ADVERTISEMENT

ಬಾಕ್ಸಿಂಗ್‌: ನರೇಂದ್ರ, ರೋಹಿತ್ ಪ್ರೀ ಕ್ವಾರ್ಟರ್ ಫೈನಲ್‌ಗೆ

ಪಿಟಿಐ
Published 28 ಅಕ್ಟೋಬರ್ 2021, 22:16 IST
Last Updated 28 ಅಕ್ಟೋಬರ್ 2021, 22:16 IST

ಬೆಲ್‌ಗ್ರೇಡ್‌: ಭಾರತದ ನರೇಂದ್ರ ಬೆರ್ವಾಲ್ ಮತ್ತು ರೋಹಿತ್ ಮೋರೆ ಅವರು ಎಐಬಿಎ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಷಿಪ್‌ನ ಪ್ರೀ ಕ್ವಾರ್ಟರ್‌ ಫೈನಲ್ ಪ್ರವೇಶಿಸಿದರು. ಗುರುವಾರ ನಡೆದ 92+ ಕೆಜಿ ವಿಭಾಗದಲ್ಲಿ ನರೇಂದ್ರ ಅವರು ಸಿರಿಯಾದ ಲಿಯಾನಿ ಮೊಹಮ್ಮದ್ ಕೆಂಡೆ ವಿರುದ್ಧ ಜಯ ಗಳಿಸಿದರೆ 57 ಕೆಜಿ ವಿಭಾಗದಲ್ಲಿ ರೋಹಿತ್ ಅವರು ಬೋಸ್ನಿಯಾದ ಅಲೆನ್ ರಹಿಮಿಕ್ ಎದುರು ಗೆದ್ದರು.

ಬುಧವಾರ ತಡರಾತ್ರಿ ನಡೆಯಬೇಕಾಗಿದ್ದ ಬೌಟ್‌ನಲ್ಲಿ ಭಾರತದ ವರಿಂದರ್ ಸಿಂಗ್ ಎದುರಾಳಿಗೆ ವಾಕ್ ಓವರ್‌ ನೀಡಿದರು. 60 ಕೆಜಿ ವಿಭಾಗದಲ್ಲಿ ಅರ್ಮೇನಿಯಾದ ಕರೆನ್ ಟೊನಕನ್ಯನ್ ವಿರುದ್ಧ ಕಣಕ್ಕೆ ಇಳಿಯಬೇಕಾಗಿದ್ದ ವರಿಂದರ್ ತೀವ್ರ ಜ್ವರದಿಂದ ಬಳಲುತ್ತಿದ್ದಾರೆ.

86 ಕೆಜಿ ವಿಭಾಗದಲ್ಲಿ ಲಕ್ಷ್ಯ ಚಾಹರ್ ಕೊರಿಯಾದ ಕಿಮ್ ಹೆಂಗ್‌ಕ್ಯೂ ವಿರುದ್ಧ ಸೋಲುಂಡಿದ್ದರು. ಫಲಿತಾಂಶದಲ್ಲಿ ಅಸಮಾಧಾನಗೊಂಡಿದ್ದ ಭಾರತ ಪ್ರತಿಭಟನೆ ವ್ಯಕ್ತಪಡಿಸಿತು. ಆದರೆ ಇದನ್ನು ನಿರ್ಣಾಯಕರು ತಳ್ಳಿ ಹಾಕಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.