ADVERTISEMENT

ಬ್ಯಾಸ್ಕೆಟ್‌ಬಾಲ್‌: ಆರ್‌ವಿಸಿಇಗೆ ಮಿಶ್ರಫಲ

​ಪ್ರಜಾವಾಣಿ ವಾರ್ತೆ
Published 30 ಜನವರಿ 2019, 20:15 IST
Last Updated 30 ಜನವರಿ 2019, 20:15 IST

ಬೆಂಗಳೂರು: ರಾಷ್ಟ್ರೀಯ ವಿದ್ಯಾಲಯ ಎಂಜಿನಿಯರಿಂಗ್ ಕಾಲೇಜು (ಆರ್‌ವಿಸಿಇ) ತಂಡಗಳು ಮಲ್ಲೇಶ್ವರಂ ಕಪ್‌ಗಾಗಿ ನಡೆಯುತ್ತಿರುವ ಅಂತರ ಕಾಲೇಜುಗಳ ರಾಜ್ಯಮಟ್ಟದ ಬ್ಯಾಸ್ಕೆಟ್‌ಬಾಲ್ ಟೂರ್ನಿಯಲ್ಲಿ ಬುಧವಾರ ಮಿಶ್ರ ಫಲ ಕಂಡವು.

ಬೀಗಲ್ಸ್‌ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಟೂರ್ನಿಯ ಮಹಿಳೆಯರ ವಿಭಾಗದಲ್ಲಿ ಸೃಷ್ಟಿ ಕಾಲೇಜು ತಂಡವನ್ನು ಆರ್‌ವಿಸಿಇ ಮಣಿಸಿದರೆ, ಪುರುಷರ ಹಣಾಹಣಿಯಲ್ಲಿ ಜೈನ್ ವಿವಿ ತಂಡಕ್ಕೆ ಮಣಿಯಿತು.

ರಕ್ಷಿತಾ ಗಳಿಸಿದ 12 ಪಾಯಿಂಟ್‌ಗಳ ನೆರವಿನಿಂದ ಆರ್‌ವಿಸಿಇ 53–38ರಿಂದ ಸೃಷ್ಟಿ ಕಾಲೇಜನ್ನು ಸೋಲಿಸಿತು. ಆರಂಭದಿಂದಲೇ ಆಕ್ರಮಣಕಾರಿ ಆಟವಾಡಿದ ಆರ್‌ವಿಸಿಇ ಮೊದಲಾರ್ಧದಲ್ಲಿ 32–10ರ ಮುನ್ನಡೆ ಸಾಧಿಸಿತ್ತು.

ADVERTISEMENT

ಮತ್ತೊಂದು ಪಂದ್ಯದಲ್ಲಿ ನ್ಯೂ ಹೊರೈಜನ್‌ ಎಂಜಿನಿಯರಿಂಗ್ ಕಾಲೇಜು 35–11ರಿಂದ ರಾಮಯ್ಯ ತಾಂತ್ರಿಕ ಸಂಸ್ಥೆ ತಂಡವನ್ನು ಮಣಿಸಿತು. ಮೋನಿದೀಪ್‌ ಎಂಟು ಪಾಯಿಂಟ್ ಗಳಿಸಿ ಹೊರೈಜನ್ ತಂಡದ ಜಯಕ್ಕೆ ಕಾರಣರಾದರು.

ಪುರುಷರ ವಿಭಾಗದಲ್ಲಿ ಅಭಿಷೇಕ್‌ (19 ಪಾಯಿಂಟ್ಸ್‌) ಮತ್ತು ನಿಖಿಲ್‌ (17 ಪಾಯಿಂಟ್ಸ್‌) ಮಿಂಚಿದ ಪಂದ್ಯದಲ್ಲಿ ಜೈನ್ ವಿವಿ 65–58ರಿಂದ ಆರ್‌ವಿಸಿಇಗೆ ಸೋಲುಣಿಸಿತು. ಮತ್ತೊಂದು ಪಂದ್ಯದಲ್ಲಿ ಸಿಂಧಿ ಕಾಲೇಜು 47–41ರಿಂದ ಮೀನಾಕ್ಷಿ ಐಟಿಯನ್ನು ಸೋಲಿಸಿತು. ವಿಜಯಿ ತಂಡದ ಪರ ಆತಿಶ್‌ 18 ಪಾಯಿಂಟ್ ಗಳಿಸಿದರು. ಮೀನಾಕ್ಷಿ ತಂಡಕ್ಕೆ ಸೈಯದ್‌ 20 ಪಾಯಿಂಟ್‌ ಗಳಿಸಿಕೊಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.