ADVERTISEMENT

ವಿಶ್ವ ಬಾಕ್ಸಿಂಗ್ ಕಪ್: ಸಾಕ್ಷಿಗೆ ಚಿನ್ನ, ಮೀನಾಕ್ಷಿಗೆ ಬೆಳ್ಳಿ

ಸಾಕ್ಷಿ ಅವರು ಈ ಹಿಂದೆ ಎರಡು ವಿಶ್ವ ಯೂತ್ ಬಾಕ್ಸಿಂಗ್ ಚಾಂಪಿಯನ್ ಕೂಡ ಆಗಿದ್ದರು. 24 ವರ್ಷದ ಸಾಕ್ಷಿ ಇಲ್ಲಿ 54 ಕೆ.ಜಿ. ವಿಭಾಗದಲ್ಲಿ ಸ್ಪರ್ಧಿಸಿದ್ದರು.

ಪಿಟಿಐ
Published 6 ಜುಲೈ 2025, 14:39 IST
Last Updated 6 ಜುಲೈ 2025, 14:39 IST
ಭಾರತದ ಬಾಕ್ಸಿಂಗ್ ಸ್ಪರ್ಧಿ ಸಾಕ್ಷಿ 
ಭಾರತದ ಬಾಕ್ಸಿಂಗ್ ಸ್ಪರ್ಧಿ ಸಾಕ್ಷಿ    

ಆಸ್ತಾನಾ: ಭಾರತದ ಸಾಕ್ಷಿ  ಭಾನುವಾರ ಇಲ್ಲಿ ನಡೆದ ಎರಡನೇ ವಿಶ್ವ ಬಾಕ್ಸಿಂಗ್ ಕಪ್ ಮಹಿಳೆಯರ ವಿಭಾಗದಲ್ಲಿ ಚಿನ್ನ ಗೆದ್ದರು.

ಸಾಕ್ಷಿ ಅವರು ಈ ಹಿಂದೆ ಎರಡು ವಿಶ್ವ ಯೂತ್ ಬಾಕ್ಸಿಂಗ್ ಚಾಂಪಿಯನ್ ಕೂಡ ಆಗಿದ್ದರು. 24 ವರ್ಷದ ಸಾಕ್ಷಿ ಇಲ್ಲಿ 54 ಕೆ.ಜಿ. ವಿಭಾಗದಲ್ಲಿ ಸ್ಪರ್ಧಿಸಿದ್ದರು. 

ನಿರ್ಣಾಯಕ ಬೌಟ್‌ನಲ್ಲಿ ಅವರು ಅಮೆರಿಕದ ಯೊಸಲಿನ್ ಪೆರೆಜ್ ವಿರುದ್ಧ ಜಯಿಸಿದರು. 

ADVERTISEMENT

ಇದರೊಂದಿಗೆ ಭಾರತದ ಬಾಕ್ಸಿಂಗ್ ತಂಡವು ಉತ್ತಮ ಸಾಧನೆ  ಮಾಡಿದೆ. ಟೂರ್ನಿಯಲ್ಲಿ ಒಟ್ಟು 11 ಪದಕಗಳನ್ನು ಗೆಲ್ಲುವುದು ಖಚಿತವಾಗಿದೆ. ಈ ಟೂರ್ನಿಯ ಮೊದಲ ಆವೃತ್ತಿಯು ಬ್ರೆಜಿಲ್‌ನಲ್ಲಿ ನಡೆದ ಸಂದರ್ಭದಲ್ಲಿ ಭಾರತ ತಂಡವು ಒಂದು ಚಿನ್ನ ಮತ್ತು ಬೆಳ್ಳಿ ಸೇರಿದಂತೆ ಆರು ಪದಕಗಳನ್ನು ಗೆದ್ದಿತ್ತು. 

ಈ ಸಲದ ಟೂರ್ನಿಯ ಮೊದಲ ಅವಧಿಯಲ್ಲಿ ಭಾರತದ ನಾಲ್ವರು ಬಾಕ್ಸರ್‌ಗಳು ಕಣದಲ್ಲಿದ್ದರು. ಅದರಲ್ಲಿ ಸಾಕ್ಷಿ ಅವರು ಚಿನ್ನಕ್ಕೆ ಕೊರಳೊಡ್ಡುವಲ್ಲಿ ಸಫಲರಾದರು. ಎದುರಾಳಿ ಮೇಲೆ  ವೇಗ ಮತ್ತು ನಿಖರತೆ ಮೇಳೈಸಿದ್ದ ಪಂಚ್‌ಗಳ ಸುರಿಮಳೆ ಮಾಡಿದ ಸಾಕ್ಷಿ ಗೆದ್ದರು. 

ಇದಕ್ಕೂ ಮುನ್ನ ಭಾರತದ ಮೀನಾಕ್ಷಿ ಅವರು 48 ಕೆ.ಜಿ. ವಿಭಾಗದ ಫೈನಲ್‌ನಲ್ಲಿ ಸ್ಥಳೀಯ ಸ್ಪರ್ಧಿ ನಜೀಂ ಕೈಝೈಬೆ ಅವರಿಂದ ಕಠಿಣ ಪೈಪೋಟಿ ಎದುರಿಸಿದರು. ಸ್ಥಳೀಯ ಬಾಕ್ಸರ್ 3–2ರಿಂದ ಗೆದ್ದರು. ಮೀನಾಕ್ಷಿ ಬೆಳ್ಳಿ ಗಳಿಸಿದರು.

ಪುರುಷರ 85 ಕೆ.ಜಿ ವಿಭಾಗದಲ್ಲಿ ಜುಗನು ಮತ್ತು ಮಹಿಳೆಯರ 80 ಕೆ.ಜಿ ವಿಭಾಗದಲ್ಲಿ ಪೂಜಾರಾಣಿ ಅವರೂ ಬೆಳ್ಳಿಪದಕ ಜಯಿಸಿದರು. 

ಜುಗನು ಅವರು ಫೈನಲ್‌ ಬೌಟ್‌ನಲ್ಲಿ 0–5ರಿಂದ ಕಜಕಸ್ತಾನದ ಬೆಕ್ಜಾದ್ ನುರ್ದುಲೆಟೋವ್ ವಿರುದ್ಧ ಸೋತರು. ಪೂಜಾ 0–5ರಿಂದ ಆಸ್ಟ್ರೇಲಿಯಾದ ಎಸೆಟಾ ಫ್ಲಿಂಟ್ ಎದುರು ಪರಾಭವಗೊಂಡರು. 

ಭಾರತದ ಇನ್ನೂ ನಾಲ್ವರು ಬಾಕ್ಸರ್‌ಗಳು ಫೈನಲ್ ತಲುಪಿದ್ದು ಚಿನ್ನದ ಮೇಲೆ ಕಣ್ಣಿಟ್ಟಿದ್ದಾರೆ.  ಹಿತೇಶ್ ಗುಲಿಯಾ (70ಕೆ.ಜಿ), ಅಭಿನಾಶ್ ಜಾಮವಾಲ್ (65 ಕೆ.ಜಿ), ಜಾಸ್ಮಿನ್ (ಮಹಿಳೆಯರ 57 ಕೆ.ಜಿ) ಮತ್ತು ನೂಪುರ್ (ಮಹಿಳೆಯರ 85+ ಕೆ.ಜಿ) ವಿಭಾಗಗಳಲ್ಲಿ ಫೈನಲ್ ತಲುಪಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.