ADVERTISEMENT

ವಾಟರ್‌ಪೋಲೊ: ನೆಟ್ಟಕಲ್ಲಪ್ಪ ಈಜು ಕೇಂದ್ರ ಪಾರಮ್ಯ

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2025, 19:37 IST
Last Updated 27 ನವೆಂಬರ್ 2025, 19:37 IST
ಬಾಲಕಿಯರ ಫೈನಲ್‌ನಲ್ಲಿ ನಿರ್ಣಾಯಕ ಗೋಲು ಗಳಿಸಿದ ನೆಟ್ಟಕಲ್ಲಪ್ಪ ಈಜು ಕೇಂದ್ರ ತಂಡದ ಸಾಕ್ಷಿ ಸಂತೋಷ್‌ (ಎಡ) –ಚಿತ್ರ: ಪುಷ್ಕರ್‌ ವಿ.
ಬಾಲಕಿಯರ ಫೈನಲ್‌ನಲ್ಲಿ ನಿರ್ಣಾಯಕ ಗೋಲು ಗಳಿಸಿದ ನೆಟ್ಟಕಲ್ಲಪ್ಪ ಈಜು ಕೇಂದ್ರ ತಂಡದ ಸಾಕ್ಷಿ ಸಂತೋಷ್‌ (ಎಡ) –ಚಿತ್ರ: ಪುಷ್ಕರ್‌ ವಿ.   

ಬೆಂಗಳೂರು: ನೆಟ್ಟಕಲ್ಲಪ್ಪ ಈಜು ಕೇಂದ್ರ (ಎನ್‌ಎಸಿ) ತಂಡವು ಕ್ಯಾಪ್ಟನ್‌ ಸಿ.ಷಣ್ಮುಗಂ ರಾಜ್ಯ 15 ವರ್ಷದೊಳಗಿನವರ ವಾಟರ್‌ಪೋಲೊ ಚಾಂಪಿಯನ್‌ಷಿಪ್‌ನಲ್ಲಿ ಬಾಲಕ ಹಾಗೂ ಬಾಲಕಿಯರ ವಿಭಾಗದಲ್ಲಿ ಪ್ರಶಸ್ತಿ ಗೆದ್ದು ಪಾರಮ್ಯ ಮೆರೆಯಿತು.

ಗುರುವಾರ ನಡೆದ ಬಾಲಕರ ವಿಭಾಗದ ಫೈನಲ್‌ನಲ್ಲಿ ಎನ್‌ಎಸಿ ತಂಡವು 7–5ರಿಂದ ಸ್ಟಾರ್‌ ಅಕ್ವಾಟಿಕ್ಸ್‌ ತಂಡದ ವಿರುದ್ಧ ರೋಚಕ ಗೆಲುವು ಸಾಧಿಸಿತು. ಕಂಚಿನ ಪದಕಕ್ಕಾಗಿ ನಡೆದ ಹಣಾಹಣಿಯಲ್ಲಿ ಸ್ವಿಮ್‌ಲೈಫ್‌ ಈಜು ಅಕಾಡೆಮಿಯು 12–9ರಿಂದ ಬಸವನಗುಡಿ ಈಜು ಕೇಂದ್ರ (ಬಿಎಸಿ) ತಂಡವನ್ನು ಸೋಲಿಸಿತು.

ತೀವ್ರ ಪೈಪೋಟಿ ಇದ್ದ ಬಾಲಕಿಯರ ವಿಭಾಗದ ಪ್ರಶಸ್ತಿ ಸುತ್ತಿನಲ್ಲಿ ಎನ್‌ಎಸಿ ತಂಡವು 4–3ರಿಂದ ಬಿಎಸಿ ತಂಡವನ್ನು ಮಣಿಸಿತು. ಸ್ವಿಮ್‌ಲೈಫ್‌ ತಂಡವು 16–3ರಿಂದ ಸೀವರ್ಲ್ಡ್‌ ಅಕ್ವಾಟಿಕ್ಸ್‌ ಸವಾಲನ್ನು ಮೆಟ್ಟಿ ಕಂಚು ಜಯಿಸಿತು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.