ADVERTISEMENT

ಬೀಲ್‌ ಚೆಸ್‌ ಉತ್ಸವ: ಮೂರನೇ ಪಂದ್ಯದಲ್ಲಿ ಡ್ರಾ ಸಾಧಿಸಿದ ಪೆಂಟಾಲ ಹರಿಕೃಷ್ಣ

ಪಿಟಿಐ
Published 24 ಜುಲೈ 2020, 11:53 IST
Last Updated 24 ಜುಲೈ 2020, 11:53 IST
ಪೆಂಟಾಲ ಹರಿಕೃಷ್ಣ (ಬಲ)–ಪಿಟಿಐ ಸಂಗ್ರಹ ಚಿತ್ರ
ಪೆಂಟಾಲ ಹರಿಕೃಷ್ಣ (ಬಲ)–ಪಿಟಿಐ ಸಂಗ್ರಹ ಚಿತ್ರ   

ಚೆನ್ನೈ : ಭಾರತದ ಗ್ರ್ಯಾಂಡ್‌ಮಾಸ್ಟರ್‌ ಪೆಂಟಾಲ ಹರಿಕೃಷ್ಣ ಅವರು ಬೀಲ್‌ ಚೆಸ್‌ ಉತ್ಸವದಮೂರನೇ ಪಂದ್ಯದಲ್ಲೂ ಡ್ರಾ ಸಾಧಿಸಿದ್ದಾರೆ. ಸ್ವಿಟ್ಜರ್ಲೆಂಡ್‌ನಲ್ಲಿ ನಡೆಯುತ್ತಿರುವ ಟೂರ್ನಿಯಲ್ಲಿ ಗುರುವಾರ ಅವರು ಸ್ಥಳೀಯ ಆಟಗಾರ ನೋಯಲ್‌ ಸ್ಟಡರ್‌ ಎದುರು ’ಒಪ್ಪಂದ‘ಕ್ಕೆ ಸಮ್ಮತಿಸಿದರು.

ವಿಶ್ವದ 26ನೇ ಕ್ರಮಾಂಕದ ಆಟಗಾರ ಹರಿಕೃಷ್ಣ, ಟೂರ್ನಿಯಲ್ಲಿ ಸದ್ಯ 13.5 ಪಾಯಿಂಟ್ಸ್‌ಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದ್ದಾರೆ.

ಟೂರ್ನಿಯ ಎರಡನೇ ಸುತ್ತಿನ ಹಣಾಹಣಿಯಲ್ಲಿ ಹರಿಕೃಷ್ಣ ಅವರು ಅಜರ್‌ಬೈಜಾನ್‌ನ ಅರ್ಕಾದಿಜ್‌ ನೈದಿತ್‌ ಎದುರು ಡ್ರಾ ಸಾಧಿಸಿದ್ದರು.

ADVERTISEMENT

ಪೋಲೆಂಡ್‌ನ ರಾಡೊಸ್ಲಾವ್‌ ವೊತಾಜೆಕ್‌ ಹಾಗೂ ಇಂಗ್ಲೆಂಡ್‌ನ ಮೈಕೆಲ್‌ ಆ್ಯಡಮ್ಸ್‌ ನಡುವಣ ಮತ್ತೊಂದು ಪಂದ್ಯವು ಡ್ರಾನಲ್ಲಿ ಕೊನೆಗೊಂಡಿತು.

ಬೀಲ್‌ ಚೆಸ್‌ ಉತ್ಸವದ ರ‍್ಯಾಪಿಡ್‌ ವಿಭಾಗದಲ್ಲಿ ಎರಡನೇ ಸ್ಥಾನ ಪಡೆದಿದ್ದ ಹರಿಕೃಷ್ಣ, ಚೆಸ್‌960 ಸ್ಪರ್ಧೆಯಲ್ಲಿ ಪ್ರಶಸ್ತಿ ಜಯಿಸಿದ್ದರು.

ಕೊರೊನಾ ಕಾಲದಲ್ಲಿ ನಡೆಯುತ್ತಿರುವ ಮೊದಲ ಅಂತರರಾಷ್ಟ್ರೀಯ ಚೆಸ್‌ ಇದಾಗಿದೆ.

’ಕೋವಿಡ್‌ಗೆ ಸಂಬಂಧಿಸಿದ ಎಲ್ಲ ನಿಯಮಗಳಿಗೆ ಬದ್ಧರಾಗಿ ಟೂರ್ನಿಯನ್ನು ನಡೆಸಲಾಗುತ್ತಿದೆ‘ ಎಂದು ಟೂರ್ನಿಯ ವೆಬ್‌ಸೈಟ್‌ನಲ್ಲಿ ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.