ADVERTISEMENT

ಬಾಕ್ಸಿಂಗ್: ಭಾರತಕ್ಕೆ 12 ಪದಕ

ಪಿಟಿಐ
Published 24 ಮೇ 2019, 16:30 IST
Last Updated 24 ಮೇ 2019, 16:30 IST
ಭಾರತದ  ಮೇರಿ ಕೋಮ್ (ಬಲ) ಮತ್ತು ವಾನಲಾಲ್ ದುವಾತಿ ವಿರುದ್ಧದ ಸೆಣಸಾಟ  –ಪಿಟಿಐ ಚಿತ್ರ
ಭಾರತದ  ಮೇರಿ ಕೋಮ್ (ಬಲ) ಮತ್ತು ವಾನಲಾಲ್ ದುವಾತಿ ವಿರುದ್ಧದ ಸೆಣಸಾಟ  –ಪಿಟಿಐ ಚಿತ್ರ   

ಗುವಾಹಟಿ: ಆತಿಥೇಯ ಬಾಕ್ಸಿಂಗ್ ಪಟುಗಳು ಶುಕ್ರವಾರ ಇಲ್ಲಿ ಮುಕ್ತಾಯವಾದ ಇಂಡಿಯಾ ಓಪನ್ ಬಾಕ್ಸಿಂಗ್ ಚಾಂಪಿಯನ್‌ಷಿಪ್‌ನಲ್ಲಿ 12 ಪದಕಗಳನ್ನು ಗೆದ್ದರು.

ಹೋದ ವರ್ಷ ನಡೆದಿದ್ದ ಟೂರ್ನಿಯಲ್ಲಿ ಭಾರತ ತಂಡವು ಆರು ಪದಕಗಳನ್ನು ಗೆದ್ದಿತ್ತು. ಈ ಬಾರಿ ಅದು ದುಪ್ಪಟ್ಟಾಗಿದೆ.

ಮಹಿಳೆಯರ ಮಹಿಳೆಯರ 51 ಕೆ.ಜಿ. ವಿಭಾಗದ ಫೈನಲ್‌ನಲ್ಲಿ ಮೇರಿ ಕೋಮ್ ಅವರು ವನಲಾಲ್ ವಿನತ್ ಅವರನ್ನು ಮಣಿಸಿ ಚಿನ್ನ ಗೆದ್ದರು.

ADVERTISEMENT

ಪುರುಷರ ವಿಭಾಗದಲ್ಲಿ ಅಮಿತ್ ಪಂಘಾಲ್ ಅವರು 4–1ರಿಂದ ಸಚಿನ್ ಸಿವಾಚ್ ವಿರುದ್ಧ ಜಯಿಸಿದರು. ಪುರುಷರ ವಿಭಾಗದಲ್ಲಿ (52ಕೆ.ಜಿ. 81 ಕೆ.ಜಿ., 91. ಕೆ.ಜಿ ಮತ್ತು 91 ಕೆ.ಜಿ. ಮೇಲಿನವರ) ವಿಭಾಗದಲ್ಲಿ ಚಿನ್ನದ ಪದಕಗಳು ಒಲಿದವು.

ಆದರೆ ಈ ಬಾರಿಯ ಟೂರ್ನಿಯಲ್ಲಿ ಉಜ್ಬೇಕಿಸ್ತಾನದ ಬಾಕ್ಸಿಂಗ್ ಪಟುಗಳು ಮಂಕಾದರು. ಹೋದ ವರ್ಷ ಉತ್ತಮವಾದ ಸಾಧನೆ ಮಾಡಿದ್ದರು.

‘ಈ ಪದಕವನ್ನು ನಾನು ಅಪ್ಪ–ಅಮ್ಮನಿಗೆ ಅರ್ಪಿಸುತ್ತೇನೆ. ಇತ್ತೀಚೆಗೆ ಅಪ್ಪ ನನ್ನನ್ನು ಅಗಲಿದ್ದರು’ ಎಂದು ಮೇರಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.