧ; ಮೈಸೂರು ಜಿಲ್ಲೆ ಬಿ ತಂಡವು 68–54ರಿಂದ ಸಿನ್‌ಸಿನಾಟೀಸ್ ಬಿ.ಸಿ ವಿರುದ್ಧ; ಕೋಲಾರ ಜಿಲ್ಲಾ ತಂಡವು 61–51ರಿಂದ ಮೌಂಟ್ಸ್ ಕ್ಲಬ್ ವಿರುದ್ಧ ಹಾಗೂ ಡಿಆರ್‌ಡಿಒ ತಂಡವು 64–46ರಿಂದ ಧಾರವಾಡ ಜಿಲ್ಲೆ ಬಿ ವಿರುದ್ಧ ಜಯ ಸಾಧಿಸಿದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.