ADVERTISEMENT

ಕೋಚ್‌ ಸೀಸರ್‌ ಮೆನೊಟ್ಟಿ ನಿಧನ

​ಪ್ರಜಾವಾಣಿ ವಾರ್ತೆ
Published 6 ಮೇ 2024, 16:12 IST
Last Updated 6 ಮೇ 2024, 16:12 IST
<div class="paragraphs"><p>ಸೀಸರ್‌ ಮೆನೊಟ್ಟಿ</p></div>

ಸೀಸರ್‌ ಮೆನೊಟ್ಟಿ

   

ರಾಯಿಟರ್ಸ್‌

ಬ್ಯೂನೊ ಏರ್ಸ್‌: ಅರ್ಜೆಂಟೀನಾ ತಂಡ 1978ರಲ್ಲಿ ಮೊದಲ ಸಲ ವಿಶ್ವಕಪ್‌ ಫುಟ್‌ಬಾಲ್ ಕಿರೀಟ ಧರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ವರ್ಚಸ್ವಿ ಕೋಚ್‌ ಸೀಸರ್‌ ಲೂಯಿಸ್ ಮೆನೊಟ್ಟಿ (85) ಅವರು ಭಾನುವಾರ ನಿಧನರಾದರು ಎಂದು ಆರ್ಜೆಂಟೀನಾ ಫುಟ್‌ಬಾಲ್‌ ಸಂಸ್ಥೆ ತಿಇಸಿದೆ.

ADVERTISEMENT

ಕೋಚ್‌ ಸೀಸರ್ ಅವರ ಸಾವಿಗೆ ಸಂಸ್ಥೆ ಕಾರಣ ತಿಳಿಸಿಲ್ಲ. ರಕ್ತಹೀನತೆಯಿಂದ ಅವರನ್ನು ಮಾರ್ಚ್‌ನಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು ಎಂದು ಸ್ಥಳೀಯ ಮಾಧ್ಯಮಗಳು ತಿಳಿಸಿವೆ.

ಮೆನೊಟ್ಟಿ 1974 ರಿಂದ 1983ರವರೆಗೆ ಕೋಚ್‌ ಆಗಿದ್ದರು. 1978ರಲ್ಲಿ ವಿಶ್ವಕಪ್‌ ಗೆದ್ದಾಗ ತಂಡಕ್ಕೆ ಅರ್ಹವಾಗಿ ಸಿಗಬೇಕಾದ ಗೌರವಾದರಗಳು ದೊರೆತಿರಲಿಲ್ಲ ಎಂಬುದು ಅವರ ಬೇಸರಕ್ಕೆ ಕಾರಣವಾಗಿತ್ತು. ಆ ವೇಳೆ ದೇಶದಲ್ಲಿ ಸೇನೆಯ ಆಡಳಿತವಿದ್ದು, ಮಾನವ ಹಕ್ಕುಗಳ ಉಲ್ಲಂಘನೆ ಪ್ರಕರಣಗಳು ವ್ಯಾಪಕವಾಗಿದ್ದವು. 1983ರಲ್ಲಿ ಅವರು ಬಾರ್ಸಿಲೋನಾ ಕ್ಲಬ್‌ನ ಕೋಚ್‌ ಆದರು.

ವಿಶ್ವಕಪ್‌ ವೇಳೆ ಮೆನೊಟ್ಟಿ ಅವರು 17 ವರ್ಷದ ಡೀಗೊ ಮರಡೊನಾ ಅವರನ್ನು ಆಡಿಸಿರಲಿಲ್ಲ. ಈ ನಿರ್ಧಾರ ತಮ್ಮಿಬ್ಬರ ಸಂಬಂಧವನ್ನು ವರ್ಷಗಳ ಕಾಲ ಹಳಸುವಂತೆ ಮಾಡಿತ್ತು ಎಂದು ಅವರು ನಂತರ ಹೇಳಿದ್ದರು.

ಮೆನೊಟ್ಟಿ ಅವರು ಮೆಕ್ಸಿಕೊ ತಂಡಕ್ಕೆ 1991–92ರಲ್ಲಿ ಕೋಚ್‌ ಆಗಿದ್ದರು.

ಸೀಸರ್‌ ಲೂಯಿಸ್ ಮೆನೊಟ್ಟಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.