ಅಮ್ಮಾನ್ (ಜೋರ್ಡನ್): ಯುವ ಬಾಕ್ಸರ್‌ಗಳಾದ ಹಾರ್ದಿಕ್ ದಹಿಯಾ ಮತ್ತು ರುದ್ರಾಕ್ಷ್ ಸಿಂಗ್ ಅವರು ಸಾಧಿಸಿದ ಅಧಿಕಾರಯುತ ಗೆಲುವಿನೊಡನೆ ಭಾರತವು 15 ಮತ್ತು 17 ವರ್ಷದೊಳಗಿನವರ ಏಷ್ಯನ್ ಬಾಕ್ಸಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಶುಭಾರಂಭ ಮಾಡಿದೆ.
ಶನಿವಾರ ನಡೆದ 15 ವರ್ಷದೊಳಗಿನವರ ಬಾಲಕರ ವಿಭಾಗದ 43 ಕೆ.ಜಿ. ಸೆಣಸಾಟದಲ್ಲಿ ಹಾರ್ದಿಕ್ ಅವರು ಕಿರ್ಗಿಸ್ತಾನದ ಕುಬಾನಿಚ್‌ಬೆಕ್ ಬೊಲುಶೋವ್ ವಿರುದ್ಧ ಸರ್ವಾನುಮತದ ತೀರ್ಪಿನಲ್ಲಿ 5–0 ಯಿಂದ ಗೆದ್ದರು.
ರುದ್ರಾಕ್ಷ್, 46 ಕೆ.ಜಿ. ವಿಭಾಗದಲ್ಲಿ ಮಂಗೋಲಿಯಾದ ಇಬ್ರಾಕಿಮ್ ಮರಾಲ್ ವಿರುದ್ಧ 5–0 ಅಂಕಗಳಿಂದ ಗೆದ್ದು ಮತ್ತೊಂದು ಗೆಲುವು ಸಾಧಿಸಿದರು.
ಏಷ್ಯನ್ ಬಾಕ್ಸಿಂಗ್ ನಡೆಸುತ್ತಿರುವ ಮೊದಲ ಕೂಟ ಇದು. ಇದಕ್ಕೆ ಏಷ್ಯಾ ಒಲಿಂಪಿಕ್ ಕೌನ್ಸಿಲ್ ಮತ್ತು ಹೊಸದಾಗಿ ರಚನೆಯಾಗಿರುವ ವಿಶ್ವ ಬಾಕ್ಸಿಂಗ್ ಸಮ್ಮತಿ ನೀಡಿದೆ. ಟೂರ್ನಿಗೆ ಭಾರತ 56 ಸದಸ್ಯರನ್ನು ಕಳುಹಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.