ADVERTISEMENT

ಟಿ.ಟಿ: ಕರುಣಾ, ಆಕಾಶ್‌ಗೆ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 29 ಜುಲೈ 2019, 19:45 IST
Last Updated 29 ಜುಲೈ 2019, 19:45 IST
ಕರುಣಾ ಗಜೇಂದ್ರನ್‌, ಹೃಷಿಕೇಶ್‌ ಮತ್ತು ಕೆ.ಜೆ.ಆಕಾಶ್‌
ಕರುಣಾ ಗಜೇಂದ್ರನ್‌, ಹೃಷಿಕೇಶ್‌ ಮತ್ತು ಕೆ.ಜೆ.ಆಕಾಶ್‌   

ಬೆಂಗಳೂರು: ಅಮೋಘ ಆಟ ಆಡಿದ ಕರುಣಾ ಗಜೇಂದ್ರನ್‌ ಮತ್ತು ಕೆ.ಜೆ.ಆಕಾಶ್‌ ಅವರು ಕೆನರಾ ಯೂನಿಯನ್‌ ರಾಜ್ಯ ರ‍್ಯಾಂಕಿಂಗ್‌ ಟೇಬಲ್‌ ಟೆನಿಸ್‌ ಟೂರ್ನಿಯಲ್ಲಿ ಕ್ರಮವಾಗಿ ಜೂನಿಯರ್‌ ಬಾಲಕಿಯರು ಮತ್ತು ಬಾಲಕರ ವಿಭಾಗಗಳಲ್ಲಿ ಪ್ರಶಸ್ತಿ ಗೆದ್ದಿದ್ದಾರೆ.

ಬಾಲಕರ ಸಿಂಗಲ್ಸ್‌ ವಿಭಾಗದ ಫೈನಲ್‌ನಲ್ಲಿ ಸ್ಕೀಸ್‌ ಅಕಾಡೆಮಿಯ ಆಕಾಶ್‌ 11–6, 11–7, 10–12, 11–6, 11–8ರಲ್ಲಿ ಸುಜನ್‌ ಭಾರದ್ವಾಜ್‌ ಅವರನ್ನು ಮಣಿಸಿದರು.

ಇದಕ್ಕೂ ಮೊದಲು ನಡೆದಿದ್ದ ಸೆಮಿಫೈನಲ್‌ ಪಂದ್ಯಗಳಲ್ಲಿ ಆಕಾಶ್‌ 11–8, 14–12, 11–8, 11–5ರಲ್ಲಿ ಪಿ.ವಿ.ಶ್ರೀಕಾಂತ್‌ ಕಶ್ಯಪ್‌ ಎದುರೂ, ಸುಜನ್‌ 11–8, 12–10, 4–11, 11–9, 10–12, 11–3ರಲ್ಲಿ ಸಮ್ಯಕ್‌ ಕಶ್ಯಪ್‌ ಮೇಲೂ ಗೆದ್ದಿದ್ದರು.

ADVERTISEMENT

ಬಾಲಕಿಯರ ಸಿಂಗಲ್ಸ್‌ ಫೈನಲ್‌ನಲ್ಲಿ ಎಸ್‌ಬಿಟಿ ಕ್ಲಬ್‌ನ ಕರುಣಾ 11–6, 6–11, 11–6, 11–4, 6–11, 12–10ರಲ್ಲಿ ಸ್ಕೀಸ್‌ ಅಕಾಡೆಮಿಯ ಡಿ.ಕಲ್ಯಾಣಿ ವಿರುದ್ಧ ಗೆದ್ದರು.

ನಾಲ್ಕರ ಘಟ್ಟದ ಹಣಾಹಣಿಗಳಲ್ಲಿ ಕರುಣಾ 13–11, 11–1, 11–6, 11–8ರಲ್ಲಿ ದೇಸ್ನಾ ಎಂ.ವಂಶಿಕಾ ಎದುರೂ, ಕಲ್ಯಾಣಿ 11–6, 7–11, 11–7, 11–8, 11–8ರಲ್ಲಿ ಎ.ನಿಹಾರಿಕಾ ವಿರುದ್ಧವೂ ವಿಜಯಿಯಾದರು.

ಬಾಲಕರ ನಾನ್‌ ಮೆಡಲಿಸ್ಟ್‌ ಸಿಂಗಲ್ಸ್‌ ವಿಭಾಗದ ಪ್ರಶಸ್ತಿ ಹೃಷಿಕೇಶ್‌ ವಿನಯ್‌ ಅವರ ಪಾಲಾಯಿತು.

ಅಂತಿಮ ಘಟ್ಟದ ಹೋರಾಟದಲ್ಲಿ ಹೃಷಿಕೇಶ್‌ 11–7, 10–12, 13–11, 11–7ರಲ್ಲಿ ವಿಷ್ಣು ಭಟ್‌ ವಿರುದ್ಧ ಗೆದ್ದರು.

ಸೆಮಿಫೈನಲ್‌ನಲ್ಲಿ ವಿಷ್ಣು 11–8, 6–11, 11–5, 11–4ರಲ್ಲಿ ಅಂಕಣ್‌ ಜೈನ್‌ ಎದುರೂ, ಹೃಷಿಕೇಶ್‌ 8–11, 11–4, 11–5, 11–4ರಲ್ಲಿ ಅಭಿನವ್‌ ಕೆ.ಮೂರ್ತಿ ಮೇಲೂ ಜಯಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.