ADVERTISEMENT

ಡುರಾಂಡ್‌ ಕಪ್‌: ಬಿಎಫ್‌ಸಿ ತಂಡದಲ್ಲಿ 8 ಹೊಸಮುಖ

​ಪ್ರಜಾವಾಣಿ ವಾರ್ತೆ
Published 15 ಆಗಸ್ಟ್ 2022, 16:35 IST
Last Updated 15 ಆಗಸ್ಟ್ 2022, 16:35 IST

ಕೋಲ್ಕತ್ತ: ಬೆಂಗಳೂರು ಫುಟ್‌ಬಾಲ್‌ ಕ್ಲಬ್‌ (ಬಿಎಫ್‌ಸಿ) ತಂಡದ ಜತೆ ಹೊಸದಾಗಿ ಒಪ್ಪಂದ ಮಾಡಿಕೊಂಡಿರುವ ಎಂಟೂ ಆಟಗಾರರು ಡುರಾಂಡ್‌ ಕಪ್‌ ಫುಟ್‌ಬಾಲ್‌ ಟೂರ್ನಿಯಲ್ಲಿ ಕಣಕ್ಕಿಳಿಯಲಿದ್ದಾರೆ.

ಡುರಾಂಡ್‌ ಕಪ್‌ ಟೂರ್ನಿಗೆ 25 ಸದಸ್ಯರ ಬಿಎಫ್‌ಸಿ ತಂಡವನ್ನು ಸೋಮವಾರ ಪ್ರಕಟಿಸಲಾಯಿತು. ಬೆಂಗಳೂರಿನ ತಂಡ ಬುಧವಾರ ನಡೆಯಲಿರುವ ತನ್ನ ಮೊದಲ ಪಂದ್ಯದಲ್ಲಿ ಜಮ್ಶೆಡ್‌ಪುರ ಎಫ್‌ಸಿ ತಂಡವನ್ನು ಎದುರಿಸಲಿದೆ.

ರಾಯ್‌ ಕೃಷ್ಣ, ಪ್ರಬೀರ್‌ ದಾಸ್, ಜೆವಿ ಹೆರ್ನಾಂಡೆಸ್‌, ಸಂದೇಶ್‌ ಜಿಂಗಾನ್, ಫೈಸಲ್‌ ಅಲಿ, ಹೀರಾ ಮೊಂಡಲ್, ಅಲೆಕ್ಸಾಂಡರ್‌ ಜೊವನೊವಿಚ್ ಮತ್ತು ಅಮೃತ್‌ ಗೋಪೆ ಅವರು ಬಿಎಫ್‌ಸಿ ಜತೆ ಹೊಸದಾಗಿ ಒಪ್ಪಂದ ಮಾಡಿಕೊಂಡಿರುವ ಆಟಗಾರರು.

ADVERTISEMENT

ಮುಖ್ಯ ಕೋಚ್‌ ಸೈಮನ್‌ ಗ್ರೇಸನ್‌ ಮಾರ್ಗದರ್ಶನದಲ್ಲಿ ತರಬೇತಿ ಪಡೆದಿರುವ ಬಿಎಫ್‌ಸಿ ತಂಡ, ಬೆಂಗಳೂರಿನಿಂದ ಭಾನುವಾರ ಕೋಲ್ಕತ್ತಕ್ಕೆ ಬಂದಿಳಿಯಿತು.

ಬಿಎಫ್‌ಸಿಯು ಕೊನೆಯ ಬಾರಿ ಡುರಾಂಡ್‌ ಕಪ್‌ನಲ್ಲಿ ಆಡಿದ್ದಾಗ ತಂಡದಲ್ಲಿ ಯುವ ಆಟಗಾರರೇ ಹೆಚ್ಚಿನ ಸಂಖ್ಯೆಯಲ್ಲಿದ್ದರು. ವಿದೇಶದ ಯಾವುದೇ ಆಟಗಾರರು ಇರಲಿಲ್ಲ.

ಸುನಿಲ್‌ ಚೆಟ್ರಿ ನೇತೃತ್ವದ ತಂಡ ‘ಎ’ ಗುಂಪಿನಲ್ಲಿ ಜಮ್ಶೆಡ್‌ಪುರ ಎಫ್‌ಸಿ, ಇಂಡಿಯನ್‌ ಏರ್‌ಫೋರ್ಸ್‌ ಫುಟ್‌ಬಾಲ್‌ ಕ್ಲಬ್‌, ಎಫ್‌ಸಿ ಗೋವಾ ಮತ್ತು ಮಹಮಡನ್‌ ಸ್ಪೋರ್ಟಿಂಗ್‌ ಕ್ಲಬ್‌ ಜತೆ ಸ್ಥಾನ ಪಡೆದಿದೆ.

ತಂಡದ ಇತರ ಸದಸ್ಯರು: ಸುನಿಲ್‌ ಚೆಟ್ರಿ (ನಾಯಕ), ಗುರುಪ್ರೀತ್‌ ಸಿಂಗ್‌ ಸಂಧು, ಲಾರಾ ಶರ್ಮಾ, ಅಲನ್‌ ಕೋಸ್ಟಾ, ನಮ್‌ಗ್ಯಾಲ್ ಭುಟಿಯಾ, ಪರಾಗ್‌ ಶ್ರೀವಸ್, ಡಬ್ಲ್ಯು.ಮ್ಯುರಂಗ್, ಬ್ರೂನೊ ರಮಿರೆಸ್, ಜಯೇಶ್‌ ರಾಣೆ, ಸುರೇಶ್‌ ವಾಂಗ್‌ಜಮ್, ದಾನಿಶ್‌ ಫರೂಖ್, ರೋಹಿತ್‌ ಕುಮಾರ್, ಬಿಸ್ವ ದರ್ಜೀ, ಪ್ರಿನ್ಸ್‌ ಇಬಾರ, ಉದಾಂತ ಸಿಂಗ್, ಶಿವಶಕ್ತಿ ನಾರಾಯಣನ್, ಲಿಯೊನ್ ಆಗಸ್ಟಿನ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.