ಹೊಸಪೇಟೆ (ವಿಜಯನಗರ): ಮೈಸೂರಿನ ಕೆ.ಎಂ.ಶಶಿಧರ್ ಅವರು ಇಲ್ಲಿನ ಸೇವಿಯರ್ ಅಂಗವಿಕಲರ ಸೇವಾ ಸಮಿತಿ ಹಾಗೂ ರೋಟರಿ ಕ್ಲಬ್ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ನಾಲ್ಕನೇ ರಾಜ್ಯಮಟ್ಟದ ವಿಜಯನಗರ ಕಪ್ ಅಂಧರ ಮುಕ್ತ ಚೆಸ್ ಟೂರ್ನಿಯಲ್ಲಿ 7.5 ಅಂಕದೊಂದಿಗೆ ಚಾಂಪಿಯನ್ ಆಗಿದ್ದಾರೆ.
ಇಲ್ಲಿ ಭಾನುವಾರ ಕೊನೆಗೊಂಡ ಪ್ರಧಾನ ಸುತ್ತಿನ ಒಂಬತ್ತನೇ ಪಂದ್ಯದ ಕೊನೆಯಲ್ಲಿ ತಲಾ 7 ಅಂಕ ಗಳಿಸಿ, ಇತರ ಏಳು ಮಂದಿಯನ್ನು ಹಿಂದಿಕ್ಕಿ ₹18,001 ಬಹುಮಾನ ಗಳಿಸಿದರು. ಬೆಂಗಳೂರಿನ ರವಿಕಿರಣ್ ದ್ವಿತೀಯ, ಎ.ಆರ್.ರಮೇಶ ತೃತೀಯ, ಕೆ.ಮುನಿರಾಜು ನಾಲ್ಕನೇ ಸ್ಥಾನ ಪಡೆದರು.
ಕಲಬುರ್ಗಿಯ ಕಿರಣ್ ಕುಮಾರ್ ಎ.ಸಿಂಪಿ, ಬೆಂಗಳೂರಿನ ಇ.ವಿಜಯ್, ಶಿವಮೊಗ್ಗದ ವೃತಿ ಜೈನ್ , ಧಾರವಾಡದ ಎನ್.ಎಂ.ಶಿವನಗೌಡ ಅವರು ಸಹ 7 ಅಂಕ ಗಳಿಸಿದರೂ 5ರಿಂದ 7ನೇ ಸ್ಥಾನ ಗಳಿಸಿದರು.
ಟೂರ್ನಿಯ ಉತ್ತಮ ಮಹಿಳಾ ಆಟಗಾರ್ತಿ ಪ್ರಶಸ್ತಿಯನ್ನು ಬೆಂಗಳೂರಿನ ಬಿ.ಜ್ಯೋತಿ ಗಳಿಸಿದರು. ಶಿವಮೊಗ್ಗದ ಶ್ರೀಶಾರದಾದೇವಿ ಕ್ಲಬ್‌ನ ಟಿ.ತಿಪ್ಪೇಸ್ವಾಮಿ ಅವರು 19 ವರ್ಷದೊಳಗಿನ ಉತ್ತಮ ಯುವ ಚೆಸ್ ಪಟು, ಹೊಸಪೇಟೆಯ ಸೇವಿಯರ್ ಚಾರಿಟಬಲ್ ಟ್ರಸ್ಟ್‌ನ ರಾಧಿಕಾ ಅವರು ಉತ್ತಮ ಆಟಗಾರ್ತಿ, ಬೆಂಗಳೂರಿನ ಕೇಶವಮೂರ್ತಿ ಹಿರಿಯ ನಾಗರಿಕ ವಿಭಾಗದ ಉತ್ತಮ ಆಟಗಾರ ಮತ್ತು ಶಿವಮೊಗ್ಗ ಶ್ರೀಶಾರದಾದೇವಿ ಕ್ಲಬ್‌ನ ದೊಡ್ಡಿ ಶ್ರಾವಿಕಾ ಅವರು ಜೂಣಿಯರ್ ವಿಭಾಗದ ಆಟಗಾರ್ತಿಯ ಗೌರವಕ್ಕೆ ಪಾತ್ರರಾದರು.
ಫಲಿತಾಂಶ: ಕೃಷ್ಣ ಉಡುಪ, ಶಿವಮೊಗ್ಗ, ಖಾದಿರ್ ಬವಾಸ್ ಕೊರಬ್, ವಿಜಯಪುರ, ಬಸಲಿಂಗಪ್ಪ ಮರಡ್ಡಿ (ತಲಾ 6.5 ಅಂಕ), ಕುಶಾಲ್ ರಾಮಣ್ಣ ಜಗಲಿ, ವಿಜಯಪುರ, ನವೀನ್ ಮೆರ್ವಾಡೆ, ಗದಗ, ಲಿಂಗರಾಜು, ಮೈಸೂರು, ಪ್ರಜ್ವಲ್ ಕೆದರಿ ಹಳಿಯಾಳ, ಬೆಳಗಾವಿ, ಕೆ.ಎಸ್.ನಾಗರಾಜ, ಮೈಸೂರು, ಜಿ.ರಘುನಾಥ, ಚಿತ್ರದುರ್ಗ, ಧರ್ಮರಾಜು, ತುಮಕೂರು, ಪೊ.ಎಸ್.ರವೀಶ್, ಕೋಲಾರ, ಶಿವಾನಂದ ಎಸ್.ಜೋಗಿ, ವಿಜಯಪುರ, ದೇವೇಂದ್ರ, ರಾಯಚೂರು (ತಲಾ 6 ಅಂಕ). ಡಿ.ಎನ್.ಸಂತೋಷ್ ಕುಮಾರ್, ಹೊಸಪೇಟೆ, ಮಾಯಪ್ಪ ಮೃಜಿ ಬಾಗಲಕೋಟೆ, ಶಿವಾನಂದ ಎನ್.ಐಹೊಳೆ, ಗದಗ (ತಲಾ 5.5 ಅಂಕ).
ಮಲ್ಲಿಕಾರ್ಜುನ, ಶ್ರೀಶಾರದಾದೇವಿ ಸಂಸ್ಥೆ, ಶಿವಮೊಗ್ಗ (5 ಅಂಕ).
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.