ADVERTISEMENT

ಫೈನಲ್‌ ಪ್ರವೇಶಿಸಿದ ಪಿಂಕಿ

ಅಹಮತ್‌ ಕೋಮರ್ತ್‌ ಬಾಕ್ಸಿಂಗ್‌ ಟೂರ್ನಿ

ಪಿಟಿಐ
Published 15 ಸೆಪ್ಟೆಂಬರ್ 2018, 16:07 IST
Last Updated 15 ಸೆಪ್ಟೆಂಬರ್ 2018, 16:07 IST
   

ನವದೆಹಲಿ: ಅಮೋಘ ಸಾಮರ್ಥ್ಯ ತೋರಿದ ಭಾರತದ ಪಿಂಕಿ ಜಾಂಗ್ರಾ, ಟರ್ಕಿಯ ಇಸ್ತಾನ್‌ಬುಲ್‌ನಲ್ಲಿ ನಡೆಯುತ್ತಿರುವ ಅಹಮತ್‌ ಕೋಮರ್ತ್‌ ಬಾಕ್ಸಿಂಗ್‌ ಟೂರ್ನಿಯಲ್ಲಿ ಫೈನಲ್‌ ಪ್ರವೇಶಿಸಿದ್ದಾರೆ.

ಶುಕ್ರವಾರ ನಡೆದ 51 ಕೆ.ಜಿ ವಿಭಾಗದ ಸೆಮಿಫೈನಲ್‌ನಲ್ಲಿ ಪಿಂಕಿ, ಆಸ್ಟ್ರೇಲಿಯಾದ ಟಯಲಾಹ್‌ ರಾಬರ್ಟ್‌ಸನ್‌ ಅವರನ್ನು ಮಣಿಸಿದರು.

ಇದಕ್ಕೂ ಮುನ್ನ ನಡೆದಿದ್ದ ಕ್ವಾರ್ಟರ್‌ ಫೈನಲ್‌ನಲ್ಲಿ ಭಾರತದ ಬಾಕ್ಸರ್‌ 5–0ರಿಂದ ಸ್ಟೆಲುಟಾ ಡ್ಯೂಟಾ ಅವರನ್ನು ಸೋಲಿಸಿದ್ದರು.

ADVERTISEMENT

ಸೋನಿಯಾ ಲಾಥರ್‌ (57 ಕೆ.ಜಿ), ಮೋನಿಕಾ (48 ಕೆ.ಜಿ), ಮೀನಾ ಕುಮಾರಿ (54 ಕೆ.ಜಿ), ಸಿಮ್ರನ್‌ಜಿತ್‌ ಕೌರ್‌ (64 ಕೆ.ಜಿ) ಮತ್ತು ಭಾಗ್ಯವತಿ ಕಚಾರಿ (81 ಕೆ.ಜಿ) ಅವರು ಸೆಮಿಫೈನಲ್‌ ಪ್ರವೇಶಿಸಿದರು.

ಕ್ವಾರ್ಟರ್‌ ಫೈನಲ್‌ನಲ್ಲಿ ಸೋನಿಯಾ ಅವರು ಟರ್ಕಿಯ ಬಿನಾಜ್‌ ಒಜದೆಮಿರ್‌ ವಿರುದ್ಧ ಗೆದ್ದರು. ಮೋನಿಕಾ 4–1ರಲ್ಲಿ ಬಲ್ಗೇರಿಯಾದ ಎಮಿ ಮಾರಿ ತೊದೊರೊವಾ ಮೇಲೂ, ಸಿಮ್ರನ್‌ಜಿತ್‌ 5–0ರಲ್ಲಿ ರಷ್ಯಾದ ಅಲೆಕ್ಸಾಂಡ್ರಾ ಒರ್ಡಿನಾ ವಿರುದ್ಧವೂ, ಮೀನಾ, ಟರ್ಕಿಯ ತುಗಸೆನಾಜ್‌ ಸುರ್ಮೆನೆಲಿ ಎದುರೂ, ಭಾಗ್ಯವತಿ, ಟರ್ಕಿಯ ತುಗ್ಬಾ ಒಕ್‌ ವಿರುದ್ಧವೂ ಗೆಲುವು ಒಲಿಸಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.