ADVERTISEMENT

ಕ್ಯಾಂಡಿಡೇಟ್ಸ್‌ ಚೆಸ್‌ ಟೂರ್ನಿ: ಜಂಟಿ ಅಗ್ರಸ್ಥಾನಕ್ಕೆ ಗುಕೇಶ್‌

ಪಿಟಿಐ
Published 10 ಏಪ್ರಿಲ್ 2024, 23:30 IST
Last Updated 10 ಏಪ್ರಿಲ್ 2024, 23:30 IST
<div class="paragraphs"><p>ಭಾರತದ ಡಿ. ಗುಕೇಶ್‌ ರ</p></div>

ಭಾರತದ ಡಿ. ಗುಕೇಶ್‌ ರ

   

–ಪಿಟಿಐ ಚಿತ್

ಟೊರಾಂಟೊ: ಭಾರತದ ಗ್ರ್ಯಾಂಡ್‌ ಮಾಸ್ಟರ್‌ ಡಿ.ಗುಕೇಶ್‌ ಕ್ಯಾಂಡಿಡೇಟ್ಸ್‌ ಚೆಸ್‌ ಟೂರ್ನಿಯ ಐದನೇ ಸುತ್ತಿನಲ್ಲಿ ಅಜರ್‌ಬೈಜಾನ್‌ನ ನಿಜತ್ ಅಬಸೋವ್ ಅವರನ್ನು ಮಣಿಸಿ ಜಂಟಿ ಅಗ್ರಸ್ಥಾನಕ್ಕೆ ಏರಿದರು.

ADVERTISEMENT

ಇನ್ನೂ ಒಂಬತ್ತು ಸುತ್ತುಗಳು ಬಾಕಿಯಿದ್ದು, 17 ವರ್ಷದ ಗುಕೇಶ್ ಮತ್ತು ರಷ್ಯಾದ ಇಯಾನ್ ನೆಪೊಮ್‌ನಿಯಾಚಿ (ಫಿಡೆ) ಅವರೊಂದಿಗೆ 3.5 ಪಾಯಿಂಟ್‌ಗಳೊಂದಿಗೆ ಅಗ್ರಸ್ಥಾನ ಹಂಚಿಕೊಂಡಿದ್ದಾರೆ. ಅಗ್ರಶ್ರೇಯಾಂಕದ ಫ್ಯಾಬಿಯಾನೊ ಕರುವಾನ (ಅಮೆರಿಕ) ಅರ್ಧ ಪಾಯಿಂಟ್‌ನಿಂದ ಹಿಂದೆ ಇದ್ದಾರೆ.

ದಿನದ ಇತರ ಪಂದ್ಯಗಳಲ್ಲಿ ಅಮೆರಿಕದ ಹಿಕಾರು ನಕಾಮುರಾ ಅವರು ಫ್ರಾನ್ಸ್‌ನ ಫಿರೋಜಾ ಅಲಿರೆಜಾ ವಿರುದ್ಧ ಗೆಲುವು ಸಾಧಿಸಿದರೆ, ಭಾರತದ ಆರ್. ಪ್ರಜ್ಞಾನಂದ ಅವರು ಇಯಾನ್ ಅವರೊಂದಿಗೆ ಡ್ರಾ ಮಾಡಿಕೊಂಡರು. ಭಾರತದ ಮತ್ತೊಬ್ಬ ಆಟಗಾರ ವಿದಿತ್ ಗುಜರಾತಿ ಕೂಡ ಕರುವಾನಾ ವಿರುದ್ಧ ಡ್ರಾ ಸಾಧಿಸಿದರು.

ಪ್ರಜ್ಞಾನಂದ ಮತ್ತು ನಕಾಮುರಾ 2.5 ಪಾಯಿಂಟ್‌ಗಳೊಂದಿಗೆ ಜಂಟಿ ನಾಲ್ಕನೇ ಸ್ಥಾನವನ್ನು ಹಂಚಿಕೊಂಡರೆ, ವಿದಿತ್‌ ಎರಡು ಪಾಯಿಂಟ್‌ಗಳೊಂದಿಗೆ ನಂತರದ ಸ್ಥಾನದಲ್ಲಿದ್ದಾರೆ. ಅಬಸೋವ್‌, ಅಲಿರೇಝಾ ತಲಾ 1.5 ಪಾಯಿಂಟ್‌ ಗಳಿಸಿದ್ದಾರೆ.

ಮಹಿಳೆಯರ ಸ್ಪರ್ಧೆಯಲ್ಲಿ ಎಲ್ಲಾ ನಾಲ್ಕು ಪಂದ್ಯಗಳು ಡ್ರಾದಲ್ಲಿ ಕೊನೆಗೊಂಡಿತು. ಹೀಗಾಗಿ, ಅಂಕಪಟ್ಟಿಯಲ್ಲಿ ಏನೂ ಬದಲಾಗಿಲ್ಲ.

ಪ್ರಜ್ಞಾನಂದ ಅವರ ಅಕ್ಕ ಆರ್. ವೈಶಾಲಿ ಅವರು ಅನ್ನಾ ಮುಝಿಚುಕ್ (ಉಕ್ರೇನ್‌) ವಿರುದ್ಧ ಡ್ರಾ ಸಾಧಿಸಿದರೆ,  ಕೋನೇರು ಹಂಪಿ ಅವರು ಫಿಡೆಯ ಅಲೆಕ್ಸಾಂಡ್ರಾ ಗೊರ್ಯಾಚ್ಕಿನಾ ವಿರುದ್ಧ ಡ್ರಾದೊಂದಿಗೆ ಚೇತರಿಸಿಕೊಂಡರು.

ಚೀನಾದ ಜೊಂಗ್‌ಯಿ ತಾನ್ (3.5) ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದ್ದರೆ, ಅಲೆಕ್ಸಾಂಡ್ರಾ (3) ಎರಡನೇ ಸ್ಥಾನದಲ್ಲಿದ್ದಾರೆ. ವೈಶಾಲಿ, ಕ್ಯಾತರಿನಾ ಲಾಗ್ನೊ (ಫಿಡೆ) ಮತ್ತು ಬಲ್ಗೇರಿಯಾದ ನುರ್ಗ್ಯುಲ್ ಸಲಿಮೋವಾ 2.5 ಅಂಕಗಳೊಂದಿಗೆ ಜಂಟಿ ಮೂರನೇ ಸ್ಥಾನದಲ್ಲಿದ್ದಾರೆ. ಕೋನೇರು 2 ಅಂಕ ಗಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.